ಬೆಂಗಳೂರು ಮಳೆಯಲ್ಲಿ ಕೊಚ್ಚಿ ಹೋದ ಇಂಜಿನಿಯರ್! ಇನ್ನೂ ಪತ್ತೆಯಾಗದ ಮೃತದೇಹ, ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

| Updated By: Digi Tech Desk

Updated on: Jun 23, 2022 | 3:44 PM

ನೀರಿನಲ್ಲಿ ಕೊಚ್ಚಿ ಹೋಗಿರುವ ಮಿಥುನ್ ಸಾಗರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅದರಂತೆ ಗ್ರಾಮದ ನಿವಾಸಿ. ಮಿಥುನ್ ಸಾವಿನ ಸುದ್ದಿಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಬೆಂಗಳೂರು ಮಳೆಯಲ್ಲಿ ಕೊಚ್ಚಿ ಹೋದ ಇಂಜಿನಿಯರ್! ಇನ್ನೂ ಪತ್ತೆಯಾಗದ ಮೃತದೇಹ, ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ
ಮಿಥುನ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ
Follow us on

ಬೆಂಗಳೂರು: ಕೆ.ಆರ್.ಪುರಂನ ಗಾಯತ್ರಿ ಬಡಾವಣೆಯಲ್ಲಿ ಮಳೆ ನೀರಿನಲ್ಲಿ (Rain Water) ಕೊಚ್ಚಿ ಹೋಗಿದ್ದ ಇಂಜಿನಿಯರ್ ಮಿಥುನ್ ಮೃತದೇಹ (Dead Bosdy) ಇನ್ನೂ ಪತ್ತೆಯಾಗಿಲ್ಲ. 31 ಎಕರೆ ವಿಸ್ತೀರ್ಣದಲ್ಲಿರುವ ಸೀಗೆಹಳ್ಳಿ ಕೆರೆಯಲ್ಲಿ ಮಿಥನ್ ಶವಕ್ಕಾಗಿ ಶೋಧ ಕಾರ್ಯಚರಣೆ ಮುಂದುವರೆದಿದೆ. ಪ್ರತ್ಯೇಕ ನಾಲ್ಕು ತಂಡಗಳಾಗಿ ರಚಿಸಿ 60ಕ್ಕೂ ಹೆಚ್ಚು ಸಿಬ್ಬಂದಿಯಿಂದ ಹುಡುಕಾಟ ನಡೆಯುತ್ತಿದ್ದು, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಿಬ್ಬಂದಿ ಸಾಥ್ ನೀಡುತ್ತಿವೆ. ನೀರಿನಲ್ಲಿ ಕೊಚ್ಚಿ ಹೋಗಿರುವ ಮಿಥುನ್ ಸಾಗರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅದರಂತೆ ಗ್ರಾಮದ ನಿವಾಸಿ. ಮಿಥುನ್ ಸಾವಿನ ಸುದ್ದಿಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಯುವಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಇಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ. ಇದೇ ವೇಳೆಗೆ ಮಳೆಗೆ ಗೋಡೆ ಕುಸಿದು ಓರ್ವ ವೃದ್ಧೆ ಕೂಡ ಮೃತಪಟ್ಟಿದ್ದಾರೆ. ಅಪಾರ್ಟ್​​ಮೆಂಟ್ ಮಾಲೀಕರಿಂದ ಪರಿಹಾರ ಕೊಡಿಸುತ್ತೇವೆ ಎಂದು ಆಯುಕ್ತರು ತಿಳಿಸಿದರು.

ಇದನ್ನೂ ಓದಿ
777 Charlie Movie: ‘777 ಚಾರ್ಲಿ’ ಸಿನಿಮಾಗೆ ಬಂಪರ್ ಆಫರ್​; ತೆರಿಗೆ ವಿನಾಯಿತಿ ನೀಡಿದ ಸರ್ಕಾರ
T20 World Cup: ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದ ಆಯ್ಕೆ ಪ್ರಕ್ರಿಯೆ ಯಾವಾಗ? ಗಂಗೂಲಿ ನೀಡಿದ್ರು ಬಿಗ್​ ಅಪ್​ಡೇಟ್
ಭಯ ಬೀಳಿಸುವಂತಿದೆ ರಣಬೀರ್ ಕಪೂರ್ ಹೊಸ ಲುಕ್; ಯಾವ ಸಿನಿಮಾ?
ನವಭಾರತಕ್ಕೆ ದೊಡ್ಡ ಕೊಡುಗೆ ನೀಡಲು ಶ್ರಮಿಸುತ್ತಿದ್ದೇವೆ; ‘ಬಿಜೆಪಿ ಜನಪ್ರತಿನಿಧಿಗಳ’ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಭಾಷಣ

ಶೋಧ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಕತ್ತಲಾದ ಕಾರಣ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ನಾಳೆ ಮುಂಜಾನೆಯಿಂದಲೇ ಮಿಥುನ್‌ಗಾಗಿ ಮತ್ತೆ ಶೋಧ ನಡೆಸುತ್ತೇವೆ. ನಾಳೆ ಶತಾಯಗತಾಯ ಮಿಥುನ್‌ ಮೃತದೇಹ ಪತ್ತೆ ಹಚ್ಚುತ್ತೇವೆ ಎಂದರು.

ಇದನ್ನೂ ಓದಿ: 777 Charlie Movie: ‘777 ಚಾರ್ಲಿ’ ಸಿನಿಮಾಗೆ ಬಂಪರ್ ಆಫರ್​; ತೆರಿಗೆ ವಿನಾಯಿತಿ ನೀಡಿದ ಸರ್ಕಾರ

ಟ್ವೀಟ್ ಮೂಲಕ ಕುಮಾರಸ್ವಾಮಿ ಆಕ್ರೋಶ:
ಬೆಂಗಳೂರಿನ ಕೆಆರ್ ಪುರಂನಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್​ಡಿಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ. ಕೆ.ಆರ್.ಪುರಂನಲ್ಲಿ ಮಳೆಯಿಂದ ಹಾನಿ ಆಗಿದ್ದರೂ ಸ್ಥಳೀಯ ಶಾಸಕರು, ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಎಸ್.ಆರ್.ಲೇಔಟ್​ನಲ್ಲಿನ ಅಪಾರ್ಟ್​​ಮೆಂಟ್ ಜಲಾವೃತವಾಗಿತ್ತು. ನೆಲಮಹಡಿ ಜಲಾವೃತವಾಗಿ 100 ಕಾರು, 300 ಬೈಕ್​ ತೇಲಿವೆ. ನಿವಾಸಿಗಳು ಹೊರ ಬರಲಾಗದೆ ಮನೆಗಳಲ್ಲೇ ಬಂಧಿಗಳಾಗಿದ್ದಾರೆ. ಶಿಕ್ಷಣ ಅಧಿಕಾರಿಗಳ ಕಚೇರಿಗೆ ಮಳೆನೀರು ನುಗ್ಗಿ ದಾಖಲೆ ನಾಶವಾಗಿದೆ. ಇದು ಬಿಜೆಪಿ ಸರ್ಕಾರದ ವೈಖರಿ! ಎಂದು ಹೆಚ್​ಡಿಕೆ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Published On - 8:37 pm, Sat, 18 June 22