ಬೆಂಗಳೂರಿನ ಹೆಬ್ಬಾಳ-ಕೆಂಪಾಪುರ ಜಂಕ್ಷನ್ನಲ್ಲಿ ಇಂದಿನಿಂದ ಹೊಸ ರೂಲ್ಸ್: ಸವಾರರ ಮಿಶ್ರಪ್ರತಿಕ್ರಿಯೆ
ಈಶಾನ್ಯ ವಿಭಾಗ ಸಂಚಾರ ಡಿಸಿಪಿ ಸವಿತಾ ಈ ಕುರಿತಾಗಿ ಹೇಳಿಕೆ ನೀಡಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಂದಿನಿಂದ ಕೆಲ ಡೈವರ್ಷನ್ ಮಾಡಲಾಗಿದೆ. ಏರ್ ಪೋರ್ಟ್ ಕಡೆಯಿಂದ ಬರುವರು ನೇರವಾಗಿ ಹೆಬ್ಬಾಳ ಮೇಲ್ಸೇತುವೆ ಹೋಗಬಹುದಾಗಿದೆ.
ಬೆಂಗಳೂರು: ಹೆಬ್ಬಾಳ ಕೆಂಪಾಪುರ ಜಂಕ್ಷನ್ನಲ್ಲಿ ಇಂದಿನಿಂದ ಹೊಸ ರೂಲ್ಸ್ ಶುರು (New Rules) ಮಾಡಿದ್ದು, ಟ್ರಾಫಿಕ್ ಪೊಲೀಸರ ಹೊಸ ಪ್ರಯತ್ನ ಆರಂಭ ಮಾಡಿದ್ದಾರೆ. ಏರ್ಪೋರ್ಟ್ ಸರ್ವಿಸ್ ರಸ್ತೆಯಲ್ಲಿ ಬರುವ ಎಲ್ಲಾ ವಾಹನಗಳು ಮೈನ್ ರೋಡ್ಗೆ ಎಂಟ್ರಿಯಾಗದಂತೆ ನಿರ್ಬಂಧ ಹೇರಲಾಗಿದೆ. ಎರಡು ಕಡೆಗಳಲ್ಲಿ ಮೈನ್ ರೋಡ್ಗೆ ಎಂಟ್ರಿಯಾಗದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ನೇರವಾಗಿ ಹೆಬ್ಬಾಳ ಫ್ಲೈಓವರ್ ಕೆಳಭಾಗದ ಸಿಗ್ನಲ್ನಲ್ಲಿ ಎಡ ತಿರುವು ಪಡೆದು ಸಿಟಿಗೆ ಎಂಟ್ರಿಯಾಗಬೇಕಿದೆ. ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಪೊಲೀಸರು ಕೈ ಹಾಕಿದ್ದು, ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ರಸ್ತೆ ಡವೈರ್ಸನ್ ಬಗ್ಗೆ ಟ್ರಾಫಿಕ್ ಪೊಲೀಸರು ಹೇಳುತ್ತಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದಲೇ ಹೊಸ ರೂಲ್ಸ್ ಶುರುವಾಗಿದ್ದು, ಹೆಬ್ಬಾಳ ಕೆಂಪಾಪುರ ಜಂಕ್ಷನ್ ಬೆಂಗಳೂರಿನ ಟ್ರಾಫಿಕ್ ಹಾಟ್ ಸ್ಪಾಟ್ಗಳಲ್ಲೊಂದಾಗಿದೆ. ಹೊಸ ಪ್ರಯತ್ನದ ಮುಖಾಂತರ ಟ್ರಾಫಿಕ್ ಕಂಟ್ರೋಲ್ಗೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಹಿನ್ನೆಲೆ: ಪರಿಹಾರ ಕಂಡುಕೊಳ್ಳಲು ಟ್ರಾಫಿಕ್ ಜಂಕ್ಷನ್‌ಗಳಿಗೆ ಜಂಟಿ ರೌಂಡ್ಸ್
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಂದಿನಿಂದ ಕೆಲ ಡೈವರ್ಷನ್
ಈಶಾನ್ಯ ವಿಭಾಗ ಸಂಚಾರ ಡಿಸಿಪಿ ಸವಿತಾ ಈ ಕುರಿತಾಗಿ ಹೇಳಿಕೆ ನೀಡಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಂದಿನಿಂದ ಕೆಲ ಡೈವರ್ಷನ್ ಮಾಡಲಾಗಿದೆ. ಏರ್ ಪೋರ್ಟ್ ಕಡೆಯಿಂದ ಬರುವರು ನೇರವಾಗಿ ಹೆಬ್ಬಾಳ ಮೇಲ್ಸೇತುವೆ ಹೋಗಬಹುದು. ಸರ್ವಿಸ್ ರಸ್ತೆಯಲ್ಲಿ ಬರುವರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಲವರಿಗೆ ಮಾಹಿತಿ ಗೊತ್ತಿರುವುದಿಲ್ಲ, ಬಿಬಿಎಂಪಿಯಿಂದ ಸೂಚನಾ ಫಲಕಗಳನ್ನ ಸಹ ಹಾಕಲಾಗಿದೆ. ಬಸ್ ನಿಲ್ದಾಣ ಮತ್ತು ಆಟೋ ನಿಲ್ದಾಣ ಸ್ಥಳ ಬದಲಾವಣೆ ಮಾಡಲಾಗಿದೆ. ಮೂರ್ನಾಲ್ಕು ದಿನಗಳ ಕಾಲ ಪ್ರಯತ್ನ ಮಾಡಲಾಗುತ್ತೆ ನೋಡೋಣ ಎಂದು ಹೇಳಿದರು.
ಇದನ್ನೂ ಓದಿ: ಸಮನ್ವಯ ಸಮಿತಿ ಸದಸ್ಯರು ಟ್ರಾಫಿಕ್ ಕ್ಲಿಯರ್ ಮಾಡಲು ಪರಿಶೀಲನೆ ಮಾಡುತ್ತಿದ್ದಾರೆ: ತುಷಾರ್ ಗಿರಿನಾಥ್
ಸವಾರರ ಮಿಶ್ರಪ್ರತಿಕ್ರಿಯೆ
ಇನ್ನೂ ಸಂಚಾರಿ ಪೊಲೀಸರ ಹೊಸ ಪ್ರಯತ್ನಕ್ಕೆ ಸವಾರರ ಮಿಶ್ರಪ್ರತಿಕ್ರಿಯೆ ನೀಡಿದ್ದು, ಹೆಬ್ಬಾಳ ಟ್ರಾಫಿಕ್ ನಿಯಂತ್ರಿಸುವ ಹೊಸ ಪ್ರಯತ್ನಕ್ಕೆ ಕಾರ್ ಸವಾರ ಗರಂ ಆಗಿದ್ದಾರೆ. ಸರ್ವಿಸ್ ರೊಡ್ ಬ್ಲಾಕ್ನಿಂದ ಸ್ಥಳೀಯ ಸವಾರರಿಗೆ ಸಮಸ್ಯೆ ಮಾಡಲು ಮುಂದಾಗಿದ್ದು, ಇದು ಫ್ಲಾಪ್ ಆಗಲಿದೆ ಬದಲಾವಣೆ ಬೇಡ ಎಂದು ಕಾರು ಚಾಲಕರು ಹೇಳುತ್ತಿದ್ದಾರೆ.