ಅನಾಥಾಶ್ರಮದ ಹೆಸರಲ್ಲಿ ಬಟ್ಟೆ ಸಂಗ್ರಹ ಮಾಡಿ 10-20 ರೂಗೆ ಸೇಲ್, ಮಾರ್ಷಲ್​ಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವಂಚಕ

| Updated By: ಆಯೇಷಾ ಬಾನು

Updated on: Oct 05, 2021 | 1:06 PM

ಅನಾಥಾಶ್ರಮ ಹೆಸರಿನಲ್ಲಿ ಮನೆ ಮನೆಗೆ ಹೋಗಿ ಬಟ್ಟೆ, ಹಣ ಪಡೆದು ಬಟ್ಟೆಯನ್ನು 10-20 ರೂಪಾಯಿಗೆ ಮಾರಾಟ ಮಾಡಿ ಹಣ ಮಾಡುತ್ತಿದ್ದ ವ್ಯಕ್ತಿ ಬಿಬಿಎಂಪಿ ಮಾರ್ಷಲ್ಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅನಾಥಾಶ್ರಮದ ಹೆಸರಲ್ಲಿ ಬಟ್ಟೆ ಸಂಗ್ರಹ ಮಾಡಿ 10-20 ರೂಗೆ ಸೇಲ್, ಮಾರ್ಷಲ್​ಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವಂಚಕ
ಅನಾಥಾಶ್ರಮದ ಹೆಸರಲ್ಲಿ ಬಟ್ಟೆ ಸಂಗ್ರಹ
Follow us on

ಬೆಂಗಳೂರು: ಮನೆಗಳ ಮುಂದೆ ಭಿಕ್ಷೆ ಬೇಡುತ್ತ, ಸಹಾಯ ಕೇಳುತ್ತ ಬರುವ ಜನರನ್ನು ನಂಬುವುದೇ ಕಷ್ಟಕರವಾಗಿದೆ. ಅನಾಥಾಶ್ರಮ ಹೆಸರಿನಲ್ಲಿ ಮನೆ ಮನೆಗೆ ಹೋಗಿ ಬಟ್ಟೆ, ಹಣ ಪಡೆದು ಬಟ್ಟೆಯನ್ನು 10-20 ರೂಪಾಯಿಗೆ ಮಾರಾಟ ಮಾಡಿ ಹಣ ಮಾಡುತ್ತಿದ್ದ ವ್ಯಕ್ತಿ ಬಿಬಿಎಂಪಿ ಮಾರ್ಷಲ್ಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಸುರೇಶ್ ಕುಮಾರ್ ಅನಾಥಾಶ್ರಮದ ಹೆಸರಲ್ಲಿ ಬಿಕ್ಷೆ ಬೇಡಿ ಬಟ್ಟೆ ಸಂಗ್ರಹ ಮಾಡ್ತಿದ್ದ. ನಾನು ಸ್ನೇಹ ಜ್ಯೋತಿ ಎಂಬ ಅನಾಥಾಶ್ರಮದಿಂದ ಬಂದಿದ್ದೇನೆ ಎನಾದ್ರು ಕೊಟ್ಟು ಅನಾಥರಿಗೆ ನೆರವಾಗಿ ಎಂದು ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಬ್ಯಾಡರಹಳ್ಳಿ ಸುತ್ತಮುತ್ತ ದಾನ ಕೇಳುತ್ತಿದ್ದ. ಬಳಿಕ ಜನರು ಅನುಕಂಪದಿಂದ ಹಣ, ಬಟ್ಟೆ, ಮೆಕಫ್ ಕಿಟ್ ಸೇರಿ ಇನ್ನಿತರ ವಸ್ತುಗಳನ್ನು ಕೊಡುತ್ತಿದ್ದರು. ಬಳಿಕ ಆ ವಸ್ತುಗಳನ್ನು 10-20 ರೂಪಾಯಿಗೆ ಮಾರಾಟ ಮಾಡಿ ಹಣ ಮಾಡುತ್ತಿದ್ದ. ಬಳಿಕ ಸೇಲ್ ಆಗದ ವಸ್ತುಗಳನ್ನು ರಾಜಕಾಲುವೆಗಳ ಬಳಿ ಎಸದು ಹೋಗುತ್ತಿದ್ದ.

ಈ ರೀತಿ ಸುರೇಶ್ ದಂಧೆ ನಡೆಸುತ್ತಿದ್ದ ಸದ್ಯ ಇದೇ ರೀತಿ ಸುಮನಹಳ್ಳಿ ಫ್ಲೈಓವರ್ ಬಳಿಯ ರಾಜಕಾಲುವೆ ಬಳಿ ಮಾರಾಟವಾಗದ ವಸ್ತುಗಳನ್ನು ಎಸೆಯುವಾಗ ಕೊಟ್ಟಿಗೆಪಾಳ್ಯ ವಾರ್ಡ್ ಮಾರ್ಷಲ್ಗಳಾದ ಮಂಜು, ಬಾಲರಾಜು ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಅನಾಥಾಶ್ರಮದ ಹೆಸರಲ್ಲಿ ಬಟ್ಟೆ ಸಂಗ್ರಹ ಮಾಡಿ 10-20 ರೂಗೆ ಸೇಲ್, ಮಾರ್ಷಲ್ಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವಂಚಕ

ಇದನ್ನೂ ಓದಿ: ಮಂಡ್ಯ: ಒಂದೇ ದಿನ 40 ಜನರಿಗೆ ಕಚ್ಚಿದ ಹುಚ್ಚು ನಾಯಿ; ಗ್ರಾಮಸ್ಥರಲ್ಲಿ ಆತಂಕ

ಗಣೇಶ್​ ಚಿತ್ರದ ನಟಿಗೆ ಇದೆ ವಾಸಿಯಾಗದ ಕಾಯಿಲೆ; ಮದುವೆ ಬಳಿಕ ಸತ್ಯ ತೆರೆದಿಟ್ಟ ಯಾಮಿ ಗೌತಮ್