AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮೆಟ್ರೋಗೆ ಬರಲಿವೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳು

ನಮ್ಮ ಮೆಟ್ರೋ ಪಿಂಕ್ ಲೈನ್‌ನಲ್ಲಿ ಮೊದಲ ಬಾರಿಗೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳನ್ನು (PSDs) ಪರಿಚಯಿಸುತ್ತಿದೆ. ಇದು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಿ, ಅಹಿತಕರ ಘಟನೆಗಳನ್ನು ತಡೆಯುತ್ತದೆ. ಸುರಂಗ ಮಾರ್ಗಗಳಲ್ಲಿ ವಾಯು ವಿನಿಮಯವನ್ನು ಸುಧಾರಿಸುತ್ತದೆ. ದೆಹಲಿ, ಮುಂಬೈ ಮೆಟ್ರೋಗಳಲ್ಲಿರುವ ಈ ತಂತ್ರಜ್ಞಾನ ಬೆಂಗಳೂರಿನ ಪಿಂಕ್ ಲೈನ್, ಮೆಜೆಸ್ಟಿಕ್ ಮತ್ತು ಸೆಂಟ್ರಲ್ ಕಾಲೇಜು ನಿಲ್ದಾಣಗಳಲ್ಲಿ ಅಳವಡಿಕೆಯಾಗಲಿದೆ. ಪ್ರತಿ ನಿಲ್ದಾಣಕ್ಕೆ 9 ಕೋಟಿ ರೂ. ವೆಚ್ಚವಾಗಲಿದೆ.

ಬೆಂಗಳೂರು ಮೆಟ್ರೋಗೆ ಬರಲಿವೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Dec 02, 2025 | 11:55 AM

Share

ಬೆಂಗಳೂರು, ಡಿ.2: ಬೆಂಗಳೂರು ಮೆಟ್ರೋದಲ್ಲಿ (Namma Metro) ಹೊಸ ಯೋಜನೆಯೊಂದು ಬರಲಿದೆ. ನಮ್ಮ ಮೆಟ್ರೋ ಮೊದಲ ಬಾರಿಗೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳನ್ನು (ಪಿಎಸ್‌ಡಿ) ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದು, ಈ ಯೋಜನೆ ಮುಂಬರುವ ಪಿಂಕ್ ಲೈನ್‌ನಲ್ಲಿರುವ ನಿಲ್ದಾಣಗಳಿಂದ ಆರಂಭವಾಗಲಿದೆ. ಈಗಾಗಲೇ ಪೂರ್ಣ ಪ್ರಮಾಣದ ಮೂಲ ಮಾದರಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ವರದಿಯೊಂದು ಹೇಳಿದೆ. 21.26 ಕಿ.ಮೀ. ಕಲೇನಾ ಅಗ್ರಹಾರ-ನಾಗವಾರ ಕಾರಿಡಾರ್‌ನಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಬಿಎಂಆರ್‌ಸಿಎಲ್ ಪಿಎಸ್‌ಡಿಗಳು ಸೇರಿದಂತೆ ಪ್ರಮುಖ ವ್ಯವಸ್ಥೆಗಳ ಹಳಿಗಳ ಜೋಡಣೆ ಕಾರ್ಯವನ್ನು ಆರಂಭಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ಬಾಗಿಲುಗಳು ಎಷ್ಟು ಉಪಯುಕ್ತವಾಗಿದೆ ಎಂದರೆ, ಮೆಟ್ರೋ ಅದರ ಗಮ್ಯಸ್ಥಾನದಲ್ಲಿ ಸರಿಯಾಗಿ ಬಂದು ನಿಂತಾಗ ಮಾತ್ರ ಈ ಬಾಗಿಲು ತೆರೆಯುತ್ತದೆ. ಜತೆಗೆ ಇದು ಜನ ಮೆಟ್ರೋ ಹತ್ತುವಾಗ ಆಸ್ಮಿಕವಾಗಿ ಬಾಗಿಲು ಬೀಳುವುದನ್ನು ಕೂಡ ತಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪವರ್​​ ಹಳಿಗಳ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದೆ. ಆದರೆ ಪಿಎಸ್‌ಡಿಗಳಿಂದ ಇಂಥಹ ಪ್ರಕರಣಗಳು ಕಡಿಮೆ ಆಗಲಿದೆ. ಇದರ ಜತೆಗೆ PSDಗಳು ಪ್ಲಾಟ್‌ಫಾರ್ಮ್‌ಗಳು ಸುರಂಗ ಮಾರ್ಗದಲ್ಲಿ ಉಂಟಾಗುವ ವಾಯು ವಿನಿಮಯವನ್ನು ಕಡಿಮೆ ಮಾಡುತ್ತದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿರುವ ಮೆಟ್ರೋಗಳಲ್ಲಿ ಈಗಾಗಲೇ, ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆದರೆ ಬೆಂಗಳೂರಿನಲ್ಲಿರುವ 83 ನಿಲ್ದಾಣಗಳಲ್ಲಿ ಯಾವುದಕ್ಕೂ ಇದನ್ನು ಅಳವಡಿಸಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: “ನಾನು ಶಿಮ್ಲಾದಲ್ಲಿ ಇಲ್ಲ, ಕೋರಮಂಗಲದಲ್ಲಿ ಇದ್ದೇನೆ”: ಮತ್ತೆ ವೈರಲ್​​​​​ ಆಯಿತು ಬೆಂಗಳೂರಿನ ಹವಾಮಾನ

ಇನ್ನು ಈಗಾಗಲೇ ಮಾದರಿ ವಿದ್ಯುತ್ ಸ್ಥಾವರವನ್ನು ಹೊಂದಿರುವ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಿಂದ ಈ ಯೋಜನೆಯನ್ನು ಪ್ರಾರಂಭ ಮಾಡುವ ಸಾಧ್ಯತೆಗಳು ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಯೋಜನೆಗೆ ಅನುಮೋದನೆ ಸಿಕ್ಕ ನಂತರ ಆರು ತಿಂಗಳ ಅವಧಿಯಲ್ಲಿ ಪಿಂಕ್ ಲೈನ್‌ನಲ್ಲಿರುವ ಎಲ್ಲಾ 12 ಸುರಂಗ ಮಾರ್ಗಗಳಿಗೂ ಪಿಎಸ್‌ಡಿಗಳನ್ನು ಅಳವಡಿಸಲಾಗುವುದು ಎಂದು ಹಿರಿಯ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಯೊಂದು ದ್ವಾರವು ಸುಮಾರು 2.15 ಮೀಟರ್ ಎತ್ತರವಿದ್ದು, ಪ್ಲಾಟ್‌ಫಾರ್ಮ್ ಗೇಟ್‌ಗಳು 1.4 ಮೀಟರ್ ಎತ್ತರವಿದೆ. ಹಾಗೂ 128 ಮೀಟರ್ ಪ್ಲಾಟ್‌ಫಾರ್ಮ್ ಅನ್ನು ವ್ಯಾಪಿಸಿರುತ್ತವೆ. ಪ್ರತಿ ನಿಲ್ದಾಣದ ವೆಚ್ಚ 9 ಕೋಟಿ ರೂ. ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಇದು ಜೂನ್ 2024ರಲ್ಲಿ ಆಲ್ಸ್ಟೋಮ್ ಟ್ರಾನ್ಸ್‌ಪೋರ್ಟ್‌ ಜತೆಗೆ ಮಾಡಿಕೊಂಡ ದೊಡ್ಡ ಒಪ್ಪಂದದ ಭಾಗವಾಗಿದೆ. ಇನ್ನು ಈ ಯೋಜನೆಯನ್ನು ಪಿಂಕ್ ಲೈನ್‌ ಮಾತ್ರವಲ್ಲದೆ, ಪರ್ಪಲ್ ಲೈನ್‌ನಲ್ಲಿರುವ ಮೆಜೆಸ್ಟಿಕ್ ಮತ್ತು ಸೆಂಟ್ರಲ್ ಕಾಲೇಜು ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ