AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ನಮ್ಮ ಮೆಟ್ರೋ 3ನೇ ಹಂತದಲ್ಲಿ 2 ಹೊಸ ಮಾರ್ಗಕ್ಕೆ ಸಂಪುಟ ಅಸ್ತು: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ವಿವರ

ನಮ್ಮ ಮೆಟ್ರೋದ 3 ನೇ ಹಂತದ ಅಡಿಯಲ್ಲಿ ನಿರ್ಮಿಸಲಾಗುವ ಎರಡು ಹೊಸ ಮಾರ್ಗಗಳಿಗೆ ಕರ್ನಾಟಕ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ವಿಚಾರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, ಹೊಸ ಮಾರ್ಗಗಳು ಎಲ್ಲಿಂದ ಎಲ್ಲಿಯ ವರೆಗೆ ಇರಲಿವೆ? ಯಾವೆಲ್ಲ ಪ್ರದೇಶಗಳನ್ನು ಹಾದುಹೋಗಲಿವೆ ಎಂಬುದನ್ನು ತಿಳಿಸಿದ್ದಾರೆ. ಆ ಮಾಹಿತಿ ಇಲ್ಲಿದೆ.

Namma Metro: ನಮ್ಮ ಮೆಟ್ರೋ 3ನೇ ಹಂತದಲ್ಲಿ 2 ಹೊಸ ಮಾರ್ಗಕ್ಕೆ ಸಂಪುಟ ಅಸ್ತು: ಎಲ್ಲಿಂದ ಎಲ್ಲಿಗೆ? ಇಲ್ಲಿದೆ ವಿವರ
ನಮ್ಮ ಮೆಟ್ರೋ
Ganapathi Sharma
|

Updated on:Mar 15, 2024 | 7:26 AM

Share

ಬೆಂಗಳೂರು, ಮಾರ್ಚ್​​ 15: ನಮ್ಮ ಮೆಟ್ರೋ ಯೋಜನೆಯ 3 ನೇ (Namma Metro Phase 3) ಹಂತದಲ್ಲಿ ಎರಡು ಹೊಸ ಮಾರ್ಗಗಳನ್ನು ನಿರ್ಮಿಸಲು ಕರ್ನಾಟಕ ಸಚಿವ ಸಂಪುಟ (Karnataka Cabinet) ಗುರುವಾರ ಒಪ್ಪಿಗೆ ನೀಡಿದೆ. ಈ ಕುರಿತು ಸಂಪುಟ ಸಭೆಯ ನಂತರ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಮಾಹಿತಿ ನೀಡಿದ್ದಾರೆ. ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಟ್ರಾಫಿಕ್ ಆಗಿದ್ದು, ಇದಕ್ಕೆ ಮೆಟ್ರೋ ಸೂಕ್ತ ಆಯ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಸಂಚಾರ ದಟ್ಟಣೆ ಕೂಡ ಒಂದು. ಇದರ ನಿವಾರಣೆಗೆ ಮೆಟ್ರೋ ಉತ್ತಮ ಪರಿಹಾರವಾಗಿದೆ. ನಮ್ಮ ಮೆಟ್ರೋದ 2ಎ ಮತ್ತು 2ಬಿ ಹಂತಗಳು ಒಂದು ಅಥವಾ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ. ನಮ್ಮ ಮೆಟ್ರೋ 3 ನೇ ಹಂತಕ್ಕೆ ಸಂಪುಟ ಅನುಮೋದನೆ ನೀಡಿದೆ. ನಮ್ಮ ಮೆಟ್ರೋದ 3 ನೇ ಹಂತದ ಅಡಿಯಲ್ಲಿ ನಾವು ಎರಡು ಮಾರ್ಗಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

ನಮ್ಮ ಮೆಟ್ರೋದ 3 ನೇ ಹಂತವು 44.65 ಕಿ.ಮೀ. ಕ್ರಮಿಸಲಿದ್ದು, ಎರಡು ಹೊಸ ಮಾರ್ಗಗಳನ್ನು ಹೊಂದಿರಲಿದೆ. ಒಂದು ಮಾರ್ಗವು ಜೆಪಿ ನಗರದಿಂದ ಕೆಂಪಾಪುರ ಮತ್ತು ಎರಡನೇ ಮಾರ್ಗವು ಹೊಸಹಳ್ಳಿಯಿಂದ ಕಡಬಗೆರೆ ಸಂಪರ್ಕಿಸಲಿದೆ. ನಮ್ಮ ಮೆಟ್ರೋದ 3 ನೇ ಹಂತಕ್ಕೆ ಸುಮಾರು 15,611 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ರಾಜ್ಯ ಸರ್ಕಾರವು ನೀಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋದ 3 ನೇ ಹಂತದ ಒಂದು ಮಾರ್ಗ ಹೆಬ್ಬಾಳ ಫ್ಲೈ ಓವರ್‌ನಿಂದ ಜೆಪಿ ನಗರಕ್ಕೆ ಸಂಪರ್ಕ ಕಲ್ಪಿಸಲಿದ್ದು, 32.15 ಕಿ.ಮೀ. ಇರಲಿದೆ. ಇದು ಗೊರುಗುಂಟೆ ಪಾಳ್ಯ, ತುಮಕೂರು ರಸ್ತೆ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಮೂಲಕ ಜೆಪಿ ನಗರಕ್ಕೆ ಸಂಪರ್ಕ ಕಲ್ಪಿಸಲಿದೆ. ಎರಡನೇ ಮಾರ್ಗ ವಿಜಯನಗರ ಸಮೀಪದ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ. ದೂರದ್ದಾಗಿದೆ. ನಮ್ಮ ಮೆಟ್ರೋದ 3 ನೇ ಹಂತಕ್ಕೆ 15,611 ಕೋಟಿ ರೂಪಾಯಿಗಳ ಬಜೆಟ್ ಅಗತ್ಯವಿದೆ, ಇದು 2028 ರ ವೇಳೆಗೆ ಸಿದ್ಧವಾಗಲಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ನೀರಿನ ಬಿಕ್ಕಟ್ಟು ಪರಿಹರಿಸಲು ಬಂದಿವೆ 4 ಆ್ಯಪ್! ಇದರಿಂದೇನು ಪ್ರಯೋಜನ? ಇಲ್ಲಿದೆ ನೋಡಿ

2022 ರ ನವೆಂಬರ್​ನಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾದ 3 ನೇ ಹಂತದ ವಿಸ್ತೃಥ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ದೊರೆತಿದೆ ಎಂದು ಸಚಿವರು ಹೇಳಿದ್ದಾರೆ. 3 ನೇ ಹಂತದ ನಿರ್ಮಾಣ ಕಾಮಗಾರಿ ಆರಂಭಿಸಲು ಬಜೆಟ್‌ನಲ್ಲಿ 1003.47 ಕೋಟಿ ರೂಪಾಯಿಗಳನ್ನು ನಿಗದಿಪಡಿಸುವಂತೆ ನಮ್ಮ ಮೆಟ್ರೋವನ್ನು ನಿರ್ವಹಿಸುವ ಬಿಎಂಆರ್​​ಸಿಎಲ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:23 am, Fri, 15 March 24