ನಾನೊಬ್ಬ ಲಿಂಗಾಯತ, ಆದರೆ ಹಿಂದೂ ಅಲ್ಲ: ಸಾಹಿತಿ ಕುಂ ವೀರಭದ್ರಪ್ಪ ಘೋಷಣೆ
ಹಿಂದೂಗಳು ಬಹುಸಂಖ್ಯಾತರು ಎನ್ನೋದು ಸರಿಯಲ್ಲ. ದೇಶದಲ್ಲಿ 20 ಕೋಟಿ ಮುಸ್ಲಿಮರು, ಸಿಖ್ಖರು ಇದ್ದಾರೆ ಎಂದು ಕುಂ.ವೀರಭದ್ರಪ್ಪ ಹೇಳಿದರು.
ಬೆಂಗಳೂರು: ಹಿಂದೂ ಎನ್ನುವುದು ಬಹಳ ಅಪಾಯಕಾರಿ ಶಬ್ದ. ಹಿಂದೂ ಎಂಬ ಪದದಿಂದ ದೇಶದಲ್ಲಿ ಅಪಾಯ ಸೃಷ್ಟಿಯಾಗುತ್ತಿದೆ. ನಾನು ಹಿಂದೂ ಅಲ್ಲ ಅಂತ ಇವತ್ತು ಘೋಷಿಸುತ್ತಿದ್ದೇನೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ನಾನು ಹಿಂದೂ ಅಲ್ಲ. ನಾನು ಲಿಂಗಾಯತ, ಬಸವಣ್ಣನ ಅನುಯಾಯಿ. ಹಿಂದೂಗಳು ಬಹುಸಂಖ್ಯಾತರು ಎನ್ನೋದು ಸರಿಯಲ್ಲ. ದೇಶದಲ್ಲಿ 20 ಕೋಟಿ ಮುಸ್ಲಿಮರು, ಸಿಖ್ಖರು ಇದ್ದಾರೆ ಎಂದು ಅವರು ಸರ್ವಜನಾಂಗದ ಶಾಂತಿಯ ತೋಟ ಕಾರ್ಯಕ್ರಮದಲ್ಲಿ ತಿಳಿಸಿದರು.
ಹಿಂದೂ ಎಂಬ ಪದದಿಂದಲೇ ದೇಶದಲ್ಲಿ ಅಪಾಯ ಸೃಷ್ಟಿ ಆಗುತ್ತಿದೆ. ಹಿಂದೂ ಎಂಬುದು ಕೇವಲ ಪದ ಅಷ್ಟೇ. ಹಿಂದೂಗಳು ಬಹುಸಂಖ್ಯಾತರು ಎನ್ನೋದು ಸರಿಯಲ್ಲ. ಅದು ಇಂಪಾರ್ಟಂಟ್ ಅಲ್ಲ. ದೇಶದಲ್ಲಿ 20 ಕೋಟಿ ಮುಸ್ಲಿಮರು, ಸಿಖ್ಖರು, ಜೈನರು ಎಲ್ಲರೂ ಇದ್ದಾರೆ. ಅನಕ್ಷರಸ್ಥ ಗುಲಾಮರು ನಮ್ಮನ್ನು ಆಳಿದರು. ಮಹಮದ್ ಘೋರಿಯಂಥವರೆಲ್ಲ ಸೋಮನಾಥಪುರದಂಥ ದೇವಸ್ಥಾನಗಳಲ್ಲಿ ಅಡಗಿಸಿಟ್ಟಿದ್ದ ಕಪ್ಪುಹಣವನ್ನು ಲೂಟಿ ಮಾಡಿದರು ಎಂದು ಬೆಂಗಳೂರು ಗಾಂಧಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.
ಮುಸ್ಲಿಮರು ವ್ಯವಹರ ಮಾಡಬಾರದು ಎಂದರೆ ಅವರು ಎಲ್ಲಿಗೆ ಹೋಗಬೇಕು? ಬೆಂಗಳೂರಲ್ಲಿ ಕಸ ಹೊಡೆಯುವವರು ಕನ್ನಡೇತರ ಬಡವರು. ಇವೆಲ್ಲ ಸರ್ವಾಧಿಕಾರಿ ಶಕ್ತಿಗಳ ಮೊದಲನೇ ಹೆಜ್ಜೆಗಳು. ಸರ್ವಾಧಿಕಾರಿ ಶಕ್ತಿಗಳನ್ನ ನಾವು ಪ್ರತಿಭಟಿಸಿ ತಡೆಯಬೇಕು. ವರ್ತಮಾನದಲ್ಲಿ ಬದುಕುತ್ತಿಲ್ಲ, ಭೂತಕಾಲಕ್ಕೆ ಹೋಗುತ್ತಿದ್ದೇವೆ ಹೋರಾಟ ಮಾಡುತ್ತಿರುವವರೆಲ್ಲ ಮೇಲ್ವರ್ಗದವರಲ್ಲ. ಹೋರಾಟ ಮಾಡುತ್ತಿರುವವರೆಲ್ಲ ಶೂದ್ರ ಯುವಕರು ಎಂದು ವಿವರಿಸಿದರು.
ಹಲಾಲ್ ಒಂದು ಸಮಸ್ಯೆಯೇ ಎಂದು ಪ್ರಶ್ನಿಸಿದ ಅವರು ಹಿಜಾಬ್ ಒಂದು ವಸ್ತ್ರ ಅಷ್ಟೇ ಎಂದು ವಿಶ್ಲೇಷಿಸಿದರು. ಹಿಜಾಬ್ ಗಲಾಟೆ ಆದ ಕಾಲೇಜಲ್ಲಿ ಜನವರಿ ಮೊದಲ ವಾರ ನಾನು ಭಾಷಣ ಮಾಡಿದ್ದೆ. ಆಗ ಏನೂ ಗೊಂದಲ ಇರಲಿಲ್ಲ. ಆಮೇಲೆ ಏಕಾಏಕಿ ಇಡೀ ರಾಜ್ಯ-ರಾಷ್ಟ್ರಕ್ಕೆ ಹರಡಿಬಿಟ್ಟಿತು. ಸರ್ವಾಧಿಕಾರಿ ಶಕ್ತಿಗಳ ವಿರುದ್ದ ನಾವು ಪ್ರತಿಭಟಿಸಿ ಅದನ್ನು ತಡೆಯಬೇಕು. ಶೂದ್ರ ಯುವಕರನ್ನು ವಾಪಸ್ ಕರೆತರಬೇಕು ಎಂದು ಸಲಹೆ ಮಾಡಿದರು.
ಜೆಪಿ ವಿಚಾರ ವೇದಿಕೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಕಾರ್ಯಕ್ರಮ ಆಯೋಜನೆ ಮಾಡಿದೆ.
ಕಾರ್ಯಕ್ರಮದ ಬಗ್ಗೆ ಈಶ್ವರಪ್ಪ ವ್ಯಂಗ್ಯ
ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಶಾಂತಿಯ ತೋಟ ಎನ್ನುವವರು ಮುಸ್ಲಿಮರ ಬಗ್ಗೆ ಏನಾದರೂ ಹೇಳಿದ್ದಾರಾ? ಹರ್ಷನ ಹತ್ಯೆಯಾದಾಗ ಶಾಂತಿಯ ತೋಟ ಎಂದು ಹೇಳಬೇಕಿತ್ತು. ಮುಸಲ್ಮಾನರು ಏನು ಬೇಕಾದರೂ ಮಾಡಬಹುದಾ? ಕೊನೆಗೆ ಹಿಂದೂಗಳಿಗೆ ಮಾತ್ರ ಬುದ್ಧಿ ಹೇಳೋದು ಮಾತ್ರ ಹಿಂದುಗಳಿಗೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. 23 ಹಿಂದೂ ಕಾರ್ಯಕರ್ತರನ್ನು ಕಗ್ಗೊಲೆ ಮಾಡಿದಾಗ ಯಾರೂ ಮಾತನಾಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಹರ್ಷನ ಹತ್ಯೆಯಾದಾಗ ಇದು ತಪ್ಪು, ಹತ್ಯೆ ಮಾಡಿದವರ ವಿರುದ್ದ ಕ್ರಮ ಆಗಲಿ ಎಂದು ಯಾರೊಬ್ಬರೂ ಮಾತನಾಡಲಿಲ್ಲ. ಹಿಂದೂಗಳು ಮಾತ್ರ ಯಾವಾಗಲೂ ಅನುಭವಿಸ್ತನೇ ಇರಬೇಕಾ? ಮುಸಲ್ಮಾನರು ಏನು ಬೇಕಾದರೂ ಮಾಡಬಹುದಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಭದ್ರಾವತಿಗೂ ವ್ಯಾಪಿಸಿದ ಹಲಾಲ್ ವಿವಾದ
ಹಲಾಲ್ ಮತ್ತು ಜಟ್ಕಾ ಕಟ್ ವಿವಾದವು ಇದೀಗ ಭದ್ರಾವತಿಗೂ ವ್ಯಾಪಿಸಿದೆ. ಭದ್ರಾವತಿಯ ಶಿವಾಜಿ ಸರ್ಕಲ್ ಚಿಕನ್ ಅಂಗಡಿಗೆ ಬಂದ ಬಜರಂಗದಳ ಕಾರ್ಯಕರ್ತರು ಹಲಾಲ್ ಚಿಕನ್ಗೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ಧಾರವಾಡದಲ್ಲಿ ವೈದೇಹಿ, ಕುಂ ವೀರಭದ್ರಪ್ಪ ಮತ್ತು ಸಿದ್ದಲಿಂಗ ಪಟ್ಟಣಶೆಟ್ಟಿ ಅವರಿಗೆ ಬೆಟಗೇರಿ ಕೃಷ್ಣಶರ್ಮಾ ಪ್ರಶಸ್ತಿ ಪ್ರದಾನ
ಇದನ್ನೂ ಓದಿ: ಗಂಡಸ್ತನ ಯಾವುದಕ್ಕೆ ಬಳಸಬೇಕೆಂದು ಹೆಚ್‌ಡಿ ಕುಮಾರಸ್ವಾಮಿಗೆ ಗೊತ್ತು; ಹೆಚ್ಡಿಕೆ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಈಶ್ವರಪ್ಪ