ಬೆಂಗಳೂರು: ಮಂಗಳೂರು ಜಿಲ್ಲೆಯ ಜಿಲ್ಲೆಯ ನಾಗುರಿ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಗಂಟೆಯೊಂದು ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ಸದ್ಯ ಈಗ ರಾಜ್ಯದಲ್ಲಿ 7 ಕಡೆ NIA ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ 04 ಕಡೆ, ಮಂಗಳೂರು 01, ಮೈಸೂರು 02 ಕಡೆ ಶಾರಿಕ್‌ಗೆ ಸಂಬಂಧಿಸಿದ ವ್ಯಕ್ತಿಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಶಾರಿಕ್, ಮಾಜ್ ಮನೆ ಮೇಲೆ ತೀರ್ಥಹಳ್ಳಿ ಪೊಲೀಸರ ದಾಳಿ
ಮಂಗಳೂರು ಬಾಂಬ್ ಸ್ಫೋಟದಲ್ಲಿ ಶಾರಿಕ್ ಪಾತ್ರ ಹಿನ್ನೆಲೆ ತೀರ್ಥಹಳ್ಳಿ ಪಟ್ಟಣದ ಟಾಕೀಸ್ ರಸ್ತೆಯ 4 ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ ಇನ್ಸ್ಪೆಕ್ಟರ್ ಅಶ್ವತ್ಥ್ ಗೌಡ, ಮಾಳೂರು ಸಿಪಿಐ ಪ್ರವೀಣ್, ಆಗುಂಬೆ PSI ಶಿವಕುಮಾರ್, ಮಾಳೂರು PSI ನೇತೃತ್ವದಲ್ಲಿ ಸರ್ಚ್ ವಾರಂಟ್ ಪಡೆದು ಮನೆಗಳ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ.
ಶಾರಿಕ್ ಐಸಿಸಿ ಉಗ್ರರ ನಂಟು ಹೊಂದಿರುವ ಶಂಕೆ
ಯಾಸೀನ್ , ಮಾಜ್ ,ಶಾರಿಕ್ ಮೂವರು ಜಿಹಾದಿಗಳು. ಧರ್ಮಕ್ಕಾಗಿಯೇ ಪ್ರಾಣ ತ್ಯಜಿಸಲು ಸಿದ್ದವಾಗಿದ್ದ ಶಂಕಿತ ಉಗ್ರರು. ಧರ್ಮ ವಿರುದ್ದ ಮಾತನಾಡುವವರ ವಿರುದ್ದ ಸೇಡಿಗೆ ಪ್ಲ್ಯಾನ್ ಮಾಡಿಕೊಂಡಿದ್ದರು. ಇವರು ಮುಸ್ಲಿಂ ಧರ್ಮವೇ ನಮಗೆ ಮುಖ್ಯ ಎಂದು ನಂಬಿದ್ದರು. ಪ್ರಾಣ ಬಿಟ್ಟು ಧರ್ಮದ ವಿರುದ್ದ ಮಾತನಾಡಬಾರದು. ಇತಿಚೀಗೆ ದೇಶದಲ್ಲಿ ನಡೆದ ಕೆಲವು ಮುಸ್ಲಿಂ ಧೋರಣೆ, ಎನ್‌ಸಿಆರ್ , ಹಿಜಾಬ್, ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೋಪಗೊಂಡಿದ್ದರು. ಈ ಬಗ್ಗೆ ಕೆಲವು ಮುಸ್ಲಿಂ ಬ್ಲಾಗ್‌ಗಳಲ್ಲಿ ಬೋದನೆ ಮಾಡುತ್ತಿದ್ದರು. ಶಾರಿಕ್, ಧರ್ಮದ ಬಗ್ಗೆ ಪ್ರಚಾರ ನಡೆಸುತ್ತಿದ್ದ. ಕಳೆದ ಬಾರಿ ಯಾಸೀನ್ ಮತ್ತು ಮಾಜ್ ಬಂಧನವಾದ್ರು ಶಾರಿಕ್ ಬಗ್ಗೆ ಬಾಯಿ ಬಿಟ್ಟಿರಲಿಲ್ಲ.
ಕೊಡಗು ಜಿಲ್ಲೆಯಲ್ಲಿ ಪೊಲೀಸರಿಂದ ಹೈಅಲರ್ಟ್
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಮಡಿಕೇರಿ ನಗರದ ಪ್ರಮುಖ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿಯಿಂದ ತಪಾಸಣೆ ನಡೆಸಲಾಗುತ್ತಿದೆ. ಮಡಿಕೇರಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಡಿಸಿ ಕಚೇರಿ, ಕೋರ್ಟ್ ಆವರಣ ಸೇರಿ ಪ್ರಮುಖ ಸ್ಥಳಗಲ್ಲಿ ತಪಾಸಣೆ ಮಾಡಲಾಗುತ್ತಿದೆ.
Published On - 1:35 pm, Mon, 21 November 22