AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ನಾಗಸಂದ್ರ ಮಾದಾವರ ಮಾರ್ಗ ಕಾರ್ಯಾಚರಣೆ ಮತ್ತೆ ವಿಳಂಬ: ಪ್ರಯಾಣಿಕರಿಂದ ಆಕ್ರೋಶ

ನಮ್ಮ ಮೆಟ್ರೋದ ವಿಸ್ತರಿತ ಯೋಜನೆಯಾದ ನಾಗಸಂದ್ರ ಹಾಗೂ ಮಾದಾವರ ಮಾರ್ಗ ಈ ವಾರ ಉದ್ಘಾಟನೆಯಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಮತ್ತೆ ಅಡ್ಡಿಯಾಗಿದೆ. ಸುರಕ್ಷತಾ ಆಯುಕ್ತರಿಂದ ಅನುಮತಿ ಸಿಕ್ಕಿದರೂ ಕಾರ್ಯಾಚರಣೆ ವಿಳಂಬವಾಗಲಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ನಮ್ಮ ಮೆಟ್ರೋ ನಾಗಸಂದ್ರ ಮಾದಾವರ ಮಾರ್ಗ ಕಾರ್ಯಾಚರಣೆ ಮತ್ತೆ ವಿಳಂಬ: ಪ್ರಯಾಣಿಕರಿಂದ ಆಕ್ರೋಶ
ನಮ್ಮ ಮೆಟ್ರೋ
Kiran Surya
| Edited By: |

Updated on: Oct 28, 2024 | 7:02 AM

Share

ಬೆಂಗಳೂರು, ಅಕ್ಟೋಬರ್ 28: ಅದು ನೆಲಮಂಗಲ, ಮಾಕಳಿ, ತುಮಕೂರು ಮಾರ್ಗದ ನಿವಾಸಿಗಳ ಹಲವು ವರ್ಷಗಳ ಕನಸು. ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ, ಆದರೆ ಮೆಟ್ರೋ ರೈಲು ಸಂಚಾರ ಮಾಡಲೇ ಇಲ್ಲ. ಕೊನೆಗೂ ರೈಲ್ವೆ ಸುರಕ್ಷತಾ ಆಯುಕ್ತರು ರೈಲು ಸಂಚಾರಕ್ಕೆ ಅನುಮತಿ ನೀಡಿ 20 ದಿನಗಳಾದರೂ ಮೆಟ್ರೋ ಅಧಿಕಾರಿಗಳು ಮಾತ್ರ ಇನ್ನೂ ಕಾರ್ಯಾಚರಣೆ ಶುರು ಮಾಡುವ ಲಕ್ಷಣ ಕಾಣಿಸುತ್ತಿಲ್ಲ.

ನಾಗಸಂದ್ರ ಟು ಮಾದಾವರ ಮೆಟ್ರೋ ಮಾರ್ಗ 2023 ರಲ್ಲಿ ಈ ಕಾರ್ಯಾಚರಣೆಗೆ ಸಿದ್ಧವಾಗಬೇಕಿತ್ತು. ಎಲ್ಲ ಸಿದ್ಧತೆ ಮುಗಿದಿದ್ದರೂ ಬಿಎಂಆರ್​ಸಿಎಲ್ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಕಾದು ಕುಳಿತಿದ್ದಾರೆ.

ಸರ್ಕಾರದ ವಿಳಂಬ ನೀತಿಯೇ ಕಾರಣ

ಸದ್ಯ ನಾಗಸಂದ್ರ ಟು ಮಾದಾವರ ಮೆಟ್ರೋ ಮಾರ್ಗ ಕಾರ್ಯಾಚರಣೆಗೆ ಸನ್ನದ್ಧವಾಗಿದೆ. ಈ ವಾರ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ ಎಂದು ಕಳೆದ ವಾರ ವರದಿಯಾಗಿತ್ತು. ಆದರೆ, ಸರ್ಕಾರಗಳ ವಿಳಂಬ ನೀತಿಯಿಂದ ಮತ್ತೆ ಮತ್ತೆ ಸಂಚಾರ ಆರಂಭಕ್ಕಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪ್ರಯಾಣಿಕರಿಂದ ಆಕ್ರೋಶ

ನಾಗಸಂದ್ರ ಟು ಮಾದಾವರ ಮೆಟ್ರೋ ಮಾರ್ಗದ ವಾಣಿಜ್ಯ ಸಂಚಾರಕ್ಕೆ ಅಕ್ಟೋಬರ್4 ರಂದೇ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಆದರೆ, 3.14 ಕಿಮೀ ಮೀಟರ್ ಮಾರ್ಗ ಉದ್ಘಾಟನೆ ಮಾಡದೆ ನಮ್ಮ ಮೆಟ್ರೋ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಶಿವಶಂಕರ್ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆಗೆ ಅಭಿಪ್ರಾಯ ಸಂಗ್ರಹ ಅವಧಿ ವಿಸ್ತರಣೆ

ಒಟ್ಟಿನಲ್ಲಿ ಮೆಟ್ರೋ ಸಂಚಾರ ಶುರುವಾಗಲಿದೆ ಎಂದು ಕಾದಿದ್ದ ನಾಗಸಂದ್ರ, ಮಾದಾವರ ಜನರಿಗೆ ನಿರಾಸೆ ಆಗಿರುವುದಂತು ನಿಜ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ