ಕಾರ್ಡಿಯಾಕ್ ಅರೆಸ್ಟ್ ಆಗಿ ಸ್ಥಳದಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು: ವಿಡಿಯೋ ನೋಡಿದರೆ ಎದೆ ಝಲ್ ಅನ್ನುತ್ತೆ!
ಬ್ಯಾಟ್ಮಿಟನ್ ಆಟವಾಡಿ ಬ್ರೇಕ್ ಸಮಯದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮನೆಯತ್ತ ಹೋಗಲು ಎದ್ದ ವ್ಯಕ್ತಿ ಸಾವಿನತ್ತ ಪಯಣ ಬೆಳಿಸಿದ್ದಾರೆ. ವಿಡಿಯೋ ನೋಡಿದರೆ ಮೈ ಝಲ್ ಅನಿಸುತ್ತದೆ.
ಬೆಂಗಳೂರು: ಕಾರ್ಡಿಯಾಕ್ ಅರೆಸ್ಟ್ ಆಗಿ ಸ್ಥಳದಲ್ಲೇ ಕುಸಿದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಗರದ ಅಂದ್ರಹಳ್ಳಿ ಬಳಿ ನಡೆದಿದೆ. ಸಾವನಪ್ಪಿರುವ ವ್ಯಕ್ತಿ ಶ್ರೀಧರ್ (45) ಫೈನಾನ್ಸಿಯರ್ ಎಂದು ಹೇಳಲಾಗುತ್ತದೆ. ಬ್ಯಾಟ್ಮಿಟನ್ ಆಟವಾಡಿ ಬ್ರೇಕ್ ಸಮಯದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮನೆಯತ್ತ ಹೋಗಲು ಎದ್ದ ವ್ಯಕ್ತಿ ಸಾವಿನತ್ತ ಪಯಣ ಬೆಳಿಸಿದ್ದಾರೆ. ವಿಡಿಯೋ ನೋಡಿದರೆ ಮೈ ಝಲ್ ಅನಿಸುತ್ತದೆ. ಆ ವ್ಯಕ್ತಿ ಬ್ಯಾಟ್ಮಿಟನ್ ಆಟವಾಡಿ ರೆಸ್ಟ್ ಪಡೆಯುತ್ತಿದ್ದ. ಎಲ್ಲ ಮುಗಿಯಿತು ಇನ್ನೇನು ಮನೆಗೆ ಹೋಗಬೇಕು ಅಷ್ಟೇ, ಎದ್ದು ಕೋರ್ಟ್ನಿಂದ ನಡೆದು ಸ್ವಲ್ಪ ದೂರವಷ್ಟೇ ಹೋಗಿದ್ದು, ಅಷ್ಟರಲ್ಲಿ ವ್ಯಕ್ತಿಗೆ ನೋವು ಕಂಡು ಬಂದು ಸ್ಥಳದಲ್ಲಿ ಕುಸಿದು ಬಿದಿದ್ದಾರೆ. ಆ ವ್ಯಕ್ತಿಗೆ ಅದೇ ಕೊನೆಯ ಆಟ ಆಗ್ಬಿಟ್ಟಿದೆ. ಸ್ನೇಹಿತರು ಬಂದು ನೋಡಿ ಕರೆದರು ಮಾತಿಲ್ಲ.
ಶಿಕ್ಷಣ ಇಲಾಖೆ ಸೂಪರಿಂಟೆಂಡೆಂಟ್ ಆತ್ಮಹತ್ಯೆ
ಕೊಡಗು: ಮಂಗಳೂರು ಶಿಕ್ಷಣ ಇಲಾಖೆ ಸೂಪರಿಂಟೆಂಡೆಂಟ್ ಮಡಿಕೇರಿ ವಸತಿಗೃಹದಲ್ಲಿ ನೇಣಿಗೆ ಶರಣಾಗಿರುವಂತಹ ಘಟನೆ ಮಡಿಕೇರಿ ನಗರದ ಶ್ರೀ ಲಾಡ್ಜ್ನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ವಿಭಾಗದ ಬಿಇಓ ಕಚೇರಿಯ ಸೂಪರಿಂಟೆಂಡೆಂಟ್ ಶಿವಾನಂದ್(45) ನೇಣುಹಾಕಿಕೊಂಡ ವ್ಯಕ್ತಿ. ಹಳೆಯ ಬಸ್ ನಿಲ್ದಾಣದ ಬಳಿಯ ವಸತಿಗೃಹ ನೇಣಿಗೆ ಶರಣಾಗಿದ್ದಾರೆ. ಮಂಗಳೂರು ದಕ್ಷಿಣ ವಿಭಾಗದ ಬಿಓ ಕಚೇರಿ ಕಾರ್ಯನಿರ್ವಹಿಸುತ್ತಿದ್ದರು. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ್ಯುವೆಲ್ಲರಿ ಶಾಪ್ ಸಿಬ್ಬಂದಿಗೆ ನಕಲಿ ಮೆಸೇಜ್ ತೋರಿಸಿ ವಂಚನೆ
ಬೆಂಗಳೂರು: ಜ್ಯುವೆಲ್ಲರಿ ಶಾಪ್ ಸಿಬ್ಬಂದಿಗೆ ನಕಲಿ ಮೆಸೇಜ್ ತೋರಿಸಿ ವಂಚನೆ ಮಾಡಿರುವಂತಹ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಮಹಾವೀರ ಜ್ಯುವೆಲ್ಲರಿ ಶಾಪ್ನಲ್ಲಿ ನಡೆದಿದೆ. ಅಂಗಡಿಯಲ್ಲಿ 19 ಸಾವಿರ ರೂ.ಗೆ ಉಂಗುರ ಖರೀದಿಸಿದ್ದ ಕಾರ್ತಿಕ್, ಆನ್ಲೈನ್ನಲ್ಲಿ ಹಣ ವರ್ಗಾವಣೆ ಆಗಿದೆ ಅಂತಾ ನಂಬಿಸಿದ್ದು, ನಕಲಿ ಮೆಸೇಜ್ ತೋರಿಸಿ ಪಾರಸ್ಮಾಲ್ ಎಂಬುವರಿಗೆ ವಂಚನೆ ಮಾಡಿದ್ದಾನೆ. ತಿಂಗಳ ಕೊನೆಯಲ್ಲಿ ಹಣದ ಲೆಕ್ಕಾಚಾರ ಹಾಕುವಾಗ ಮೆಸೇಜ್ ನೋಡಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಕಾರ್ತಿಕ್ ವಿರುದ್ಧ ಮಾಗಡಿ ರೋಡ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Thu, 8 September 22