ಬಾಂಗ್ಲಾ ಗಲ್ಲು ಶಿಕ್ಷೆ ಅಪರಾಧಿ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಸೇಫ್! ಆದ್ರೆ ಕೊನೆಗೂ ಕೋಲ್ಕತ್ತಾ ಪೊಲೀಸರಿಗೆ ಸಿಕ್ಕಿಬಿದ್ದ, ಇವನಿಗಿತ್ತು ಅಲ್ ಖೈದಾ ನಂಟು

ಸದ್ಯ ತಲೆಮರೆಸಿಕೊಂಡಿದ್ದ ಫೈಜಲ್ನನ್ನು ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಫೈಜಲ್ ಅಲ್ ಖೈದ ಸಂಘಟನೆಗಾಗಿ ಕೆಲಸ ಮಾಡ್ತಿದ್ದ. ಮದರಸಗಳಿಗೆ ತೆರಳಿ ಜಿಹಾದಿ ಬಗ್ಗೆ ಪ್ರವಚನ ನೀಡ್ತಿದ್ದ ಎಂದು ತಿಳಿದು ಬಂದಿದೆ.

ಬಾಂಗ್ಲಾ ಗಲ್ಲು ಶಿಕ್ಷೆ ಅಪರಾಧಿ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಸೇಫ್! ಆದ್ರೆ ಕೊನೆಗೂ ಕೋಲ್ಕತ್ತಾ ಪೊಲೀಸರಿಗೆ ಸಿಕ್ಕಿಬಿದ್ದ, ಇವನಿಗಿತ್ತು  ಅಲ್ ಖೈದಾ ನಂಟು
ಅಪರಾಧಿ ಫೈಜಲ್ ಅಹ್ಮದ್
Follow us
| Updated By: ಆಯೇಷಾ ಬಾನು

Updated on:Jul 07, 2022 | 10:11 PM

ಬೆಂಗಳೂರು: ಕೋಲ್ಕತ್ತಾ ಪೊಲೀಸರ(Kolkata Police) ವಿಶೇಷ ತಂಡ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಕೊಲೆ(Bangladesh Murder) ಅಪರಾಧಿ ಫೈಜಲ್ ಅಹ್ಮದ್ನನ್ನು ಅರೆಸ್ಟ್ ಮಾಡಿದೆ. ಅಲ್ ಖೈದಾ(Al Qaeda) ಉಗ್ರ ಸಂಘಟನೆ ಜೊತೆ ಸಂಪರ್ಕಹೊಂದಿದ್ದ ಫೈಜಲ್ನನ್ನು ಜುಲೈ 1ರಂದು ಬೊಮ್ಮನಹಳ್ಳಿಯಲ್ಲಿ ಬಂಧಿಸಲಾಗಿದೆ. ಅಪರಾಧಿ ಫೈಜಲ್ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.

2015ರ ಮೇ 12ರಂದು ಬಾಂಗ್ಲಾದ ಸಿಲೆಟ್ ಎಂಬಲ್ಲಿ ವಿಜ್ಞಾನ ಬರಹಗಾರ ಮತ್ತು ಬ್ಲಾಗರ್ ಅನಂತ್ ವಿಜಯ ದಾಸ್ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಫೈಜಲ್ ಸಹಿತ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದ್ರೆ ಫೈಜಲ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ಜೂನ್ ತಿಂಗಳಲ್ಲಿ ಫೈಜಲ್ ಭಾರತದಲ್ಲಿ ಇರುವ ಬಗ್ಗೆ ಬಾಂಗ್ಲಾ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಬಾಂಗ್ಲಾ ಪೊಲೀಸ್, ಕೋಲ್ಕತ್ತಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಕೋಲ್ಕತ್ತಾ ಪೊಲೀಸ್ ತನಿಖೆ ವೇಳೆ ಫೈಜಲ್ ಬೆಂಗಳೂರಿನಲ್ಲಿ ಇರೋದು ಪತ್ತೆಯಾಗಿದೆ. ಅಕ್ರಮವಾಗಿ ಭಾರತ ಪ್ರವೇಶಿಸಿ ದಾಖಲೆ ಸೃಷ್ಟಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಅಪರಾಧಿ ಫೈಸಲ್ ಮಿಜೋರಾಂ ಅಡ್ರೆಸ್ ಬಳಸಿ ಪಾಸ್‌ಪೋರ್ಟ್ ಮಾಡಿಕೊಂಡಿದ್ದ. ಅಸ್ಸಾಂನ ಅಡ್ರೆಸ್ ಬಳಸಿ ವೋಟರ್ ಐಡಿ ಮಾಡಿಕೊಂಡಿದ್ದ. ಬೆಂಗಳೂರು ಅಡ್ರೆಸ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಕೊಂಡು ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ಸದ್ಯ ತಲೆಮರೆಸಿಕೊಂಡಿದ್ದ ಫೈಜಲ್ನನ್ನು ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಫೈಜಲ್ ಅಲ್ ಖೈದ ಸಂಘಟನೆಗಾಗಿ ಕೆಲಸ ಮಾಡ್ತಿದ್ದ. ಮದರಸಗಳಿಗೆ ತೆರಳಿ ಜಿಹಾದಿ ಬಗ್ಗೆ ಪ್ರವಚನ ನೀಡ್ತಿದ್ದ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಾಗಿದ್ರೂ ಪತ್ತೆಯಾಗದ ಆರೋಪಿಗಳು; ಎಡಿಜಿಪಿ ದೂರು ನೀಡಿದ ನೊಂದ ಕುಟುಂಬ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ತೋಟದ ಮನೆಯಲ್ಲಿ ಶಿವಮೂರ್ತಪ್ಪ ಹಾಗೂ ರತ್ನಮ್ಮ ಎಂಬ ವೃದ್ಧ ದಂಪತಿಗಳ ಕೈ ಕಾಲು ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿ ಆರು ಜನ ತಂಡ 35 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯ ಲೂಟಿ ಮಾಡಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆದ್ರೆ ಘಟನೆ ನಡೆದ ಹತ್ತು ತಿಂಗಳಾದ್ರು ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿಲ್ಲ. ಹೀಗಾಗಿ ಇಂದು ದಾವಣಗೆರೆಗೆ ಭೇಟಿ ನೀಡಿದ್ದ ಕಾನೂ‌ನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ ಕುಮಾರ್​ಗೆ ವೃದ್ಧ ದಂಪತಿಗಳ ಪುತ್ರ ರಾಕೇಶ್ ದೂರು‌ ನೀಡಿದ್ದಾರೆ.

Published On - 10:06 pm, Thu, 7 July 22