AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇರಳೆ ಮಾರ್ಗದ ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಪ್ರಾಯೋಗಿಕ ಸಂಚಾರ ಯಶಸ್ವಿ

ನೇರಳೆ ಮಾರ್ಗದ ಕೆಂಗೇರಿ-ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.

ನೇರಳೆ ಮಾರ್ಗದ ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಪ್ರಾಯೋಗಿಕ ಸಂಚಾರ ಯಶಸ್ವಿ
ನಮ್ಮ ಮೆಟ್ರೋ
ವಿವೇಕ ಬಿರಾದಾರ
| Updated By: Digi Tech Desk|

Updated on:Jul 31, 2023 | 10:46 AM

Share

ಬೆಂಗಳೂರು: ನೇರಳೆ ಮಾರ್ಗದ (Purple Line) ಕೆಂಗೇರಿ-ಚಲ್ಲಘಟ್ಟ (Kengeri-Challaghatta) ಮೆಟ್ರೋ (Metro) ನಿಲ್ದಾಣಗಳ ನಡುವಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಶನಿವಾರ ಬೆಳಿಗ್ಗೆ 11:27 ನಿಮಿಷದಿಂದ ಸಂಜೆ 4:15 ನಿಮಿಷದವರೆಗೆ ಪ್ರಾಯೋಗಿಕ ಸಂಚಾರ ನಡೆಸಿತು. ರೈಲು ಗಂಟೆಗೆ 10 ಕಿಮೀ ವೇಗದಲ್ಲಿ ಸಂಚರಿಸಿತು ಎಂದು ಬಿಎಂಆರ್​ಸಿಎಲ್​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಬಿಎಮ್​ಆರ್​ಸಿಎಲ್​ ಬುಧವಾರ ಬೈಯಪ್ಪನಹಳ್ಳಿ -ಕೆಆರ್‌ ಪುರ ಮೆಟ್ರೋನಿಲ್ದಾಣಗಳ ನಡುವೆ ಪ್ರಾಯೋಗಿಕ ಸಂಚಾರ ನಡೆಸಿತ್ತು.

ನೇರಳೆ ಮಾರ್ಗದ ಚಲಘಟ್ಟ-ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವಿನ 43 ಕಿಮೀ ಸಂಚಾರವನ್ನು ಅಗಸ್ಟ್​ ತಿಂಗಳಲ್ಲಿ ಆರಂಭಿಸಲು ಬಿಎಂಆರ್​ಸಿಎಲ್​ ಯೋಜನೆ ರೂಪಿಸಿದೆ. ಈ ಸಂಪೂರ್ಣ ಮಾರ್ಗವನ್ನು ತೆರೆಯುವುದರಿಂದ ಜನರು ಪಶ್ಚಿಮ ಭಾಗದಿಂದ ವೈಟ್​ಫೀಲ್ಡ್​​ (ಐಟಿ ಕಾರಿಡಾರ್​) ಸಂಚರಿಸಲು ಅನುಕೂಲವಾಗುತ್ತದೆ. ಈ ಮಾರ್ಗ ಆರಂಭವಾದರೇ ಪ್ರತಿದಿನ 80 ರಿಂದ 90 ಸಾವಿರ ಜನರು ಸಂಚರಿಸುವ ಸಾಧ್ಯತೆ ಇದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ, ಚಾರ್ಜ್ ಎಷ್ಟು?

ನಮ್ಮ ಮೆಟ್ರೋದ ಎರಡನೇ ವಿಭಾಗದ ಅಡಿಯಲ್ಲಿ, ಸಂಸ್ಥೆಯು ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ಮಾರ್ಗ ಆರಂಭಿಸಿತು. ಇದೇ ಮಾರ್ಗವನ್ನು ಯೋಜನೆಯ ಎರಡನೇ ಹಂತದಲ್ಲಿ ಪೂರ್ವ ಭಾಗದ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಮತ್ತು ಪಶ್ಚಿಮ ಭಾಗದಲ್ಲಿ ಮೈಸೂರು ರಸ್ತೆಯಿಂದ ಚಲ್ಲಘಟ್ಟದವರೆಗೆ ವಿಸ್ತರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:47 am, Mon, 31 July 23