ಬೆಂಗಳೂರಿನಲ್ಲಿ ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ನೂತನ ಕಚೇರಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
ಕರ್ನಾಟಕದಲ್ಲಿ 1000 ಚಾನೆಲ್ಗಳನ್ನು ನೀಡುವ ಯೋಜನೆ ರೂಪಿಸಿರುವ ಮೆಟ್ರೋ ಕಾಸ್ಟ್ ಓಟಿಸಿ ಸರ್ವೀಸ್, IPTV ಸರ್ವೀಸ್, ಬ್ರಾಂಡ್ ಬ್ಯಾಂಡ್ ಸೇವೆಯನ್ನು ಬೆಂಗಳೂರು ಕಚೇರಿಯಿಂದಲೇ ನೀಡಲು ತೀರ್ಮಾನ ಮಾಡಿದೆ.
ಬೆಂಗಳೂರು: ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಸಂಸ್ಥೆಯ ಹೊಸ ಕಚೇರಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಮೆಟ್ರೋ ಕಾಸ್ಟ್ ಮೂರು ದಶಕಗಳಿಗಿಂತ ಹೆಚ್ಚು ಕೇಬಲ್ ಸೇವೆ ಒದಗಿಸುತ್ತಿರುವ ಸಂಸ್ಥೆಯಾಗಿದ್ದು, ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಕೇಬಲ್ ಸೇವೆ ಒದಗಿಸುತ್ತಿದೆ. ಇನ್ಮುಂದೆ ಬೆಂಗಳೂರಿನಿಂದಲೇ ಎಲ್ಲಾ ಕಡೆಗೂ ಸೇವೆ ಒದಗಿಸಲು ಮೆಟ್ರೋ ಕಾಸ್ಟ್ ಸಜ್ಜಾಗಿದೆ. ಬೆಂಗಳೂರಿನಲ್ಲೇ ಸರ್ವರ್ ರೂಂ ಸ್ಥಾಪಿಸಿ ಸೇವೆ ನೀಡಲಿದೆ. ಈಗಾಗಲೇ 5 ಲಕ್ಷ ಗ್ರಾಹಕರನ್ನು ಹೊಂದಿದೆ.
ಕರ್ನಾಟಕದಲ್ಲಿ 1000 ಚಾನೆಲ್ಗಳನ್ನು ನೀಡುವ ಯೋಜನೆ ರೂಪಿಸಿರುವ ಮೆಟ್ರೋ ಕಾಸ್ಟ್ ಅದರ ಜೊತೆಗೆ ಉತ್ಕೃಷ್ಟ ಗುಣಮಟ್ಟದ ಸೇವೆ ನೀಡುವ ಗುರಿಯನ್ನೂ ಹೊಂದಿದೆ. ಓಟಿಸಿ ಸರ್ವೀಸ್, IPTV ಸರ್ವೀಸ್, ಬ್ರಾಂಡ್ ಬ್ಯಾಂಡ್ ಸೇವೆಯನ್ನು ಬೆಂಗಳೂರು ಕಚೇರಿಯಿಂದಲೇ ನೀಡಲು ತೀರ್ಮಾನ ಮಾಡಲಾಗಿದೆ.
ಇಂದು ಬೆಂಗಳೂರಿನ ಮಾಧವನಗರದಲ್ಲಿರುವ ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಸಂಸ್ಥೆಯ ನೂತನ ಕಚೇರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. 3 ದಶಕಗಳಿಂದ ಕೇಬಲ್ ಸೇವೆ ಒದಗಿಸುತ್ತಿರುವ ಸಂಸ್ಥೆ ಇದಾಗಿದ್ದು, ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಸೇವೆ ಒದಗಿಸುತ್ತಿದೆ. ಈಗಾಗಲೇ 5 ಲಕ್ಷ ಗ್ರಾಹಕರನ್ನ ಹೊಂದಿರುವ ಸಂಸ್ಥೆಯಾಗಿದ್ದು, ಇನ್ಮುಂದೆ ರಾಜ್ಯದಲ್ಲಿ 1000 ಚಾನೆಲ್ ನೀಡುವ ಯೋಜನೆ ಹೊಂದಿದೆ. 1000 ಚಾನೆಲ್ ಜತೆಗೆ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ಒದಗಿಸಲಿದೆ. OTT ಸೇವೆ, IPTV ಸೇವೆ, ಬ್ರಾಡ್ ಬ್ಯಾಂಡ್ ಸೇವೆಯನ್ನು ಬೆಂಗಳೂರು ಕಚೇರಿಯಿಂದಲೇ ನೀಡಲು ತೀರ್ಮಾನ ಮಾಡಿದೆ.
ಇದನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ಮತ್ತೆ ಮಳೆ: ಮೊಳಕಾಲುದ್ದ ನೀರಿನಲ್ಲಿ ದ್ವಿಚಕ್ರ ವಾಹನ ತಳ್ಳುತ್ತಿರುವ ಸವಾರರು
Karnataka Rain: ಬೆಂಗಳೂರು, ಕರಾವಳಿ ಸೇರಿ ಹಲವೆಡೆ ನ. 28ರವರೆಗೂ ವ್ಯಾಪಕ ಮಳೆ; ಮತ್ತೊಂದು ಚಂಡಮಾರುತದ ಭೀತಿ