ಮುಡಾ ಹಗರಣ; ಸಿಎಂ ರಾಜೀನಾಮೆಗೆ ಆಗ್ರಹಿಸಿ ಜು.12 ರಂದು ಪ್ರತಿಭಟನೆಗೆ ಬಿಜೆಪಿ ನಿರ್ಧಾರ

|

Updated on: Jul 09, 2024 | 5:21 PM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಜುಲೈ.12ರಂದು ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆಗೆ ನಿರ್ಧಾರ ಮಾಡಿದ್ದು, ಪ್ರತಿಭಟನೆ ನಡೆಸುವ ಸಂಬಂಧ ಇಂದು(ಮಂಗಳವಾರ) ಸಂಜೆ ಮೈಸೂರಿನಲ್ಲಿ ಶಾಸಕ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ ಏರ್ಪಡಿಸಲಾಗಿದೆ.

ಮುಡಾ ಹಗರಣ; ಸಿಎಂ ರಾಜೀನಾಮೆಗೆ ಆಗ್ರಹಿಸಿ ಜು.12 ರಂದು ಪ್ರತಿಭಟನೆಗೆ ಬಿಜೆಪಿ ನಿರ್ಧಾರ
ಸಿಎಂ ರಾಜೀನಾಮೆಗೆ ಆಗ್ರಹಿಸಿ ಜು.12 ರಂದು ಪ್ರತಿಭಟನೆಗೆ ಬಿಜೆಪಿ ನಿರ್ಧಾರ
Follow us on

ಬೆಂಗಳೂರು, ಜು.09: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅನುಕೂಲ ಪಡೆದು ಸಿದ್ದರಾಮಯ್ಯ ಸೈಟ್ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ(C. N. Ashwath Narayan) ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಸಿಎಂ ಆಗಿ, ವಿಪಕ್ಷ ನಾಯಕನಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ಶುಕ್ರವಾರ(ಜು.12) ಮೈಸೂರಿನಲ್ಲಿ ವಿಪಕ್ಷ ನಾಯಕ ಆರ್​.ಅಶೋಕ್ ನೇತೃತ್ವದಲ್ಲಿ ಸಿಎಂ ರಾಜೀನಾಮೆಗೆ ಹಾಗೂ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ಮುಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದರು.

ಇಂದು ಸಂಜೆ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ

ಇನ್ನು ಅವರು ಈ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಹಾಕಿಕೊಳ್ಳಲು ರೆಡಿಯಾಗಿದ್ದಾರೆ. ಕೆಂಪಣ್ಣ ಆಯೋಗ ಏನು ಆಯ್ತು? , ರೀಡೂ ಹಗರಣದಲ್ಲಿ ಏನಾಯ್ತು ಎಂದು ನಿಮಗೆ ಗೊತ್ತಲ್ಲವೇ?. ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಲ್ಲಿದ್ದೀರಾ?. ನಿಮ್ಮ ಅಧಿಕಾರಿಗಳು, ಸಚಿವರು ಭ್ರಷ್ಟಾಚಾರದಲ್ಲೇ‌ ತೊಡಗಿದ್ದಾರೆ. ಜೊತೆಗೆ ಹೆಲಿಕಾಪ್ಟರ್​ನಲ್ಲೇ ‌ಹೋಗಿ ಫೈಲ್ ತಂದಿದ್ದಾರೆ. ನಿಮ್ಮ ಭಂಡತನ, ಹಗಲು ದರೋಡೆ ಕಂಡು ಬಂದಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಪ್ರತಿಭಟನೆ ನಡೆಸುವ ಸಂಬಂಧ ಇಂದು ಸಂಜೆ ಮೈಸೂರಿನಲ್ಲಿ ಶಾಸಕ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ ಏರ್ಪಡಿಸಲಾಗಿದೆ.

ಇದನ್ನೂ ಓದಿ:ಮುಡಾ ಹಗರಣ: ಯಾರೇ ಎಷ್ಟೇ ದೊಡ್ಡವರಿದ್ದರೂ ಕ್ರಮ ಆಗಬೇಕು ಎಂದ ಬಿಕೆ ಹರಿಪ್ರಸಾದ್

ಇದೇ ವೇಳೆ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂಬ ಹೆಸರಿಡುವ ವಿಚಾರ, ‘ರಾಮ‌ ಇದ್ದಾನೆ ಎಂದು ರಾಮನಗರ ಹೆಸರು ಬದಲಾಯಿಸ್ತಿದ್ದಾರೆ. ನಾಮಕರಣ ಮಾಡೋದೇ ಇವರ ದೊಡ್ಡ ಸಾಧನೆ. ಇದನ್ನು ಒಪ್ಪಿಕೊಳ್ಳುವುದಕ್ಕೆ ಆಗಲ್ಲ. ಇನ್ನು ಈ ಹೆಸರು ಬದಲಾವಣೆಯಿಂದ ರಿಯಲ್ ಎಸ್ಟೇಟ್ ಬೆಲೆ ಹೆಚ್ಚಾಗುತ್ತೆ ಎಂಬ ಕಾರಣ ಕೊಟ್ಟಿದ್ದಾರೆ. ಮೆಡಿಕಲ್‌ ಕಾಲೇಜು​ ಅನ್ನು ಕನಕಪುರಕ್ಕೆ ಕೊಂಡೊಯ್ಯುವ ವ್ಯಕ್ತಿ, ರಾಮನಗರ ಜಿಲ್ಲೆಯ ಅಭಿವೃದ್ಧಿ ಮಾಡಿಲ್ಲ. ದುಡ್ಡು ಜಾಸ್ತಿ ಸಿಗುತ್ತೆ ಎಂದು ಅಪ್ಪನ ಹೆಸರು‌ ಬದಲಾಯಿಸುತ್ತಿದ್ದಾರೆ. ಇದನ್ನು ಜನ ಒಪ್ಪುವುದಿಲ್ಲ ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ