ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ನಾಮಫಲಕ ಪುಡಿ ಪುಡಿ ಮಾಡಿದ ಕಿಡಿಗೇಡಿಗಳು

| Updated By: ವಿವೇಕ ಬಿರಾದಾರ

Updated on: Jan 15, 2024 | 2:37 PM

ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ನಾಮಫಲಕವನ್ನು ಕಿಡಿಗೇಡಿಗಳು ಬೀಳಿಸಿದ್ದಾರೆ. ಈ ಬಗ್ಗೆ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್​ ಅವರು ಟ್ವೀಟ್​ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ನಾಮಫಲಕ ಪುಡಿ ಪುಡಿ ಮಾಡಿದ ಕಿಡಿಗೇಡಿಗಳು
ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ನಾಮಫಲಕ
Follow us on

ಬೆಂಗಳೂರು, ಜನವರಿ 15: ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ನಾಮಫಲಕವನ್ನು (Nameplate) ಕಿಡಿಗೇಡಿಗಳು ಬೀಳಿಸಿದ್ದಾರೆ. ಈ ಬಗ್ಗೆ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್​ ಅವರು ಟ್ವೀಟ್​ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ನೆನಪಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುನದಹಳ್ಳಿ ರಸ್ತೆಗೆ 2020ರಲ್ಲಿ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರಿಡಲಾಗಿತ್ತು. ಮತ್ತು ಅಂದು ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರಿನ ನಾಮಫಲಕವನ್ನು ಕಾಂಗ್ರೆಸ್​ ಶಾಸಕ ಕೃಷ್ಣಭೈರೇಗೌಡ (Krishna Byregowda) ಅವರು ಉದ್ಘಾಟಿಸಿದ್ದರು. ಈ ಮೂಲಕ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು.

ಆದರೆ ಆ ನಾಮಫಲಕ ಈಗ ಪುಡಿ ಪುಡಿಯಾಗಿದೆ. ಇದು ಅಪಘಾತವೋ ಅಥವಾ ಕಿಡಿಗೇಡಿಗಳ ಕೃತ್ಯದ ಬಗ್ಗೆ ತನಿಖೆ ನಡೆಸಬೇಕಿದೆ. ಸೋಮವಾರ ಆರ್ಮಿ ಡೇ ಮತ್ತು ಸಂಕ್ರಾಂತಿ ಹಬ್ಬ ಇದೆ. ಆದರೆ ನಮಗೆ ನೋವಿನ ಸಂಗತಿ ಎಂದು ಹುತಾತ್ಮ ಯೋಧನ ತಾಯಿ ಎಕ್ಸ್​​ನಲ್ಲಿ ಪೋಸ್ಟ್ ಹಾಕಿದ್ದರೆ.

ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನರಾದ ಕ್ಯಾಪ್ಟನ್ ಎಂವಿ ಪ್ರಾಂಜಲ್

ಉಗ್ರಗಾಮಿಗಳ ಜೊತೆ ಹೋರಾಡಿ ವೀರಮರಣವನ್ನಪ್ಪಿದ ಯೋಧ

2016 ರ ನವೆಂಬರ್​ 29 ರಂದು ಜಮ್ಮು-ಕಾಶ್ಮೀರದ ನಗ್ರೋಟಾ ಉಗ್ರದಾಳಿಯಲ್ಲಿ ಹುತಾತ್ಮರಾದ ಏಳು ಯೋಧರ ಪೈಕಿ ಬೆಂಗಳೂರಿನ ಮೇಜರ್​ ಅಕ್ಷಯ್​ ಗಿರೀಶ್​ ಕುಮಾರ್ ಸಹ ಒಬ್ಬರು. 31 ವರ್ಷದ ಮೇಜರ್​ ಅಕ್ಷಯ್​ ಗಿರೀಶ್​ ಕುಮಾರ್​ ಬೆಂಗಳೂರಿನ ಯಲಹಂಕದ ಗೇಟ್ ಗಾರ್ಡನ್ ನಿವಾಸಿಯಾಗಿದ್ದು, ಅಂದು ನಡೆದ ಉಗ್ರರ ಕಾಳಗದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ