Namma Metro: ಬಂದೇಬಿಡ್ತು ಬೆಂಗಳೂರಿನ ಮೊದಲ ಚಾಲಕ ರಹಿತ ರೈಲು, ಚೀನಾದಿಂದ ಚೆನ್ನೈಗೆ ಬಂದಿದೆ

| Updated By: ಆಯೇಷಾ ಬಾನು

Updated on: Feb 07, 2024 | 12:05 PM

ಮೊದಲ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಮಂಗಳವಾರ ಚೀನಾದಿಂದ ಚೆನ್ನೈ ಬಂದರಿಗೆ ಬಂದು ತಲುಪಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ, ಈ ರೈಲನ್ನು ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತರಲಾಗುತ್ತದೆ. ಡಿಸೆಂಬರ್ 2019 ಚೀನಾದ ಕಂಪನಿ 216 ಕೋಚ್‌ಗಳನ್ನು ಪೂರೈಸುವ ಒಪ್ಪಂದವನ್ನು ಪಡೆದುಕೊಂಡಿತು, 173 ವಾರಗಳಲ್ಲಿ ಬಿಎಂಆರ್ ಸಿಎಲ್‌ಗೆ ತಲುಪಿಸುವ ನಿರೀಕ್ಷೆಯಿದೆ.

Namma Metro: ಬಂದೇಬಿಡ್ತು ಬೆಂಗಳೂರಿನ ಮೊದಲ ಚಾಲಕ ರಹಿತ ರೈಲು, ಚೀನಾದಿಂದ ಚೆನ್ನೈಗೆ ಬಂದಿದೆ
ಬೆಂಗಳೂರಿನ ಮೊದಲ ಚಾಲಕ ರಹಿತ ರೈಲು
Follow us on

ಬೆಂಗಳೂರು, ಫೆ.07: ಬೆಂಗಳೂರಿನ ನಮ್ಮ ಮೆಟ್ರೋಗೆ (Namma Metro) ಮೊದಲ ಚಾಲಕ ರಹಿತ ರೈಲು ಮಂಗಳವಾರ ಚೀನಾದಿಂದ ಚೆನ್ನೈ ಬಂದರಿಗೆ ಬಂದು ತಲುಪಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವಾದ ಆರ್ ವಿ ರಸ್ತೆ – ಬೊಮ್ಮಸಂದ್ರ ನಡುವೆ ಈ ಚಾಲಕ ರಹಿತ ರೈಲು ಸಂಚರಿಸಲಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ, ಈ ರೈಲನ್ನು ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತರಲಾಗುತ್ತದೆ.

ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಈ ರೈಲು, ಆರ್‌ವಿ ರಸ್ತೆ-ಬೊಮ್ಮಸಂದ್ರ ಲೈನ್‌ಗೆ ಪ್ರಾಯೋಗಿಕ ಸಂಚಾರ ನಡೆಸುತ್ತದೆ, ಚೆನ್ನೈ ಬಂದರಿನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಖಾಸಗಿ ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಚಾಲಕ ರಹಿತ ಆರು ಬೋಗಿಗಳ ಮೆಟ್ರೋ ರೈಲು ಜನವರಿ 24 ರಂದು ಶಾಂಘೈ ಬಂದರಿನಿಂದ ಹೊರಡಿ. ಸಮುದ್ರ ಮಾರ್ಗವಾಗಿ ಫೆಬ್ರವರಿ 6 ರಂದು ಚೆನ್ನೈ ಬಂದರಿಗೆ ಆಗಮಿಸಿದೆ.

ಕಸ್ಟಮ್ಸ್ ಕ್ಲಿಯರೆನ್ಸ್ ಪ್ರಕ್ರಿಯೆ ಮುಗಿಯಲು ಸುಮಾರು ಐದು ದಿನಗಳ ಸಮಯ ಬೇಕಾಗುತ್ತೆ. ರಸ್ತೆಯ ಮೂಲಕ ಎಲೆಕ್ಟ್ರಾನಿಕ್ಸ್ ಸಿಟಿಯ ಹೆಬ್ಬಗೋಡಿ ಡಿಪೋ ಕಡೆಗೆ ರೈಲನ್ನು ಸಾಗಿಸಲಾಗುತ್ತೆ. ಫೆಬ್ರವರಿ 18ರೊಳಗೆ ನಗರಕ್ಕೆ ತಲುಪುವ ನಿರೀಕ್ಷೆ ಇದೆ. ಆರು ಬೋಗಿಗಳ ಮೂಲ ಮಾದರಿಯ ರೈಲನ್ನು 19.15-ಕಿಮೀ ಹಳದಿ ಲೈನ್‌ನಲ್ಲಿ ಪ್ರಾಯೋಗಿಕ ಓಡಿಸಲು ಬಳಸಲಾಗುತ್ತದೆ, ಇದು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದಿಂದ ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕಿಸುತ್ತದೆ.

ಇದನ್ನೂ ಓದಿ: Namma Metro: ಮೆಟ್ರೋದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಕಾಮುಕರಿಗೆ ಚಾಟಿ ಬೀಸಿದ BMRCL, ಮಹತ್ವದ ನಿರ್ಧಾರ

ಈ ರೈಲನ್ನು ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ತಯಾರಿಸಿದೆ. ಡಿಸೆಂಬರ್ 2019 ಚೀನಾದ ಕಂಪನಿ 216 ಕೋಚ್‌ಗಳನ್ನು ಪೂರೈಸುವ ಒಪ್ಪಂದವನ್ನು ಪಡೆದುಕೊಂಡಿತು, 173 ವಾರಗಳಲ್ಲಿ ಬಿಎಂಆರ್ ಸಿಎಲ್‌ಗೆ ತಲುಪಿಸುವ ನಿರೀಕ್ಷೆಯಿದೆ. ಇವುಗಳಲ್ಲಿ 126 ಕೋಚ್‌ಗಳು (21 ಆರು ಕೋಚ್ ರೈಲುಗಳು) ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಿಗೆ, ಉಳಿದ 90 ಕೋಚ್‌ಗಳು (15 ಆರು ಬೋಗಿಗಳ ರೈಲುಗಳು) ಹಳದಿ ಮಾರ್ಗದಲ್ಲಿ ಸಂಚರಿಸಲಿವೆ.

ಈ ರೈಲು ನಗರಕ್ಕೆ ಬಂದ ನಂತರ, ರೈಲನ್ನು ಎಲೆಕ್ಟ್ರಾನಿಕ್ ಸಿಟಿ ಬಳಿಯ ಹೆಬ್ಬಗೋಡಿ ಡಿಪೋಗೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ಚೀನಾದ ಎಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲಿ ಅದನ್ನು ಜೋಡಿಸಲಾಗುತ್ತದೆ. ಇದರ ನಂತರ 8-10 ಸ್ಥಿರ ಪರೀಕ್ಷೆಗಳು, ಹಲವಾರು ಡೈನಾಮಿಕ್ ಪರೀಕ್ಷೆಗಳು, 15 ಮುಖ್ಯ ಪರೀಕ್ಷೆಗಳು ಮತ್ತು 7-8 ಇಂಟರ್ಫೇಸ್ ಪರೀಕ್ಷೆಗಳು ಸೇರಿದಂತೆ 32 ವಿಭಿನ್ನ ಪರೀಕ್ಷೆಗಳು ನಡೆಯುತ್ತವೆ. ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ನ ಮೇಲ್ವಿಚಾರಣೆಯಡಿಯಲ್ಲಿ ಮೇನ್‌ಲೈನ್‌ನಲ್ಲಿನ ಪರೀಕ್ಷೆಗಳು ಆಂದೋಲನ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

“ಪರೀಕ್ಷಾ ಫಲಿತಾಂಶಗಳನ್ನು ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರಿಗೆ (ಸಿಸಿಆರ್‌ಎಸ್) ಸಲ್ಲಿಸಬೇಕು ಮತ್ತು ನಂತರ ತಾಂತ್ರಿಕ ಮಂಜೂರಾತಿಗಾಗಿ ರೈಲ್ವೆ ಮಂಡಳಿಗೆ ಸಲ್ಲಿಸಬೇಕಾಗುತ್ತದೆ” ಎಂದು ಮೂಲಗಳು ತಿಳಿಸಿವೆ. “ಇಡೀ ಪ್ರಕ್ರಿಯೆಯು ಐದರಿಂದ ಆರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.”

ಪ್ರತಿ 90 ಸೆಕೆಂಡ್‌ಗೊಂದು ರೈಲು

ಚೈನೀಸ್ ನಿರ್ಮಿತ ರೈಲನ್ನು 90 ಸೆಕೆಂಡುಗಳ ಆವರ್ತನದಲ್ಲಿ ಚಾಲಕ ರಹಿತವಾಗಿ ಓಡಿಸಬಹುದು. ಕೋಚ್ 21 ಮೀಟರ್ ಉದ್ದ ಮತ್ತು 32 ರಿಂದ 37 ಟನ್ ತೂಗುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:57 am, Wed, 7 February 24