AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಕಾನ್ಸ್​ಟೇಬಲ್​ಗಳ ಅಮಾನತು

ಕರ್ತವ್ಯದ ವೇಳೆ ಮಲಗಿದ್ದ ಮಹದೇವಪುರ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್​ಟೇಬಲ್​ಗಳನ್ನು ಅಮಾನತುಗೊಳಿಸಿ ವೈಟ್​​ಫೀಲ್ಡ್​ ಡಿಸಿಪಿ ಎಸ್​.ಗಿರೀಶ್ ಆದೇಶ ಹೊರಡಿಸಿದ್ದಾರೆ.

Bengaluru News: ಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಕಾನ್ಸ್​ಟೇಬಲ್​ಗಳ ಅಮಾನತು
ಮಹದೇವಪುರ ಪೊಲೀಸ್ ಠಾಣೆ
TV9 Web
| Edited By: |

Updated on: Jul 12, 2023 | 7:41 AM

Share

ಬೆಂಗಳೂರು: ಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಕಾನ್ಸ್​ಟೇಬಲ್​ಗಳ ಅಮಾನತುಗೊಳಿಸಿ(Constables Suspend) ವೈಟ್​​ಫೀಲ್ಡ್​ ಡಿಸಿಪಿ ಎಸ್​.ಗಿರೀಶ್ ಆದೇಶ ಹೊರಡಿಸಿದ್ದಾರೆ. ಮಹದೇವಪುರ ಪೊಲೀಸ್ ಠಾಣೆ ಕಾನ್ಸ್​ಟೇಬಲ್ ಈರಪ್ಪ ಉಂಡು, ಹೆಡ್​ ಕಾನ್ಸ್​ಟೇಬಲ್​ ಎ.ಎನ್.ಜಯರಾಮ್ ಅಮಾನತುಗೊಂಡವರು(Mahadevapura Police Station). ಡಿಸಿಪಿ ಗಸ್ತು ವೇಳೆ ನಿದ್ರೆಯಲ್ಲಿದ್ದ ಮಹದೇವಪುರ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.

ಕಾನ್ಸ್​ಟೇಬಲ್ ಈರಪ್ಪ ಉಂಡು, ಹೆಡ್​ ಕಾನ್ಸ್​ಟೇಬಲ್​ ಎ.ಎನ್.ಜಯರಾಮ್ ರಾತ್ರಿ ಪಾಳಿಯಲ್ಲಿದ್ದರು. ಕರ್ತವ್ಯದ ವೇಳೆ ಕಣ್ಣಿಗೆ ನಿದ್ರೆ ತಾಕಿ ನಿದ್ದೆ ಮಾಡಿದ್ದಾರೆ. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಸಿಎಆರ್ ಡಿಸಿಪಿ ಠಾಣೆಗೆ ಭೇಟಿ ನೀಡಿದ್ದಾರೆ. ಆಗ ಇಬ್ಬರು ಪೇದೆಗಳು ನಿದ್ರಿಸುತ್ತಿರುವುದನ್ನು ಕಂಡು ವೈಟ್​​​ಫೀಲ್ಡ್​​​ ಡಿಸಿಪಿಗೆ ವರದಿ ನೀಡಿದ್ದಾರೆ. ನಗರ ಸಶಸ್ತ್ರ ಪಡೆ ಡಿಸಿಪಿ ವರದಿ ಆಧರಿಸಿ ಕಾನ್ಸ್​ಟೇಬಲ್​ಗಳ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.

ಇದನ್ನೂ ಓದಿ: ಅಣ್ಣನ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 30 ವರ್ಷ ಜೈಲು

ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಚಾಕು ತೋರಿಸಿ ಸುಲಿಗೆ ಮಾಡ್ತಿದ್ದ, ಬೈಕ್ ನಲ್ಲಿ ಬರ್ತಾ ಮೊಬೈಲ್ ಚಿನ್ನದ ಸರ ಕ್ಷಣಮಾತ್ರದಲ್ಲಿ ಎಗರಿಸಿಬಿಡ್ತಿದ್ದ ಯಾಸರ್ ಅಲಿಯಾಸ್ ಘೋರ್ ಎಂಬ ಖದೀಮನ ಮೇಲೆ ಪೊಲೀಸ್ ತುಪಾಕಿ ಘರ್ಜಿಸಿದೆ.

ಬೆಳಗ್ಗೆ 3 ಗಂಟೆಗೆ ಎದ್ದು ಡ್ರಗ್ಸ್ ತಗೊಂಡು ಫೀಲ್ಡಿಗೆ ಇಳಿದ್ರೆ ಮುಗೀತು. ಸಂಜೆ 6 ಗಂಟೆವರೆಗು ರಾಬರಿ ಮಾಡ್ತಿದ್ದ. ಒಂದು ವೇಳೆ ಹಣ ಕೊಡಲಿಲ್ಲ ಅಂದರೆ ಚಾಕು ತೋರಿಸಿ ಹೆದರಿಸ್ತಿದ್ದ. ಹೀಗೆ ಇತ್ತೀಚೆಗೆ ವೈಯಾಲಿಕಾವಲ್ ನಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಮೊಬೈಲ್ ಫೋನ್ ಎಗರಿಸಿದ್ದ. ಇಷ್ಟೇ ಅಲ್ಲ ಹಾಲಿನ ವ್ಯಾಪಾರಿಗೆ ಚಾಕು ತೋರಿಸಿ 13 ಸಾವಿರ ಹಣ ಸುಲಿಗೆ ಮಾಡಿದ್ದ. ಹೀಗೆ ವಿವಿಧ ಠಾಣೆಗಳಲ್ಲಿ ಮೊಬೈಲ್ ಕಳ್ಳತನ, ರಾಬರಿ, ಸುಲಿಗೆನಂತಹ 6 ಕ್ಕೂ ಹೆಚ್ಚು ಪ್ರಕರಣಗಳು ಇವನ ಮೇಲೆ ದಾಖಲಾಗಿದ್ವು. ಯಾವಾಗ ಈತನ ಉಪಟಳ‌ ಹೆಚ್ಚಾಯ್ತೋ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಆರೋಪಿ ಪತ್ತೆಗೆ ವಿಶೇಷ ತಂಡವೊಂದನ್ನ ರಚನೆ ಮಾಡಿದ್ರು. ಹೀಗೆ ಆರೋಪಿ ಯಾಸರ್ ಬೇಟೆಗೆ ಮುಂದಾಗಿದ್ದ ಶೇಷಾದ್ರಿ ಪುರಂ ಪೊಲೀಸರಿಗೆ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಆತನ ಸಹಚರ ಪತ್ತೆಯಾಗಿದ್ದ.

ಆತನ ಮಾಹಿತಿ ಮೇರೆಗೆ ಯಾಸರ್ ಅರಮನೆ ಮೈದಾನದಲ್ಲಿ ಅಡಗಿದ್ದಾನೆ ಅನ್ನೋದು ಗೊತ್ತಾಗಿತ್ತು. ಅಷ್ಟೇ ಅಲ್ಲ ಫೀಲ್ಡಿಗೆ ಇಳಿದು ರಾಬರಿಗೆ ತಯಾರಾಗಿದ್ದ. ಅಷ್ಟೊತ್ತಿಗೆ ಪೊಲೀಸರು ಆರೋಪಿಯನ್ನ ಸುತ್ತುವರೆದಿದ್ದರು. ಅಲ್ಲೂ ಬಾಲ ಬಿಚ್ಚಿದ ಆಸಾಮಿ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ‌ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಶೇಷಾದ್ರಿ ಪುರಂ ಠಾಣೆ ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ರು ಮಾತು ಕೇಳದಿದ್ದಾಗ ಬಲಗಾಲಿಗೆ ಗುಂಡು ಹಾರಿಸಿ ಆರೋಪಿಯನ್ನ ಬಂಧಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ