AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಖಾಲಿ ಮಾಡುವ ವಿಚಾರವಾಗಿ ದೌರ್ಜನ್ಯ- ಜೀವ ಬೆದರಿಕೆ: ಕ್ರಮ ಕೈಗೊಳ್ಳುವಂತೆ ಫೇಸ್​ಬುಕ್ ಮೂಲಕ ಮನವಿ ಮಾಡಿಕೊಂಡ ಮಹಿಳೆ

ನಿನ್ನೆ ರಾತ್ರಿ ನಾವು ಮನೆಯಲ್ಲಿ ಮಲಗಿದ್ದಾಗ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಕ್ಕೂ ಮತ್ತು ಇನ್ನೊಂದು ಕಾರಿಗೂ ಇರುವ ಸಂಪರ್ಕ ತೆಗೆದು ಅಪಘಾತವಾಗುವಂತೆ ಅಪರಿಚಿತ ವ್ಯಕ್ತಿ ಸೀನ್ ಕ್ರಿಯೇಟ್ ಮಾಡಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಅರ್ಚನಾ ಆರೋಪಿಸಿದ್ದಾರೆ.

ಮನೆ ಖಾಲಿ ಮಾಡುವ ವಿಚಾರವಾಗಿ ದೌರ್ಜನ್ಯ- ಜೀವ ಬೆದರಿಕೆ: ಕ್ರಮ ಕೈಗೊಳ್ಳುವಂತೆ ಫೇಸ್​ಬುಕ್ ಮೂಲಕ ಮನವಿ ಮಾಡಿಕೊಂಡ ಮಹಿಳೆ
ಮನೆ ಖಾಲಿ ಮಾಡುವ ವಿಚಾರವಾಗಿ ದೌರ್ಜನ್ಯ- ಜೀವ ಬೆದರಿಕೆ: ಕ್ರಮ ಕೈಗೊಳ್ಳುವಂತೆ ಫೇಸ್​ಬುಕ್ ಮೂಲಕ ಮನವಿ ಮಾಡಿಕೊಂಡ ಮಹಿಳೆ
TV9 Web
| Edited By: |

Updated on:Feb 21, 2022 | 9:48 AM

Share

ಬೆಂಗಳೂರು: ಮನೆ ಖಾಲಿ ಮಾಡುವ ವಿಚಾರಕ್ಕೆ ಕುಟುಂಬವೊಂದರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಬೆಂಗಳೂರಿನ ಬಸವನಗುಡಿಯಲ್ಲಿ(Basavanagudi) ನಡೆದಿದೆ. ಅಲ್ಲದೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದು ಅರ್ಚನಾ ಎಂಬುವವರು ಬಸವನಗುಡಿ ಠಾಣೆ ಪೊಲೀಸರಿಗೆ(Basavanagudi Police Station) ಫೇಸ್ ಬುಕ್ ಮೂಲಕ ಬಹಿರಂಗ ದೂರು ನೀಡಿದ್ದಾರೆ.

ಬಸವನಗುಡಿ ನಿವಾಸಿ ಅರ್ಚನಾ ಮಹದೇವ್ ಎಂಬುವವರು ಬಸವನಗುಡಿ ಠಾಣೆ ರಸ್ತೆಯಲ್ಲಿ ಮನೆಯೊಂದನ್ನು ಹೊಂದಿದ್ದು ತಾವು ಮನೆ ಖಾಲಿ ಮಾಡುವಂತೆ ಬೆದರಿಕೆ ಬಂದಿದೆ ಎಂದು ಆರೋಪಿಸಿದ್ದಾರೆ. ನಿನ್ನೆ ರಾತ್ರಿ ನಾವು ಮನೆಯಲ್ಲಿ ಮಲಗಿದ್ದಾಗ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಕ್ಕೂ ಮತ್ತು ಇನ್ನೊಂದು ಕಾರಿಗೂ ಇರುವ ಸಂಪರ್ಕ ತೆಗೆದು ಅಪಘಾತವಾಗುವಂತೆ ಅಪರಿಚಿತ ವ್ಯಕ್ತಿ ಸೀನ್ ಕ್ರಿಯೇಟ್ ಮಾಡಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಅರ್ಚನಾ ಆರೋಪಿಸಿದ್ದಾರೆ.

ಅಲ್ಲದೆ ಮನೆ ಖಾಲಿ ಮಾಡುವ ವಿಚಾರಕ್ಕೆ ರೋಹನ್ ರೆಡ್ಡಿ, ಆತನ ಸಹಚರರು ದೌರ್ಜನ್ಯವೆಸಗಿ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಅರ್ಚನಾ ಮಹದೇವ್‌ ಬಸನವನಗುಡಿ ಠಾಣೆಗೆ ದೂರು ನೀಡಿದ್ದರು. ಆದ್ರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅರ್ಚನಾ ಬಸವನಗುಡಿ ಠಾಣೆ ಪೊಲೀಸರಿಗೆ ಫೇಸ್ ಬುಕ್ ಮೂಲಕ ಬಹಿರಂಗ ದೂರು ನೀಡಿದ್ದಾರೆ. ಮನೆಯಲ್ಲಿ ನಾನು ನನ್ನ ಪೋಷಕರೊಂದಿಗೆ ವಾಸವಾಗಿದ್ದು ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಹೆಣ್ಣು ಮಕ್ಕಳು ಏನು ಮಾಡಲು ಆಗುವುದಿಲ್ಲ ಎಂದು ಕೆಲವರು ನಮ್ಮ ಆಸ್ತಿ ಕಬಳಿಕೆಗೆ ಯತ್ನಿಸುತ್ತಿದ್ದಾರೆ. ವಾಸ ಮಾಡ್ತಿರೋ ಮನೆ ವಶಪಡಿಸಿಕೊಳ್ಳೋಕೆ ರೋಹನ್ ರೆಡ್ಡಿ ಮತ್ತು ಸಹಚರರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅರ್ಚನಾ ಆರೋಪಿಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಫೇಸ್ಬುಕ್ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಯುಕೆ ಮೃಗಾಲಯದಲ್ಲಿ ಜನಿಸಿದೆ ಅಪರೂಪದ ಆರ್ಡ್​ವರ್ಕ್​; ಇಲ್ಲಿದೆ ಡೊಬಿ ಚಿತ್ರಣ

‘ಮುಸಲ್ಮಾನ ಗೂಂಡಾಗಳು ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ’ – ಸಚಿವ ಕೆ ಎಸ್​ ಈಶ್ವರಪ್ಪ ಗಂಭೀರ ಆರೋಪ

Published On - 9:45 am, Mon, 21 February 22