ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರು ಹಾಗೂ ಫೋಟೋ ದುರ್ಬಳಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 07, 2022 | 1:00 PM

ನನ್ನ ಫೋಟೋ ಬಳಕೆ ಮಾಡಿಕೊಂಡು ಗಿಫ್ಟ್​​ಗಳಿಗೆ ಬೇಡಿಕೆ ಇಡುತ್ತಿದ್ದಾರೆ. ನಂಬರ್ ನನ್ನದಲ್ಲ, ಈ ಬಗ್ಗೆ ದೂರು ನೀಡಲು ಸೂಚನೆ ನೀಡಿದ್ದೇನೆ ಎಂದು ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರು ಹಾಗೂ ಫೋಟೋ ದುರ್ಬಳಕೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
Follow us on

ಬೆಂಗಳೂರು: ಬಿಬಿಎಂಪಿ (BBMP)  ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರು ಹಾಗೂ ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಡಿಪಿ ಹಾಕಿಕೊಂಡು ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಗಿಫ್ಟ್ ನೀಡುವಂತೆ ಬೇಡಿಕೆ ಇಡಲಾಗುತ್ತಿದೆ. ಈ ಬಗ್ಗೆ ದೂರು ನೀಡಲು ಮುಖ್ಯ ಆಯುಕ್ತರಿಂದ ಸೂಚನೆ ನೀಡಿದ್ದು, ನನ್ನ ಫೋಟೋ ಬಳಕೆ ಮಾಡಿಕೊಂಡು ಗಿಫ್ಟ್​​ಗಳಿಗೆ ಬೇಡಿಕೆ ಇಡುತ್ತಿದ್ದಾರೆ. ನಂಬರ್ ನನ್ನದಲ್ಲ, ಈ ಬಗ್ಗೆ ದೂರು ನೀಡಲು ಸೂಚನೆ ನೀಡಿದ್ದೇನೆ ಎಂದು ಆಯುಕ್ತ ತುಷಾರ್ ಗಿರಿನಾಥ್ ತಮ್ಮ ಟ್ವೀಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ಅಪರಿಚಿತ ನಂಬರ್​ನಿಂದ ನಾನು ಯಾರಿಗೂ ಕರೆ ಮಾಡಿಲ್ಲ, ಮತ್ತು ಹಣ ಕಳುಹಿಸಿ ಎಂದು ಯಾರಿಗೂ ನಾನು ಹೇಳಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ; RSS Meet: ರಾಜಸ್ಥಾನದಲ್ಲಿ ಇಂದಿನಿಂದ 3 ದಿನ ಆರ್​ಎಸ್​ಎಸ್​ ಸಭೆ; ಕೋಮು ಸೌಹಾರ್ದತೆಯೇ ಮುಖ್ಯ ಅಜೆಂಡಾ

ಇದನ್ನೂ ಓದಿ; Global Recession: 2023ರ ಆರಂಭದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂದ ಐಎಂಎಫ್​ ಮುಖ್ಯಸ್ಥೆ

Published On - 1:00 pm, Thu, 7 July 22