ಬೆಂಗಳೂರು, ಜುಲೈ 29: ಮಾಸ್ಟರ್ ಆನಂದ್ ಪುತ್ರಿ ವಂಶಿಕ (Vamshika) ಹೆಸರಿನಲ್ಲಿ ವಂಚನೆ ಎಸಗಿರುವ ಆರೋಪ ಸುಳ್ಳು ಎಂದು ಪ್ರಕರಣದಲ್ಲಿ ಜೈಲು ಸೇರಿ ನಿನ್ನೆಯಷ್ಟೇ ಬಿಡುಗಡೆಯಾಗಿದ್ದ ನಿಶಾ ನರಸಪ್ಪ (Nisha Narasappa) ಹೇಳಿದ್ದಾರೆ. ವಂಚನೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ನಿಶಾ ನರಸಪ್ಪ ಅವರು 14 ದಿನಗಳ ನ್ಯಾಯಾಂಗ ಬಂಧನ ಮುಗಿಸಿ ಜೈಲಿನಿಂದ ಬಿಡುಗಡೆಯಾದ ನಂತರ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತನ್ನ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರಿಂದ ಕಂಪನಿಗೆ ಕೆಟ್ಟ ಹೆಸರು ಬಂದಿದೆ. ನಮ್ಮ ಕಂಪನಿಯಿಂದ ಸಂಭಾವನೆ ಪಡೆದು ಈವೆಂಟ್ನಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ವಾಹಿನಿಯಲ್ಲೂ ಸಂಭಾವನೆ ಪಡೆದೇ ಅವರ ಪುತ್ರಿ ಭಾಗವಹಿಸುವುದು. ಎಲ್ಲರೂ ಪ್ಲಾನ್ ಮಾಡಿ ಸೀನ್ ಕ್ರಿಯೇಟ್ ಮಾಡಿ ಈ ರೀತಿ ಮಾಡಿದ್ದಾರೆ ಎಂದು ನಿಶಾ ನರಸಪ್ಪ ಆರೋಪಿಸಿದ್ದಾರೆ.
ನನ್ನ ವಿರುದ್ಧ ಯಶಸ್ವಿನಿ ವೈಯಕ್ತಿಕ ಸೇಡು ತೆಗೆದುಕೊಳ್ಳುತ್ತಿದ್ದಾರೆ, ನನ್ನ ಬಳಿ ಐಷಾರಾಮಿ ಕಾರು, ಫ್ಲ್ಯಾಟ್ ಇದೆ ಅಂತಾ ಹೇಳಿದ್ದಾರೆ. ನನ್ನ ವಿರುದ್ಧ ಯಶಸ್ವಿನಿ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ನಿಶಾ ಆರೋಪಿಸಿದ್ದಾರೆ. ನನಗೆ ಒಂದು ವರ್ಷದಿಂದ ಯಶಸ್ವಿನಿ ಪರಿಚಯವಿದ್ದರು. ಆದರೆ ಪೊಲೀಸ್ ಠಾಣೆಯಲ್ಲಿ ಪರಿಚಯವೇ ಇಲ್ಲ ಅಂತಾ ಹೇಳಿದ್ದಾರೆ. ಯಶಸ್ವಿನಿಗೆ 20 ಸಾವಿರ ಹಣ ಹಿಂತಿರುಗಿಸಬೇಕಿತ್ತು ಅಷ್ಟೇ ಎಂದರು.
ಇದನ್ನೂ ಓದಿ: ನಿಶಾ ನರಸಪ್ಪ ಮನೆ ಬಳಿ ಹಣಕಳೆದುಕೊಂಡವರ ಗಲಾಟೆ, 1 ಕೋಟಿಗೂ ಹೆಚ್ಚು ವಂಚನೆ ಶಂಕೆ
ಗೀತಾ ಎಂಬಾಕೆ ಪ್ರೀ ಪ್ಲಾನ್ ಮಾಡಿದ್ದಾರೆ ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದೆ. ಆದರೆ ಯಶಸ್ವಿನಿ ಅರ್ಥ ಮಾಡಿಕೊಳ್ಳದೇ ನನ್ನ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗೆ ಡ್ಯಾಮೆಜ್ ಮಾಡಿದ್ದಾರೆ. ಎಲ್ಲರೂ ಪ್ಲಾನ್ ಮಾಡಿ ಸೀನ್ ಕ್ರಿಯೇಟ್ ಮಾಡಿ ಈ ರೀತಿ ಮಾಡಿದ್ದಾರೆ ಎಂದು ನಿಶಾ ನರಸಪ್ಪ ಹೇಳಿದ್ದಾರೆ.
ಹರ್ಷಿತಾ ಎಂಬುವರು 40 ಲಕ್ಷ ಕೊಡಬೇಕೆಂದು ಆರೋಪ ಮಾಡುತ್ತಿದ್ದಾರೆ. ಯಾವ ಆಧಾರದಲ್ಲಿ ಹಣ ಕೊಡಬೇಕು ಅಂತಾ ಹೇಳುತ್ತಿದ್ದಾರೆ? ಎಂದು ಪ್ರಶ್ನಿಸಿದ ನಿಶಾ ನರಸಪ್ಪ ಕೇಳಿದ್ದಾರೆ. ಎಂ.ಎಂ.ಪ್ರೊಡಕ್ಷನ್ ಈವೆಂಟ್ ಕಂಪನಿ ನಮ್ಮದು. ನಮ್ಮ ಕಂಪನಿಯಲ್ಲಿ ಹರ್ಷಿತಾ ಎಂಬಾಕೆ ಕೆಲಸಕ್ಕೆ ಸೇರಿದ್ದರು. ಎರಡು ವರ್ಷ ನನ್ನ ಜೊತೆ ಇದ್ದಳು, ಆಕೆಗೆ ನನ್ನ ಬ್ಯುಸಿನೆಸ್ ವಿಚಾರ ಗೊತ್ತಿತ್ತು. ಆದರೆ ಆಕೆಗೆ ನಾನು 40 ಲಕ್ಷ ರೂ. ಕೊಡಬೇಕಿಲ್ಲ. ಲೇಖಾ ಎಂಬುವವರು ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ 5 ಲಕ್ಷ ಹಣವನ್ನು ಹಣ ವಾಪಸ್ ನೀಡುವಾಗ ತಡವಾಗಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ