ಹೆತ್ತ ಕರುಳಿನ ಕಣ್ಣೆದುರೇ ಮಗುವಿನ ಮೇಲೆ ಹರಿದ ಲಾರಿ! ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ 4 ವರ್ಷದ ಕಂದಮ್ಮ

ನೆಲಮಂಗಲದ ಹನುಮಂತೇಗೌಡನಪಾಳ್ಯದಲ್ಲಿ ಯುಗಾದಿ ಹಬ್ಬದ ಬಳಿಕ ದೇವಸ್ಥಾನಕ್ಕೆ ಹೊರಟಿದ್ದ 4 ವರ್ಷದ ನಿಶಿಕಾ, ಲಾರಿ ಅಪಘಾತಕ್ಕೆ ಬಲಿಯಾಗಿದ್ದಾಳೆ. ತಾಯಿ ಕಣ್ಣೆದುರೇ ನಡೆದ ಈ ದುರಂತದಲ್ಲಿ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿ ಮತ್ತು ಇನ್ನೊಂದು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಹೆತ್ತ ಕರುಳಿನ ಕಣ್ಣೆದುರೇ ಮಗುವಿನ ಮೇಲೆ ಹರಿದ ಲಾರಿ! ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ 4 ವರ್ಷದ ಕಂದಮ್ಮ
ರಸ್ತೆ ಅಪಘಾತ

Updated on: Mar 21, 2026 | 4:47 PM

ನೆಲಮಂಗಲ, ಮಾ.21: ಯುಗಾದಿ ಹಬ್ಬ ಮುಗಿಸಿ ಸಡಗರದಿಂದ ದೇವಸ್ಥಾನಕ್ಕೆ ಹೊರಟಿದ್ದ ಕುಟುಂಬಕ್ಕೆ ಕಾದಿತ್ತು ವಿಧಿಯ ಆಟ. ಶನಿವಾರದ ಹಿನ್ನೆಲೆ ಆಂಜನೇಯ ಸ್ವಾಮಿಯ ದರ್ಶನ ಪಡೆಯಲು ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ತಾಯಿಯ ಕಣ್ಣೆದುರೇ ಯಮಸ್ವರೂಪಿಯಾಗಿ ಬಂದ ಕ್ಯಾಂಟ್ರೋ ಲಾರಿ, ನಾಲ್ಕು ವರ್ಷದ ಮಗುವಿನ ಮೇಲೆ ಹರಿದು ಸಜೀವ ದಹನ ಮಾಡಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನುಮಂತೇಗೌಡನ ಪಾಳ್ಯದಲ್ಲಿ ನಡೆದಿದೆ.ನಾಲ್ಕು ವರ್ಷದ ನಿಶಿಕಾ ಮೃತಪಟ್ಟ ದುರ್ದೈವಿ. ಈಕೆ ರಾಜೇಂದ್ರ ಮತ್ತು ಲಾವಣ್ಯ ದಂಪತಿಯ ಮೊದಲ ಮಗಳು.

ತಾಯಿ ಲಾವಣ್ಯ ಅವರು ತನ್ನ ಎರಡನೇ ಮಗುವನ್ನು ಕಂಕಳಲ್ಲಿ ಇರಿಸಿಕೊಂಡು, ಮೊದಲ ಮಗಳು ನಿಶಿಕಾಳ ಕೈಹಿಡಿದು ಗೊಲ್ಲಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬಂದ ಕ್ಯಾಂಟ್ರೋ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಮಗುವಿನ ಮೇಲೆ ಹರಿದಿದೆ.

ಇದನ್ನೂ ಓದಿ: ಮಲ್ಪೆಯಲ್ಲಿ ಮೀನಿನ ಬೆಲೆ ಪಾತಾಳಕ್ಕೆ! ಮಾಂಜಿ, ಅಂಜಲ್ ಬೆಲೆ ಎಷ್ಟಿದೆ ಗೊತ್ತಾ? : ಮೀನಿನ ದರ ಪಟ್ಟಿ ಇಲ್ಲಿದೆ ನೋಡಿ

ಲಾರಿ ತಾಯಿ ಮತ್ತು ಮಗುವಿನ ಮೇಲೆಯೇ ಬಂದಿದ್ದರೂ, ತಾಯಿ ಲಾವಣ್ಯ ಮತ್ತು ಕಂಕಳಲ್ಲಿದ್ದ ಮತ್ತೊಂದು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ನಿಶಿಕಾ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾಳೆ.ಅಪಘಾತದಿಂದ ರೊಚ್ಚಿಗೆದ್ದ ಸ್ಥಳೀಯರು ಲಾರಿಯ ಗಾಜುಗಳನ್ನು ಪುಡಿಪುಡಿ ಮಾಡಿ, ಚಾಲಕನಿಗೆ ತಕ್ಕ ಶಾಸ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ವರದಿ: ಮಂಜುನಾಥ್ ನೆಲಮಂಗಳ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
Follow Us