
ಬೆಂಗಳೂರು, ಡಿಸೆಂಬರ್ 17: ಹೊಸ ವರ್ಷವನ್ನು (New Year) ಸ್ವಾಗತಿಸಲು, 2026 ರ ಆಗಮನದ ಗ್ರ್ಯಾಂಡ್ ಸೆಲೆಬ್ರೇಷನ್ಗೆ ಬಾರ್, ಪಬ್ ಮಾಲೀಕರು ಸಿದ್ಧತೆ ಶುರು ಮಾಡಿದ್ದಾರೆ. ಹೊಸ ವರ್ಷಾಚರಣೆಗೆ ರಾಜಧಾನಿ ಬೆಂಗಳೂರು (Bengaluru) ಸಜ್ಜಾಗುತ್ತಿದೆ. ಗೋವಾದ ನೈಟ್ ಕ್ಲಬ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆಯ ನಂತರ ಇದೀಗ ಸುರಕ್ಷತೆಯ ದೃಷ್ಠಿಯಿಂದ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರಿನ ಪಬ್, ಬಾರ್, ಕ್ಲಬ್ಗಳಿಗೆ ಕೆಲವು ಸಲಹೆಗಳನ್ನು ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿವೆ.
ಧ್ವನಿವರ್ಧಕದ ಸೌಂಡ್ ಎಷ್ಟಿರಬೇಕು? ಏನೆಲ್ಲ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು? ಎಲ್ಇಡಿ ಸ್ಕ್ರೀನ್ ಹಾಗೂ ಸುರಕ್ಷಿತಾ ಮಾನದಂಡಗಳ ಕುರಿತು ಸಲಹೆ ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರದಿಂದಲೂ ಪಬ್, ಬಾರ್, ಕ್ಲಬ್ಗಳಿಗೆ ನೋಟಿಸ್ ನೀಡಲಾಗಿದೆ. ಎಂಜಿ ರಸ್ತೆ , ಚರ್ಚ್ ಸ್ಟ್ರೀಟ್ ರೋಡ್ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಸಂಭ್ರಮಾಚರಣೆ
ನಡೆಯುವ ರಸ್ತೆಗಳ ನೆಲಮಹಡಿ, ಅಂಡರ್ ಪಾಸ್ ಬಂದ್ ಮಾಡಲಾಗುತ್ತದೆ.
ಇನ್ನು ಮಹಿಳೆಯರ ರಕ್ಷಣೆ ಹಾಗೂ ಅಹಿತಕರ ಘಟನೆ ನಿಯಂತ್ರಣಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ದಿನ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಸೇರಿದಂತೆ ಮೂರು ರಸ್ತೆಗಳ ಬೇಸ್ಮೆಂಟ್ ಶಾಪ್ಗಳಯ, ನೆಲಮಹಡಿಯ ಅಂಗಡಿಗಳು ಹಾಗೂ ಅಂಡರ್ ಪಾಸ್ಗಳನ್ನು ಬಂದ್ ಮಾಡುವಂತೆ ಬ್ರಿಗೇಡ್ ರೋಡ್ ಸಂಘಟನೆ ಹೇಳಿದೆ. ನೆಲಮಹಡಿಯಲ್ಲಿ ಪಾರ್ಟಿ ಹಾಗೂ ಮೋಜು ಮಸ್ತಿಯಿಂದ ಮಹಿಳೆಯರ ಸುರಕ್ಷಿತಗೆ ಧಕ್ಕೆ ಸಾಧ್ಯತೆ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಅಕ್ರಮ ತಡೆಗೆ ಅಲೋಕ್ ಕುಮಾರ್ ಮಾಸ್ಟರ್ ಪ್ಲ್ಯಾನ್: ಇಲ್ಲಿದೆ ಮಾಹಿತಿ
ಒಟ್ಟಿನಲ್ಲಿ ಈ ವರ್ಷ ರಾಜಧಾನಿಯ ಜನ 2025ಕ್ಕೆ ಗುಡ್ ಬೈ ಹೇಳಿ 2026 ರ ಸ್ವಾಗತಕ್ಕೆ ಸಿದ್ಧತೆ ಮಾಡಿದ್ದು ಜಿಬಿಎ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೂಕ್ತ ನಿಗಾವಹಿಸೇಕಿದೆ.