ಮುಡಾ ಹಗರಣ: ಯಾರೇ ಎಷ್ಟೇ ದೊಡ್ಡವರಿದ್ದರೂ ಕ್ರಮ ಆಗಬೇಕು ಎಂದ ಬಿಕೆ ಹರಿಪ್ರಸಾದ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೈಟ್​ ಹಂಚಿಕೆಯಲ್ಲಿ ಭಾರೀ ಹಗರಣ ನಡೆದಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಗೂ ಸಹ ಮುಡಾ ನಿವೇಶನ ನೀಡಲಾಗಿದೆ. ಈ ಸಂಬಂಧ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿದೆ. ಇದರ ಮಧ್ಯ ಕಾಂಗ್ರೆಸ್​ ವಿಧಾನಪರಿತ್ ಬಿಕೆ ಹರಿಪ್ರಸಾದ್ ಅವರು ಮಾತನಾಡಿ, ಯಾರೇ ಎಷ್ಟೇ ದೊಡ್ಡವರಿದ್ದರೂ ಕ್ರಮ ಆಗಬೇಕು ಎಂದಿದ್ದಾರೆ.

ಮುಡಾ ಹಗರಣ: ಯಾರೇ ಎಷ್ಟೇ ದೊಡ್ಡವರಿದ್ದರೂ ಕ್ರಮ ಆಗಬೇಕು ಎಂದ ಬಿಕೆ ಹರಿಪ್ರಸಾದ್
ಬಿಕೆ ಹರಿಪ್ರಸಾದ್
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jul 09, 2024 | 2:45 PM

ಬೆಂಗಳೂರು, (ಜುಲೈ 09): ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬ ಭಾಗಿಯಾಗಿರುವ ಆರೋಪ ಕೇಳಿಬಂದಿದೆ, ಈ ಸಂಬಂಧ ಸಿದ್ದರಾಮಯ್ಯ ಆದಿಯಾಗಿ ಮಂತ್ರಿ, ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಹಗರಣ ಬಗ್ಗೆ ನಾನಾ ರೀತಿಯ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ಇದರ ಮಧ್ಯ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ಸಿಎಂ , ಡಿಸಿಎಂ ಬಹಳ ದೊಡ್ಡ ನಾಯಕರು ಅವರಿಗೆಲ್ಲ ಸಲಹೆ ನೀಡಲು ಆಗತ್ತಾ ನಾವು? ಮುಡಾ ಹಗರಣ, ವಾಲ್ಮೀಕಿ ಹಗರಣದಲ್ಲಿ ದನಿ ಎತ್ತಬೇಕು. ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮೆಲ್ಲರ ನಾಯಕ ರಾಹುಲ್ ಝೀರೋ ಟಾಲರೆನ್ಸ್ ಅಂತ ಹೇಳಿದ್ದಾರೆ. ಅದು ಯಾರೇ ಎಷ್ಟೇ ದೊಡ್ಡವರಿದ್ದರೂ ಸಹ ಕ್ರಮ ಆಗಬೇಕು ಎಂದು ಮಾರ್ವಿಕವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಜುಲೈ 09) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆ ಹರಿಪ್ರಸಾದ್, ಭೂಮಿ ವಿಚಾರದಲ್ಲಿ ಮಾತಾನಾಡುವುದಕ್ಕೆ ಹೋದರೆ ಫಂಡಾರಸ್ ಬಾಕ್ಸ್ ಇದ್ದ ಹಾಗೆ. ಯಾರೂ ಸಹ ಅದರಿಂದ ಹೊರಗೆ ಇಲ್ಲ. ಬಹುತೇಕ ರಾಜಕಾರಣಿಗಳು ಭೂಮಿ ವಿಚಾರದಿಂದ ಹೊರಗಿಲ್ಲ. ಒಂದಲ್ಲ ಒಂದು ರೀತಿ ಅದರೊಳಗೇ ಇದ್ದಾರೆ. ಅಷ್ಟು ಸುಲಭವಾಗಿ ಮುಡಾ ಅಂತ ಅದನ್ನು ಮುಚ್ಚಿ ಹಾಕಲು ಆಗುವುದಿಲ್ಲ. ಭೂಮಿ ಎನ್ನುವುದು ಕೂಲಂಕಷವಾಗಿ ನೋಡಿದ್ರೆ ಗೊತ್ತಾಗುತ್ತದೆ ಚರ್ಚೆಯೇ ಆಗುವುದಿಲ್ಲ ಎಂದರು.

ಇದನ್ನೂ ಒದಿ: ಮುಡಾ ಹಗರಣ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ಬಡವರಿಗೆ ಜಾಗ ಕೊಡುತ್ತೇವೆ ಅಂದ್ರೆ ಚರ್ಚೆ ಆಗುತ್ತೆ, ಇಲ್ಲದಿದ್ದರೆ ಇಲ್ಲ/ ಮೈಸೂರು ಮಾತ್ರವಲ್ಲ, ಬೆಂಗಳೂರಿನಲ್ಲಿ ಎಷ್ಟೆಲ್ಲ ಡಿನೋಟಿಫೈ ಆಗಿದೆ. ಯಾರ ಯಾರ ಕಾಲದಲ್ಲಿ ಎಷ್ಟೆಲ್ಲ ಡಿನೋಟಿಪೈ ಆಗಿದೆ ನೋಡಿ. ಬೆಂಗಳೂರು ಪ್ಯಾಲೇಸ್​ಗೆ ಜಾಗ ಕೊಡಲು ಎಷ್ಟು ವರ್ಷ ಆಗ್ತಿದೆ. ದೊಡ್ಡವರಿಗೆ ಒಂದು ಕಾನೂನು ಬಡವರಿಗೆ ಇನ್ನೊಂದು ಕಾನೂನು. ಎಲ್ಲರಿಗೂ ಒಂದೇ ಕಾನೂನು ಇರಬೇಕು. 135 ಸೀಟು ಬಂದಿದೆ ಅಂದ್ರೆ, ಅದಕ್ಕೆ ದುರ್ಬಲ ವರ್ಗದವರೇ ಕಾರಣ. SC, ST, ಅಲ್ಪಸಂಖ್ಯಾತರಿಮದಲೇ ಕಾಂಗ್ರೆಸ್​ಗೆ ಹೆಚ್ಚು ಮತ ಬಂದಿದೆ. ದುರ್ಬಲ ವರ್ಗದವರಿಗೆ ಅನ್ಯಾಯ ಆಗಬಾರದು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ಗೆ ಕಿವಿ ಮಾತು ಹೇಳಿದರು.

ವಾಲ್ಮೀಕಿ ನಿಗಮದಲ್ಲಿ ಯಾರದ್ದೇ ತಪ್ಪಿದ್ದರೂ ಕ್ರಮ ಆಗಬೇಕ. ಇದರಲ್ಲಿ ವಿರೋಧ ಪಕ್ಷಗಳು ವಿಫಲವಾದ್ರೂ ಸಹ ನಾವು ಬಿಡುವುದಿಲ್ಲ. ಸಮುದಾಯಕ್ಕೆ ಅನ್ಯಾಯ ಆಗಬಾರದು. ವಾಲ್ಮೀಕಿ ಸಮಾಜ ಮುಂದೆ ಬರುವುದೇ ಕಷ್ಟ, ಎಂದು ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ರೆ ಸಹಿಸಲು ಸಾಧ್ಯವಿಲ್ಲ. ಸಾಕ್ಷಿ ಸಮೇತ ತಪ್ಪು ಹೊರ ಬಂದರೆ ನಾವೂ ಸಹ ಚರ್ಚೆ ಮಾಡಲು ತಯಾರಿದ್ದೇವೆ. ಸಾಕ್ಷಿ ಸಮೇತ ಹೊರ ಬರಬೇಕು. ವಾಲ್ಮೀಕಿ ಸಮುದಾಯ ಸೇರಿ ಯಾವುದೇ ದುರ್ಬಲ ವರ್ಗಕ್ಕೆ ಅನ್ಯಾಯ ಆಗಿದ್ರೆ ವಿರೋಧ ಪಕ್ಷದವರಿಗಿಂತ ಹೆಚ್ಚು ನಾವೇ ಧ್ವನಿ ಎತ್ತುತ್ತೇವೆ. ಬಹಳ ಗಂಭೀರ ಆಪಾದನೆ ಇದು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ವಿಚಾರಣೆ ಪಾರದರ್ಶಕವಾಗಿ ನಡೆಯಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:44 pm, Tue, 9 July 24

ತಾಜಾ ಸುದ್ದಿ
ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ
ಶಿಷ್ಯ ವಿನೋದ್ ದೋಂಡಾಳೆ ನಿಧನ, ಭಾವುಕರಾದ ಟಿಎನ್ ಸೀತಾರಾಂ
ನಿರಂತರ ಮಳೆಗೆ ಸಿಎಂ ತವರಲ್ಲಿ ಮುಖ್ಯರಸ್ತೆಯಲ್ಲೇ ಭೂಕುಸಿತ: ಸಂಚಾರಕ್ಕೆ ಅಡ್ಡ
ನಿರಂತರ ಮಳೆಗೆ ಸಿಎಂ ತವರಲ್ಲಿ ಮುಖ್ಯರಸ್ತೆಯಲ್ಲೇ ಭೂಕುಸಿತ: ಸಂಚಾರಕ್ಕೆ ಅಡ್ಡ
ಶಾಸಕರ ಮನೆಗಳಲ್ಲಿ ಸಭೆ ನಡೆಸಕೂಡದೆಂದು ಎಲ್ಲರಿಗೆ ತಿಳಿಸಲಾಗಿದೆ: ಶಿವಕುಮಾರ್
ಶಾಸಕರ ಮನೆಗಳಲ್ಲಿ ಸಭೆ ನಡೆಸಕೂಡದೆಂದು ಎಲ್ಲರಿಗೆ ತಿಳಿಸಲಾಗಿದೆ: ಶಿವಕುಮಾರ್
ಮೂರು ಹೆಣ್ಣುಮಕ್ಕಳ ತಂದೆ ಜಗನ್ನಾಥ ಮಣ್ಣಿನಡಿ ಸಿಲುಕಿ ಪ್ರಾಣ ತೆತ್ತರೇ?
ಮೂರು ಹೆಣ್ಣುಮಕ್ಕಳ ತಂದೆ ಜಗನ್ನಾಥ ಮಣ್ಣಿನಡಿ ಸಿಲುಕಿ ಪ್ರಾಣ ತೆತ್ತರೇ?
ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿಗೆ ಕಾದಿರಲಿಲ್ಲ: ಕುಮಾರಸ್ವಾಮಿ
ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿಗೆ ಕಾದಿರಲಿಲ್ಲ: ಕುಮಾರಸ್ವಾಮಿ
ಹಗರಣ ಮೈ ಸುತ್ತಿಕೊಂಡಾಗ ಸರ್ಕಾರಕ್ಕೆ ಗುಡ್ಡ ಕುಸಿತ, ಮಳೆ ನೆನಪಾಗಿದೆ: ಅಶೋಕ
ಹಗರಣ ಮೈ ಸುತ್ತಿಕೊಂಡಾಗ ಸರ್ಕಾರಕ್ಕೆ ಗುಡ್ಡ ಕುಸಿತ, ಮಳೆ ನೆನಪಾಗಿದೆ: ಅಶೋಕ
ಶಿರೂರು ಗುಡ್ಡ ಕುಸಿತದಂಥ ದುರ್ಘಟನೆ ಮಂಗಳೂರಲ್ಲೂ ನಡೆಯಬಾರದು!
ಶಿರೂರು ಗುಡ್ಡ ಕುಸಿತದಂಥ ದುರ್ಘಟನೆ ಮಂಗಳೂರಲ್ಲೂ ನಡೆಯಬಾರದು!
ಒಪ್ಪೊ ರೆನೋ 12 ಪ್ರೊ 5G ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಎಂಟ್ರಿ
ಒಪ್ಪೊ ರೆನೋ 12 ಪ್ರೊ 5G ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಎಂಟ್ರಿ
ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ
ನದಿ ಮಧ್ಯೆ ಇರುವ ಕಟೀಲು ಕ್ಷೇತ್ರದ ವಿಹಂಗಮ ನೋಟ ಡ್ರೋನ್ ಕ್ಯಾಮರಾದಲ್ಲಿ ಸೆರೆ
ಶಾಸಕ ಸೈಲ್ ಮತ್ತು ಸಚಿವ ಮಂಕಾಳ್ ನಡುವೆ ನಡೆದ ವಾಗ್ವಾದ ಡಿಸಿಎಂಗೆ ಗೊತ್ತಿಲ್ಲ
ಶಾಸಕ ಸೈಲ್ ಮತ್ತು ಸಚಿವ ಮಂಕಾಳ್ ನಡುವೆ ನಡೆದ ವಾಗ್ವಾದ ಡಿಸಿಎಂಗೆ ಗೊತ್ತಿಲ್ಲ