ಬೆಂಗಳೂರು: ರಷ್ಯಾ-ಉಕ್ರೇನ್ ಯುದ್ಧದಲ್ಲಿ(Russo-Ukrainian War) ಬಲಿಯಾದ ವಿದ್ಯಾರ್ಥಿ ನವೀನ್ ಪೋಷಕರು ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು(PM Narendra Modi) ಭೇಟಿಯಾಗಲಿದ್ದಾರೆ. ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ನವೀನ್ ಪೋಷಕರಿಗೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ವಸತಿಗೃಹದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್, ತಾಯಿ ವಿಜಯಲಕ್ಷ್ಮೀ, ಸಹೋದರ ಹರ್ಷಗೆ ಮಾತ್ರ ಪ್ರಧಾನಿ ಮೋದಿ ಭೇಟಿಗೆ ಅವಕಾಶ ನೀಡಲಾಗಿದ್ದು ಮೃತ ನವೀನ್ ಕುಟುಂಬಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ನಾಳೆಯ ಭೇಟಿಗೆ ವ್ಯವಸ್ಥೆ ಮಾಡಿಸಿದ್ದಾರೆ. ಸಿಎಂ ಬೊಮ್ಮಾಯಿ ಖುದ್ದು ಫೋನ್ ಮಾಡಿ ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಕರೆಸಿದ್ದಾರೆ.
ಇನ್ನು ಪ್ರಧಾನಿ ಭೇಟಿ ಬಗ್ಗೆ ಟಿವಿ9ಗೆ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್ ಪ್ರತಿಕ್ರಿಯೆ ನೀಡಿದ್ದಾರೆ. ಮಗನ ಮೃತದೇಹ ಬರುತ್ತೋ ಇಲ್ವೋ ಎಂಬ ಆತಂಕ ಆಗಿತ್ತು. 21 ದಿನಗಳ ಬಳಿಕ ಉಕ್ರೇನ್ನಿಂದ ಮೃತದೇಹ ತರಲಾಗಿತ್ತು. ಇದಕ್ಕೆ ಕಾರಣರಾದ ಮೋದಿ, ಬೊಮ್ಮಾಯಿಗೆ ಧನ್ಯವಾದಗಳು. ಆಗ ಪ್ರಧಾನಿ ಮೋದಿ ಕರೆ ಮಾಡಿ ನಮಗೆ ಸಾಂತ್ವನ ಹೇಳಿದ್ರು. ಇದೀಗ ಮೋದಿ ಭೇಟಿಗೆ ನಾಳೆ ಮಧ್ಯಾಹ್ನ ಅವಕಾಶ ಸಿಕ್ಕಿದೆ ಎಂದು ಟಿವಿ9ಗೆ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್ ತಿಳಿಸಿದ್ದಾರೆ. ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ; ಮೋದಿ ಭೇಟಿ ಹಿನ್ನೆಲೆ ಹಲವು ರಸ್ತೆಗಳು ಬಂದ್, ಬದಲಿ ವ್ಯವಸ್ಥೆ
ಉತ್ತಮ ಅಂಕ ಪಡೆದರೂ ಭಾರತದಲ್ಲಿ ನನ್ನ ಮಗನಿಗೆ ವೈದ್ಯಕೀಯ ಸೀಟು ಸಿಗಲಿಲ್ಲ. ನವೀನ್ಗೆ ಆದ ಅನ್ಯಾಯ ಬೇರೆ ಯಾವ ಮಕ್ಕಳಿಗೆ ಆಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಬೇರೆ ವ್ಯವಸ್ಥೆಗೆ ಮುಂದಾಗಬೇಕು. ಉಕ್ರೇನ್ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಓದಲು ಅವಕಾಶ ಕೊಡಿ. ಈ ರೀತಿಯ ಮನವಿಯನ್ನ ಮೋದಿ ಬಳಿ ಮಾಡಿಕೊಳ್ಳುತ್ತೇವೆ ಎಂದು ಟಿವಿ9ಗೆ ನವೀನ್ ತಾಯಿ ವಿಜಯಲಕ್ಷ್ಮೀ ಹೇಳಿದ್ರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ