PSI Recruitment Scam: ಸಿಐಡಿ ಕಸ್ಟಡಿಯಲ್ಲಿರುವ ಐಪಿಎಸ್ ಅಮೃತ್ ಪಾಲ್ಗೆ ನಿದ್ದೆ ಬರ್ತಿಲ್ಲವಂತೆ! ಅದು ಬೇಕೇಬೇಕಂತೆ!
545 ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಸಿಐಡಿ ಕಸ್ಟಡಿಯಲ್ಲಿದ್ದು ಅಮಾನತುಗೊಂಡಿರುವ ಅಧಿಕಾರಿಗೆ ನಿದ್ದೆಯೇ ಬರುತ್ತಿಲ್ಲವಂತೆ.
ಬೆಂಗಳೂರು: 545 ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿ (PSI Recruitment Scam) ಪ್ರಕರಣದಲ್ಲಿ ಬಂಧಿತರಾಗಿರುವ ಐಪಿಎಸ್ (IPS) ಅಧಿಕಾರಿ ಅಮೃತ್ ಪಾಲ್ (Amruth Paul) ಸಿಐಡಿ (CID) ಕಸ್ಟಡಿಯಲ್ಲಿದ್ದು ಅಮಾನತುಗೊಂಡಿರುವ ಅಧಿಕಾರಿಗೆ ನಿದ್ದೆಯೇ ಬರುತ್ತಿಲ್ಲವಂತೆ. ಅದಕ್ಕಾಗಿ ವಿಸ್ಕಿ, ಸಿಗರೇಟ್ ಬೇಕಂತೆ. ಪಿಎಸ್ಐ ಹಗರಣ ಸಂಬಂಧ (ಜುಲೈ 4) ರಂದು ಮಧ್ಯಾಹ್ನ ಸಿಐಡಿ ಅಧಿಕಾರಿಗಳು ಅಮೃತ್ ಪಾಲ್ ಅವರನ್ನು ಬಂಧಿಸಿದ್ದರು. ಈಗ ಅವರು ತನಗೆ ಟೆನ್ಷನ್ ಆಗುತ್ತಿದೆ, ಸಿಗರೇಟ್ ಬೇಕು, ನಿದ್ದೆ ಬರುತ್ತಿಲ್ಲ ವಿಸ್ಕಿ ಬೇಕೆಂದು ವರಾತ ತೆಗೆದುಕುಳಿತಿದ್ದಾರೆ.
ಇದನ್ನು ಕೇಳಿ ಸಿಐಡಿ ಅಧಿಕಾರಿಗಳು ಚಕಿತಗೊಂಡಿದ್ದು, ಇವುಗಳನ್ನು ವಿತರಿಸಲು ಸಾಧ್ಯವಾಗದು. ಜೈಲು ರೂಲ್ಸ್ ಇದಕ್ಕೆ ಅನುಮತಿಸುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ. ಇಂದು (ಜುಲೈ 7) ಸಿಐಡಿ ಅಧಿಕಾರಿ ಡಿಜಿಪಿ ಸಂಧೂ ಹೈಕೋರ್ಟ್ಗೆ ತನಿಖಾ ಪ್ರಗತಿ ವರದಿ ಸಲ್ಲಿಸಲಿದ್ದಾರೆ.
ಐಪಿಎಸ್ ಅಧಿಕಾರಿಯ ಬಂಧನದ ಹಿನ್ನೆಲೆ
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಅಮೃತ್ ಪಾಲ್ರನ್ನು ಪೊಲೀಸರು (ಜುಲೈ 4) ರಂದು ಬಂಧಿಸಿದ್ದರು. ಸಾಕ್ಷ್ಯಾಧಾರ ಸಿಕ್ಕಿದ್ದರಿಂದ ಅಮೃತ್ ಪಾಲ್ ಬಂಧಿಸಲಾಗಿದೆ ಎಂದು ಟಿವಿ9ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದರು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪಾಲ್ ಕಚೇರಿಯಲ್ಲೇ ಒಎಂಆರ್ ಶೀಟ್ ತಿದ್ದಲಾಗಿದೆ. ಯಾವೊಬ್ಬ ಅಧಿಕಾರಿಯನ್ನೂ ಬಿಡದಂತೆ ಸೂಚಿಸಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೇವೆ. ಸಿಐಡಿ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ: NFT ಲೋಕದಲ್ಲಿ ರಾರಾಜಿಸಲಿದ್ದಾರೆ ಕನ್ನಡದ ಸ್ಟಾರ್ ಹೀರೋ; ಜೋರಾಗಿದೆ ಫ್ಯಾನ್ಸ್ ಕೌತುಕ
ಇನ್ನು ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಾಗ ರಾಜಧಾನಿ ಬೆಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಜೆ ಮಂಜುನಾಥ್ ಅವರನ್ನೂ ಸಹ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಬಂದನದ ನಂತರ ಅವರನ್ನು ಸಸ್ಪೆಂಡ್ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಹಾಗೇ ಐಪಿಎಸ್ ಅಧಿಕಾರಿ ಅಮೃತ್ ಪಾಲ್ರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಹುದ್ದೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಇದನ್ನು ಓದಿ: ಭ್ರಷ್ಟಾಚಾರ ಆರೋಪದಲ್ಲಿ ಒಂದೇ ದಿನ ಬಂಧನಕ್ಕೀಡಾದ ಐಎಎಸ್-ಐಪಿಎಸ್ ಅಧಿಕಾರಿಗಳಿಬ್ಬರನ್ನೂ ಮನೆಗೆ ಕಳಿಸಿದ ರಾಜ್ಯ ಸರ್ಕಾರ
Published On - 2:38 pm, Thu, 7 July 22