ಬೆಂಗಳೂರು: ತಮ್ಮ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಬದುಕು ಕಟ್ಟಿಕೊಳ್ಳಲು ಹಳ್ಳಿಗಳಿಂದ ಲಕ್ಷಾಂತರ ಜನರು ಬೆಂಗಳೂರಿಗೆ ಬರುತ್ತಾರೆ. ಆದ್ರೆ ಈ ಮಹಾನಗರ ಜೀವನಕ್ಕೆ ಎಷ್ಟು ಸೇಫ್ ಎಂಬ ಪ್ರಶ್ನೆ ಎದ್ದಿದೆ. ಗಾಂಜಾ, ಡ್ರಗ್ಸ್, ಗನ್ ಮಾಫಿಯಾದಂತಹ ತಲೆ ಇತ್ತಿರುವ ಜಾಲದ ನಡುವೆ ಮತ್ತೊಂದು ಬೆಚ್ಚಿ ಬೀಳಿಸುವ ಹಾಗೂ ಜನರಲ್ಲಿ ಭಯ ಹುಟ್ಟಿಸಿರುವಂತಹ ಘಟನೆ ನಗರದಲ್ಲಿ ನಡೆಯುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಕಾಟ ಹೆಚ್ಚಾಗಿದ್ದು ತಲ್ವಾರ್ ಹಿಡಿದು ಅಂಗಡಿಗಳಲ್ಲಿ ಹಣ ವಸೂಲಿ ಮಾಡುವ ಖದೀಮರಿಂದ ಜನಕ್ಕೆ ಹೆದರಿಗೆ ಶುರುವಾಗಿದೆ. ಪುಡಿ ರೌಡಿಗಳ ಅಟ್ಟಹಾಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿನಿಮಾಗಳಲ್ಲಿ ಪುಡಿ ರೌಡಿಗಳು ಲಾಂಗ್ ಹಿಡಿದು ಜನರ ಬಳಿ ಹಣ ಮಸೂಲಿ ಮಾಡುವಂತಯೇ ನಗರದಲ್ಲೂ ಘಟನೆಯೊಂದು ನಡೆದಿದೆ. ಸಿನಿಮೀಯ ರೀತಿಯಲ್ಲೇ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ಜನರ ಬಳಿ ಲೂಟಿಗೆ ಮುಂದಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಜನರಲ್ಲಿ ಆತಂಕ ಸೃಷ್ಟಿ ಆಗಿದೆ. ಜನನಿಬಿಡ ಪ್ರದೇಶದ ಅಂಗಡಿಗೆ ತಲ್ವರ್ ಜೊತೆ ಎಂಟ್ರಿ ಕೊಟ್ಟು ಹಣಕೊಡುವಂತೆ ಧಮ್ಕಿ ಹಾಕಿ ಹೆದರಿಸುವ ವಿಡಿಯೋ ಜನರಲ್ಲಿ ನಡುಕ ಹುಟ್ಟಿಸಿದೆ. ಪುಂಡರು ಪೊಲೀಸರ ಭಯವಿಲ್ಲದೆ ರಸ್ತೆಗಳಲ್ಲಿ ದರ್ಬಾರ್ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ, ಕೆಜಿ ಹಳ್ಳಿಯ 7ನೇ ಕ್ರಾಸ್ನಲ್ಲಿ ಪುಂಡರು ಅಂಗಡಿಯೊಂದಕ್ಕೆ ನುಗ್ಗಿ ಮಾರಕಾಸ್ತ್ರ ತೋರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡೋದಾಗಿ ಅಂಗಡಿಯವನಿಗೆ ಬೆದರಿಕೆ ಹಾಕಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಟ್ವಿಟರ್ನಲ್ಲಿ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡುತ್ತಿದ್ದಾರೆ. ಅಂಗಡಿಯವನಿಗೆ ಬೆದರಿಸಿ ಮತ್ತೊಬ್ಬನನ್ನ ಅಟ್ಟಿಸಿಕೊಂಡು ಹೋಗುತ್ತಿರುವ ವಿಡಿಯೋ ಹಾಕಿ ಈ ಬಗ್ಗೆ ತನಿಖೆ ನಡೆಸಲು ಟ್ವಿಟರ್ನಲ್ಲೇ ಹಿರಿಯ ಅಧಿಕಾರಿಗಳು ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ಸೂಚನೆ ನೀಡಿದ್ದಾರೆ. ಕೆಜಿ ಹಳ್ಳಿ ಪೊಲೀಸರು ವಿಡಿಯೋ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಶಕುಂತಲೆ ಅವತಾರದಲ್ಲಿ ಸಮಂತಾ; ‘ಶಾಕುಂತಲಂ’ ಫಸ್ಟ್ ಲುಕ್ ಪೋಸ್ಟರ್ ಕಂಡು ಫ್ಯಾನ್ಸ್ ಫಿದಾ
ವ್ಯಕ್ತಿ ನುಡಿಸಿದ ಬಾಂಜೋ ನಾದಕ್ಕೆ ಕಿವಿಯಾಡಿಸಿದ ನರಿ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು
Published On - 12:04 pm, Mon, 21 February 22