ಮಂಡ್ಯ: ಒಂದೇ ದಿನ 40 ಜನರಿಗೆ ಕಚ್ಚಿದ ಹುಚ್ಚು ನಾಯಿ; ಗ್ರಾಮಸ್ಥರಲ್ಲಿ ಆತಂಕ
ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರಿಗೂ ಹುಚ್ಚು ನಾಯಿ ಕಚ್ಚಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಹುಚ್ಚು ನಾಯಿ ಸೆರೆಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಂಡ್ಯ: ಒಂದೇ ದಿನ 40 ಜನರಿಗೆ ಹುಚ್ಚು ನಾಯಿ ಕಚ್ಚಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಆರ್.ಪೇಟೆ ಪಟ್ಟಣ, ಮಾಕವಳ್ಳಿ, ಪುರ ಗೇಟ್, ಕುಂದನಹಳ್ಳಿ, ಹೆಗ್ಗಡ ಹಳ್ಳಿಯಲ್ಲಿ ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಗಾಯಾಳುಗಳನ್ನು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇನ್ನೂ ಹಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರಿಗೂ ಹುಚ್ಚು ನಾಯಿ ಕಚ್ಚಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಹುಚ್ಚು ನಾಯಿ ಸೆರೆಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ರೀತಿ ಗ್ರಾಮಸ್ಥರು ಹುಚ್ಚು ನಾಯಿ ಕಾಟದಿಂದ ಪರದಾಡಿದ ಅನೇಕ ಉದಾಹರಣೆಗಳಿವೆ. ಬೆಳಗಾವಿ: ಹುಚ್ಚುನಾಯಿಯ ಹಾವಳಿ ಹೆಚ್ಚಾಗಿದೆ ಜಿಲ್ಲೆಯಲ್ಲಿ ಹುಚ್ಚುನಾಯಿಯ ಹಾವಳಿ ಹೆಚ್ಚಾಗಿದೆ. ಒಂದೇ ಒಂದು ಹುಚ್ಚು ನಾಯಿ ಒಂದೇ ದಿನ ಎರಡು ಗಂಟೆ ಅವಧಿಯಲ್ಲಿ ಮೂರು ಗ್ರಾಮದ 15ಕ್ಕೂ ಹೆಚ್ಚು ಜನರ ಮೇಲೆ ಅಟ್ಯಾಕ್ ಮಾಡಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಹುಚ್ಚುನಾಯಿ ನಿನ್ನೇ ಒಂದೇ ದಿನ 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.
ಯರಝರವಿ, ಮಳಗಲಿ, ಹೊಸೂರು ಗ್ರಾಮಗಳು ಸೇರಿದಂತೆ ಮೂರು ಗ್ರಾಮಗಳ ಜನರ ಮೇಲೆ ಎರಗಿದೆ. ಮಲ್ಲವ್ವ, ಬಾಳಯ್ಯ, ಲಲಿತಾ, ಮಲ್ಲಯ್ಯ, ಸಿದ್ಧಪ್ಪ, ಸವಿತಾ ಎಂಬುವವರು ಸೇರಿ ಒಟ್ಟು 15 ಜನರ ಮೇಲೆ ದಾಳಿ ಮಾಡಿದೆ. ಗಾಯಗೊಂಡವರನ್ನು ಯರಗಟ್ಟಿ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಚ್ಚುನಾಯಿಯ ದಾಳಿ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ: ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು
ಕಾಡಾನೆ ದಾಳಿ: ತಪ್ಪಿಸಿಕೊಳ್ಳುವ ಬರದಲ್ಲಿ ಹಳ್ಳಕ್ಕೆ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು
Published On - 12:47 pm, Tue, 5 October 21