ಇನ್ನು ಮುಂದೆ ಕಮರ್ಷಿಯಲ್​ ವಾಹನಗಳ ಎಫ್​​​ಸಿಗೆ ಟ್ರಾಫಿಕ್ ಪೊಲೀಸ್ ಫೈನ್​ ಲೆಟರ್ ಕಡ್ಡಾಯವಂತೆ! ವಾಹನ ಮಾಲೀಕರು ಕಂಗಾಲು

ಯಲ್ಲೋ ಬೋರ್ಡ್ ವಾಹನ ಮಾಲೀಕರು ನೂರಾರು ಕೋಟಿ ದಂಡ ಬಾಕಿ ಉಳಿಸಿಕೊಂಡಿದ್ದಾರೆ. ಹಾಗಾಗಿ ಎಫ್ ಸಿ ಗೆ ಟ್ರಾಫಿಕ್ ಪೊಲೀಸ್ ಫೈನ್ ಲೆಟರ್ ಕಡ್ಡಾಯ ಮಾಡಿ ಎಂದು ಸಾರಿಗೆ ಇಲಾಖೆ ಮೇಲೆ ಇತ್ತ ಟ್ರಾಫಿಕ್ ಪೊಲೀಸರು ಒತ್ತಡ ಹಾಕ್ತಿದಾರೆ.

ಇನ್ನು ಮುಂದೆ ಕಮರ್ಷಿಯಲ್​ ವಾಹನಗಳ ಎಫ್​​​ಸಿಗೆ ಟ್ರಾಫಿಕ್ ಪೊಲೀಸ್ ಫೈನ್​ ಲೆಟರ್ ಕಡ್ಡಾಯವಂತೆ! ವಾಹನ ಮಾಲೀಕರು ಕಂಗಾಲು
ಕಮರ್ಷಿಯಲ್​ ವಾಹನಗಳ ಎಫ್​​​ಸಿಗೆ ಟ್ರಾಫಿಕ್ ಪೊಲೀಸ್ ಫೈನ್​ ಲೆಟರ್ ಕಡ್ಡಾಯವಾಗಿ ಬೇಕಂತೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 06, 2023 | 12:54 PM

ವಾಣಿಜ್ಯ ಉದ್ದೇಶ ವಾಹನಗಳಿಂದ ಕೋಟ್ಯಾಂತರ ರೂಪಾಯಿ ದಂಡ ಬಾಕಿಯಿದೆ.. ಅಂತಹ ವಾಹನ ಮಾಲೀಕರು ದಂಡ ಕಟ್ಟದೇ ಇರುವುದರಿಂದ ಸಂಚಾರಿ ಪೊಲೀಸರು ಅಸಹಾಯಕರಾಗಿದ್ದಾರೆ. ಈ ನಿಟ್ಟಿನಲ್ಲಿ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತರುವಂತೆ ಪೊಲೀಸ್‌ ಇಲಾಖೆ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮೂರು ನಾಲ್ಕು ಬಾರಿ ಸಭೆ ನಡೆಸಿದ್ದಾರೆ. ತತ್ಫಲವಾಗಿ ರಾಜ್ಯ ಸಾರಿಗೆ ಇಲಾಖೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಆದರೆ ವಾಸ್ತವದ ನೆಲೆಗಟ್ಟಿನಲ್ಲಿ ಯಲೋ ಬೋರ್ಡ್ ಚಾಲಕರು ಅಸಲಿಗೆ ಎಫ್ ಸಿ (Fitness Certificate) ಮಾಡಿಸುವುದಕ್ಕೇ ಪರದಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ RTO ಮತ್ತು ಪೊಲೀಸ್ ಇಲಾಖೆ ಜಾರಿಗೆ ತರಲು ಆಲೋಚಿಸುತ್ತಿರುವ ಎನ್ಓಸಿ (NOC) ನೀತಿ ಸರಿಯಿಲ್ಲ. ಕೂಡಲೇ ಅದನ್ನು ಕೈ ಬಿಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಅಂದಹಾಗೆ ರಾಜ್ಯದಲ್ಲಿ 30,42,350 ವಾಣಿಜ್ಯ ಉದ್ದೇಶದ ವಾಹನಗಳಿಗಳಿವೆ.

ಎಫ್​​​ಸಿ ನವೀಕರಣಕ್ಕೆ ಪೊಲೀಸ್‌ ಇಲಾಖೆಯ ಎನ್‌ಒಸಿ ಕಡ್ಡಾಯಕ್ಕೆ ಚಿಂತನೆ:

  1. ಸಾರಿಗೆ ಇಲಾಖೆ ಪ್ಲಾನ್​ ಏನು ಅಂತ ನೋಡೋದಾದ್ರೆ
  2. 1. ವಿಮೆ ನವೀಕರಿಸುವಾಗ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲಿಸಬೇಕು
  3. 2. ದಂಡ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕಡ್ಡಾಯ ಪರಿಶೀಲನೆ ಮಾಡಬೇಕು
  4. 3. ದಂಡ ಬಾಕಿ ಉಳಿಸಿಕೊಂಡಿದ್ದರೆ ವಿಮೆ ನವೀಕರಣ ತಡೆ ಹಿಡಿಯಬೇಕು
  5. 4. ದಂಡ ಬಾಕಿ ಪಾವತಿಸಿದ ನಂತರವಷ್ಟೇ ವಿಮೆ ನವೀಕರಿಸಬೇಕು
  6. 5. ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಅಪ್ಲಿಕೇಷನ್‌ ರೂಪಿಸಲಾಗುತ್ತೆ
  7. 6. ಆ ಅಪ್ಲಿಕೇಷನ್​​ನಲ್ಲಿ ದಂಡ ಉಳಿಸಿಕೊಂಡಿರುವ ವಿವರ ಲಭ್ಯವಾಗುತ್ತೆ
  8. 7. ಮೊದಲು ಬೆಂಗಳೂರು ನಗರಕ್ಕೆ ಸೀಮಿತವಾಗಿ ಈ ವ್ಯವಸ್ಥೆ ಜಾರಿಯಾಗುತ್ತೆ

ಯಾಕೆ ಈ ನಿಮಯ ಅಂತ ನೋಡೋದಾದ್ರೆ

  1. 1. ರಾಜ್ಯದಲ್ಲಿ ಒಟ್ಟು 30,42,350 ವಾಣಿಜ್ಯ ಉದ್ದೇಶದ ವಾಹನಗಳಿಗಳಿವೆ
  2. 2. ದಶಕಕ್ಕೂ ಹೆಚ್ಚು ಕಾಲ ದಂಡ ಕಟ್ಟದಿದ್ದರುವ ವಾಹನ ಮಾಲೀಕರು
  3. 3. ಕಮರ್ಷಿಯಲ್​ ವಾಹನಗಳಿಂದ ಕೋಟ್ಯಂತರ ರೂಪಾಯಿ ದಂಡ ಬಾಕಿ
  4. 4. ದಂಡ ಕಟ್ಟದಿದ್ದರು ಅಸಹಾಯಕರಾಗಿರುವ ಸಂಚಾರಿ ಪೊಲೀಸರು
  5. 5. ವಾಣಿಕ್ಯ ಬಳಕೆ ವಾಹನಗಳಿಗೆ ಪ್ರತಿ 2 ವರ್ಷ­ಕ್ಕೆ ಎಫ್‌ಸಿ ನವೀಕರಿಸಬೇಕು
  6. 6. ವಿಮೆ ಮತ್ತು ಎಮಿಷನ್ ಸರ್ಟಿಫಿಕೇಟ್ ಹೊಂದಿರಬೇಕು ಎಂಬ ಷರತ್ತಿದೆ
  7. 7. ಆದರೆ, ಸಂಚಾರ ನಿಯಮ ಉಲ್ಲಂಘನೆ ದಂಡ ಬಾಕಿ ಇದರೊಳಗೆ ಬರಲ್ಲ

ಒಟ್ನಲ್ಲಿ ಯಲ್ಲೋ ಬೋರ್ಡ್ ವಾಹನ ಮಾಲೀಕರು ನೂರಾರು ಕೋಟಿ ದಂಡ ಬಾಕಿ ಉಳಿಸಿಕೊಂಡಿದ್ದಾರೆ. ಹಾಗಾಗಿ ಎಫ್ ಸಿ ಗೆ ಟ್ರಾಫಿಕ್ ಪೊಲೀಸ್ ಫೈನ್ ಲೆಟರ್ ಕಡ್ಡಾಯ ಮಾಡಿ ಎಂದು ಸಾರಿಗೆ ಇಲಾಖೆ ಮೇಲೆ ಇತ್ತ ಟ್ರಾಫಿಕ್ ಪೊಲೀಸರು ಒತ್ತಡ ಹಾಕ್ತಿದಾರೆ. ಆದರೆ ಯಲ್ಲೋ ಬೋರ್ಡ್ ವಾಹನ ಮಾಲೀಕರು ಮಾತ್ರ ಇದು ಸರಿಯಲ್ಲ. ದಂಡ ಪಾವತಿ ಮಾಡಿದ್ರೆ ಮಾತ್ರ ಎಫ್ ಸಿ ಮಾಡ್ತೀವಿ ಅನ್ನೋ ಆದೇಶವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎನ್ನುತ್ತಿದ್ದಾರೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡಬೇಕಿದೆ..

ವರದಿ: ಕಿರಣ್ ಸೂರ್ಯ, ಟಿವಿ 9, ಬೆಂಗಳೂರು

ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!