ಬೆಂಗಳೂರು: 8 ಜನರೊಂದಿಗೆ ಮಹಿಳೆ ವಿವಾಹವೆಂದು ಪತಿ ಆರೋಪ; ಎಂಟಲ್ಲ ನಾಲ್ಕೇ ಎಂದ ಮಹಿಳೆ ಪರ ವಕೀಲೆ

ಕೆಲವೊಂದು ಬಾರಿ ಊಹೆಗೂ ಮೀರಿದ ಕೇಸ್​ಗಳು ಕೋರ್ಟ್​ಗೆ ಬರುತ್ತವೆ. ಅದರಂತೆ ಹೊಸಪೇಟೆಯ ರಾಜಾ ಹುಸೇನ್ ಎಂಬಾತ, ‘ತನ್ನ ಪತ್ನಿ ಎಂಟು ಪುರುಷರನ್ನು ಮದುವೆಯಾಗಿದ್ದಾಳೆಂದು ಆರೋಪಿಸಿ ಹೈಕೋರ್ಟ್ (High Court) ಮೆಟ್ಟಿಲೇರಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಪತ್ನಿ ಪರ ವಕೀಲೆ, ‘ಇದು ಸುಳ್ಳು ಆರೋಪ, ನಾಲ್ಕು ಜನರನ್ನಷ್ಟೇ ಮಹಿಳೆ ವಿವಾಹವಾಗಿದ್ದಾಳೆ ಎಂದಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಬೆಂಗಳೂರು: 8 ಜನರೊಂದಿಗೆ ಮಹಿಳೆ ವಿವಾಹವೆಂದು ಪತಿ ಆರೋಪ; ಎಂಟಲ್ಲ ನಾಲ್ಕೇ ಎಂದ ಮಹಿಳೆ ಪರ ವಕೀಲೆ
ಹೈಕೋರ್ಟ್
Follow us
Ramesha M
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 11, 2024 | 3:29 PM

ಬೆಂಗಳೂರು, ಸೆ.11: ಎಂಟು ಪುರುಷರನ್ನು ಮದುವೆಯಾಗಿದ್ದಾಳೆಂದು ಆರೋಪಿಸಿ ಮಹಿಳೆಯ ವಿರುದ್ಧ ಪತಿ ಹೈಕೋರ್ಟ್ (High Court) ಮೆಟ್ಟಿಲೇರಿದ್ದಾನೆ. ಅತ್ತ ಮಹಿಳೆ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದು, ಪ್ರಕರಣ ರದ್ದುಪಡಿಸುವಂತೆ ಹೊಸಪೇಟೆಯ ರಾಜಾ ಹುಸೇನ್ ಎಂಬಾತ ಮನವಿ ಮಾಡಿದ್ದಾನೆ. ಹೌದು, ಮಹಿಳೆಯ ಐವರು ಪತಿಯರು ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಗೆ ಖುದ್ದಾಗಿ ಹಾಜರಾಗಿದ್ದರು. ಆದರೆ, ಸಮಯದ ಅಭಾವದಿಂದ ವಿಚಾರಣೆ ಸಾಧ್ಯವಾಗಿರಲಿಲ್ಲ. ಈಗ ಮೂವರು ಪತಿಯರು ಹೈಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಮಹಿಳೆ ವಿರುದ್ಧ ಸಿಸಿಬಿ ತನಿಖೆ ನಡೆಸುವಂತೆ ಕೋರಿದ್ದಾರೆಂದು ಪತಿ ರಾಜಾ ಹುಸೇನ್ ಪರ ವಕೀಲ ಹೈಕೋರ್ಟ್ಗೆ ತಿಳಿಸಿದ್ದಾರೆ.

ಎಂಟಲ್ಲ ನಾಲ್ಕೇ ಜನರನ್ನ ವಿವಾಹವಾಗಿದ್ದಾಳೆ ಎಂದ ಮಹಿಳೆ ಪರ ವಕೀಲೆ

ಆದರೆ, ಪತಿಯ ವಾದಕ್ಕೆ ಆಕ್ಷೇಪ ಎತ್ತಿರುವ ಪತ್ನಿ ಪರ ವಕೀಲೆ, ಇದು ಸುಳ್ಳು ಆರೋಪ, ನಾಲ್ಕು ಜನರನ್ನಷ್ಟೇ ಮಹಿಳೆ ವಿವಾಹವಾಗಿದ್ದಾಳೆ. ಮೊದಲ ಪತಿ ತೀರಿಕೊಂಡ ಬಳಿಕ ವಿವಾಹ ಆಗಿದೆ. ತಲಾಖ್ ಪಡೆದ ನಂತರವಷ್ಟೇ ನಾಲ್ಕು ಮದುವೆಯಾಗಿರುವುದಾಗಿ ಹೈಕೋರ್ಟ್​ಗೆ ತಿಳಿಸಿದರು. ಅಲ್ಲದೇ ಎಂಟು ಮದುವೆಯಾಗಿರುವುದಾಗಿ ಆರೋಪಿಸುತ್ತಿರುವ ಪತಿಯ ಪರ ಮಾನನಷ್ಟ ಮೊಕದ್ದಮೆ ದಾಖಲಿಸಲು ಯೋಚಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ:ಕೋಲಾರ: ಹೆಣ್ಣು ಮಕ್ಕಳ ನಗ್ನ ಫೋಟೋ, ವಿಡಿಯೋ ಮಾಡಿದ್ದ ಶಿಕ್ಷಕನಿಗೆ ಹೈಕೋರ್ಟ್​​ನಲ್ಲೂ ಸಂಕಷ್ಟ

ಇದಕ್ಕೆ ಪ್ರತಿಕ್ರಿಯಿಸಿದ ಪತಿ ಪರ ವಕೀಲ, ‘ಎಂಟೂ ಜನರ ದಾಖಲೆಗಳು ತಮ್ಮ ಬಳಿ ಇವೆ. ಕಳೆದ ಬಾರಿ ವಿಚಾರಣೆಗೆ ಐವರು ಪತಿಯರು ಖುದ್ದಾಗಿ ಹಾಜರಾಗಿದ್ದರು. ಆದರೆ, ವಿಚಾರಣೆ ಸಾಧ್ಯವಾಗಿಲ್ಲ. ಇನ್ನೂ ಮೂವರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಮಹಿಳೆ ವಿರುದ್ಧ ಸಿಸಿಬಿ ತನಿಖೆ ನಡೆಸಲು ಆದೇಶಿಸುವಂತೆ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ಮುಂದೂಡಿದ್ದು, ದಾಖಲೆ ಹಾಜರುಪಡಿಸಿ ವಾದ ಮಂಡಿಸುವಂತೆ ಪತಿಯ ಪರ ವಕೀಲರಿಗೆ ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ