ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಕಪಲ್ ಟಿಕೆಟ್​ ಶೇ‌. 25ರಷ್ಟು ದರ ಏರಿಕೆ

ಹೊಸ ವರ್ಷಕ್ಕೆ ಬೆಂಗಳೂರಿನ ಪಬ್​ಗಳಲ್ಲಿ ಫುಲ್ ಸಿದ್ದತೆ ಮಾಡಲಾಗಿದೆ. ಜಗಮಗಿಸುವ ಲೈಟಿಂಗ್ಸ್​ನಿಂದ ಪಬ್​ಗಳು ತಯಾರಾಗಿವೆ. ಸಂಜೆ 7ರ ಬಳಿಕ ಪಾರ್ಟಿಗಳು ಆರಂಭವಾಗಲಿವೆ. ಬಹುತೇಕ ಪಬ್​ಗಳಲ್ಲಿ ಹೌಸ್ ಫುಲ್​ ಆಗಿದ್ದು, ಈ ವರ್ಷ ಕಪಲ್ ಟಿಕೆಟ್​ಗೆ ಮಾತ್ರ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸರಾಸರಿ ಶೇ‌ 25% ದರ ಏರಿಕೆ ಮಾಡಲಾಗಿದೆ.

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಕಪಲ್ ಟಿಕೆಟ್​ ಶೇ‌. 25ರಷ್ಟು ದರ ಏರಿಕೆ
ಪಬ್​
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on:Dec 31, 2023 | 5:37 PM

ಬೆಂಗಳೂರು, ಡಿಸೆಂಬರ್​ 31: 2024ನ್ನ ಸ್ವಾಗತಿಸಲು ಕ್ಷಣಗಣನೆ ಆರಂಭವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ (New Year) ಸಕಲ ತಯಾರಿ ಮಾಡಿಕೊಳ್ಳಲಾಗಿದ್ದು, ಸಿಟಿ ಮಂದಿ ಕುಣಿದು ಕುಪ್ಪಳಿಸಲು ಸಜ್ಜಾಗಿದ್ದಾರೆ. ನಗರದ ಬಹುತೇಕ ಪಬ್​ಗಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ವಾರಕ್ಕೂ ಮೊದಲೇ ಸಿಲಿಕಾನ್ ಸಿಟಿಯ ಬಹುತೇಕ ಪಬ್​ಗಳಲ್ಲಿ ಹೌಸ್ ಫುಲ್​ ಆಗಿದ್ದು, ಈ ವರ್ಷ ಕಪಲ್ ಟಿಕೆಟ್​ಗೆ ಮಾತ್ರ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸರಾಸರಿ ಶೇ‌ 25% ದರ ಏರಿಕೆ ಮಾಡಲಾಗಿದೆ.

ಎಂಜಿ ರಸ್ತೆ, ಇಂದಿರಾನಗರ, ಕೋರಮಂಗಲ, ಬ್ರಿಗೇಡ್ ರೋಡ್ ಸೇರಿ‌ ಹಲವು ಹ್ಯಾಪನಿಂಗ್ ಸ್ಥಳಗಳಲ್ಲಿ ಕಪಲ್ ಟಿಕೆಟ್​​ ಬುಕ್ಕಿಂಗ್ ಮಾಡಲಾಗಿದೆ.

ಎಲ್ಲೆಲ್ಲಿ ಕಂಪಲ್ ಟಿಕೆಟ್​ ಮತ್ತು ದರ:

  • ದಿ ಪಾರ್ಕ್: ಎಂಜಿ ರಸ್ತೆ, 1299 ರೂ.
  • ಕಾರ್ವ ರೆಸ್ಟೋಬಾರ್: ಸರ್ಜಾಪುರ, 1499 ರೂ.
  • ಮೂಲಿ ರೂಫ್ ಟಾಪ್: 1500 ರೂ.
  • ಎಲ್​ಐಟಿ ರಸ್ಟೋಪಬ್: ಚರ್ಚ್ ಸ್ಟ್ರೀಟ್, 2999 ರೂ.
  • ಹ್ಯಾಂಗ್ ಓವರ್: ಇಂದಿರಾನಗರ, 3500 ರೂ.
  • ರೇವೆಲ್ ಬಾರ್ ಅಂಡ್ ‌ಕಿಚನ್‌: 4499 ರೂ.
  • ದೋಬಾರ: ವೈಟ್ ಫೀಲ್ಡ್, 4999 ರೂ.
  • ಗಿಲ್ಲೀಸ್‌: ಕೋರಮಂಗಲ, 5499 ರೂ.
  • ತಾಜ್: ಯಶವಂತಪುರ, 6499 ರೂ.
  • ದಿ ವೀಕ್ಲಿ: ಕೋರಮಂಗಲ, 5598 ರೂ.

ಕೇಕ್‌ಗೆ ಹೆಚ್ಚಿದ ಡಿಮ್ಯಾಂಡ್

ಕಪಲ್ ಟಿಕೆಟ್​ ಮಾತ್ರವಲ್ಲದೇ ಕೇಕ್​ಗಳಿಗೂ ಡಿಮ್ಯಾಂಡ್ ಹೆಚ್ಚಿದೆ. ಅದರಲ್ಲೂ ಪೇಸ್ಟ್ರಿ ಕೇಕ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರ್ಪಲ್, ವೆಲ್ವೆಟ್, ಚಾಕೋ ಟ್ರಫಲ್, ಟ್ರಿ ಬಾಯ್, ಬ್ಲ್ಯಾಕ್ ಫಾರೆಸ್ಟ್, ಹನಿ ಕೇಕ್​​ಗಳಿಗೆ ಡಿಮ್ಯಾಂಡ್​ ಹೆಚ್ಚಾಗಿದೆ.

ಇದನ್ನೂ ಓದಿ: ಹೊಸ ವರ್ಷ ಆಚರಣೆಗೆ ಬೆಂಗಳೂರು ಸೇರಿ ಹಲವೆಡೆ ಭರ್ಜರಿ ಸಿದ್ದತೆ; ಇಲ್ಲಿದೆ ವಿವರ

ಹನುಮಂತನಗರದ ಕಗ್ಗೀಸ್ ಬೇಕರಿಯಲ್ಲಿ ವಿವಿಧ ಬಗೆಯ ಕೇಕ್​ಗಳು ತಯಾರು ಮಾಡಲಾಗಿದೆ. ಹೊಸ ವರ್ಷಾಚರಣೆ ಬರಮಾದಿಕೊಳ್ಳಲು ಸಿಟಿ ಮಂದಿ ಕೇಕ್ ಖರೀದಿಸುತ್ತಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಬೇಕರಿ ಮಾಲೀಕರು ಕೇಕ್ ತಯಾರಿ ಮಾಡಿಕೊಡುತ್ತಿದ್ದಾರೆ.

ಇತ್ತ ಪೀಪಿ, ಹೇರ್ ಬ್ಯಾಂಡ್, ಕಲರ್ ಫುಲ್ ಲೈಟ್​ಗಳ ಮಾರಾಟ ಮಾಡಲಾಗುತ್ತಿದ್ದು, ನ್ಯೂ ಇಯರ್​ಗೆ ಮತ್ತಷ್ಟು ರಂಗು ತುಂಬಲು ಸಜ್ಜಾಗಿವೆ. ತಮ್ಮ ಪ್ರೀತಿ ಪಾತ್ರರು, ಗೆಳೆಯ, ಗೆಳತಿಯರೊಂದಿಗೆ ಯೂತ್ಸ್ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:36 pm, Sun, 31 December 23

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ