ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬರ್ತಿವೆ 96 ಹೊಸ ರೈಲು
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬರೋಬ್ಬರಿ 96 ಹೊಸ ರೈಲುಗಳು ಶೀಘ್ರದಲ್ಲೇ ಮೆಟ್ರೋ ಸೇರಲಿವೆ. ಇದರಿಂದ ಮೆಟ್ರೋ ರೈಲುಗಳ ಸಂಖ್ಯೆ 160ಕ್ಕೆ ಏರಿಕೆಯಾಗಲಿದ್ದು, 4 ನಿಮಿಷಕ್ಕೊಂದರಂತೆ ರೈಲು ಸಂಚಾರಕ್ಕೆ ಲಭ್ಯವಾಗಲಿವೆ. ಇದು ಬೆಂಗಳೂರು ಮೆಟ್ರೋ ಪ್ರಯಾಣವನ್ನು ಮತ್ತಷ್ಟು ವೇಗಗೊಳಿಸಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆ ಇದೆ.

ಬೆಂಗಳೂರು, ಡಿಸೆಂಬರ್ 08: ಯೆಲ್ಲೋ ಲೈನ್ ಆರಂಭದ ಬೆನ್ನಲ್ಲೇ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಒಂದೆರಡಲ್ಲ ಬರೋಬ್ಬರಿ 96 ಹೊಸ ರೈಲುಗಳ ನಮ್ಮ ಮೆಟ್ರೋಗೆ ಬರುತ್ತಿದ್ದು, ಅವುಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ 4 ನಿಮಿಷಕ್ಕೊಂದರಂತೆ ರೈಲು ಸಂಚಾರಕ್ಕೆ ಸಿದ್ಧತೆ ನಡೆದಿದೆ.
ನಮ್ಮ ಮೆಟ್ರೋ ಬಳಿ ಸದ್ಯ ಗ್ರೀನ್, ಪರ್ಪಲ್, ಯೆಲ್ಲೋ ಲೈನ್ಗಳು ಸೇರಿ ಒಟ್ಟು 64 ರೈಲುಗಳಿವೆ. ಆ ಪೈಕಿ ಗ್ರೀನ್ ಲೈನ್, ಪರ್ಪಲ್ ಲೈನ್ನಲ್ಲಿ 58, ಯೆಲ್ಲೋ ಲೈನ್ನಲ್ಲಿ 6 ರೈಲುಗಳು ಹಾಲಿ ಕಾರ್ಯಾಚರಣೆ ನಡೆಸುತ್ತಿವೆ. ಈಗ ಇರುವ ಲೈನ್ಗಳಿಗೆ ಹೊಸ ರೈಲುಗಳು ಸೇರಿ, ಇನ್ನೂ ಆರಂಭವಾಗಬೇಕಿರುವ ಬ್ಲೂ ಮತ್ತು ಪಿಂಕ್ ಲೈನ್ಗಳಿಗೂ ರೈಲುಗಳನ್ನ ಆರ್ಡರ್ ನೀಡಲಾಗಿದೆ. ಇವುಗಳೆಲ್ಲ ಆಗಮಿಸಿದ ಬಳಿಕ ಹಾಲಿ ಇರುವ ನಮ್ಮ ಮೆಟ್ರೋ ರೈಲುಗಳ ಸಂಖ್ಯೆ 160ಕ್ಕೆ ಏರಿಕೆಯಾಗಲಿದೆ.
ಇದನ್ನೂ ಓದಿ: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್ಗೆ ಬಿಡ್ ಕರೆದ ಬಿಎಂಆರ್ ಸಿಎಲ್
ಯಾವ ಲೈನ್ಗೆ ಎಷ್ಟು ಹೊಸ ರೈಲು?
- ಗ್ರೀನ್ ಮತ್ತು ಪರ್ಪಲ್ ಲೈನ್ಗೆ 21 ಹೊಸ ರೈಲು
- ಯೆಲ್ಲೋ ಲೈನ್ಗೆ 9 ಹೊಸ ರೈಲು, ಇವುಗಳ ಜೊತೆ ಹೆಚ್ಚುವರಿಯಾಗಿ 6 ರೈಲುಗಳ ಆರ್ಡರ್
- ಬ್ಲ್ಯೂ ಲೈನ್ಗೆ 37 ಹೊಸ ರೈಲು. ಆ ಪೈಕಿ ಸಿಲ್ಕ್ ಬೋರ್ಡ್ ಟು ಕೆಆರ್ ಪುರ 16 ರೈಲು ಮತ್ತು ಕೆ.ಆರ್. ಪುರ ಟು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 21 ರೈಲು
- ಪಿಂಕ್ ಲೈನ್ಗೆ 26 ಹೊಸರೈಲು, ಇವುಗಳ ಜೊತೆ ಹೆಚ್ಚುವರಿಯಾಗಿ 7 ರೈಲುಗಳ ಆರ್ಡರ್
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಪ್ರಮುಖ ಪಾತ್ರ ವಹಿಸಿದೆ. ಇವುಗಳ ನಡುವಿನ ಸಂಚಾರ ಸಮಯ ಮತ್ತಷ್ಟು ಇಳಿಕೆಯಾದಲ್ಲಿ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಬಹು ಸಮಯದಿಂದ ಮೆಟ್ರೋಗಳ ನಡುವಿನ ಸಂಚಾರ ಸಮಯ ಇಳಿಸಬೇಕೆಂಬ ಬೇಡಿಕೆ ಇದ್ದು, ಹೊಸ ರೈಲುಗಳ ಸೇರ್ಪಡೆ ಇದನ್ನು ಈಡೇರಿಸಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



