ಕೆಎಸ್ಆರ್ಟಿಸಿ ಮಾದರಿಯಲ್ಲಿ ಬಿಎಂಟಿಸಿ ನೌಕರರಿಗೂ ಒಂದು ಕೋಟಿ ರೂಪಾಯಿ ಅಪಘಾತ ವಿಮೆ
ಬಿಎಂಟಿಸಿಯ ನೌಕರರ ಕುಟುಂಬಕ್ಕೆ ಡಬಲ್ ಡಬಲ್ ಗುಡ್ ನ್ಯೂಸ್. ಕೆಎಸ್ಆರ್ಟಿಸಿ ಮಾದರಿಯಲ್ಲಿಯೇ ಬಿಎಂಟಿಸಿ ನೌಕರರಿಗೂ ಒಂದು ಕೋಟಿ ರುಪಾಯಿ ಅಪಘಾತ ವಿಮೆ ನೀಡಲು ಸರ್ಕಾರ ಮುಂದಾಗಿದ್ದು, ಇಂದಿನಿಂದಲೇ ಈ ವಿಮಾ ಸೌಲಭ್ಯ ಜಾರಿಯಾಗಲಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ಜಾರಿಯಾಗಿದ್ದು, ಬಿಎಂಟಿಸಿಯ 28 ಸಾವಿರ ನೌಕರರ ಕುಟುಂಬಗಳಿಗೆ ಸೌಲಭ್ಯ ದೊರೆಯಲಿದೆ.
ಬೆಂಗಳೂರು, ಫೆ.19: ಕೆಎಸ್ಆರ್ಟಿಸಿ (KSRTC) ಮಾದರಿಯಲ್ಲಿಯೇ ಬಿಎಂಟಿಸಿ (BMTC) ನೌಕರರಿಗೂ ಒಂದು ಕೋಟಿ ರುಪಾಯಿ ಅಪಘಾತ ವಿಮೆ (Accident Insurance) ನೀಡಲು ಸರ್ಕಾರ ಮುಂದಾಗಿದ್ದು, ಇಂದಿನಿಂದಲೇ ಈ ವಿಮಾ ಸೌಲಭ್ಯ ಜಾರಿಯಾಗಲಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ಜಾರಿಯಾಗಿದ್ದು, ಬಿಎಂಟಿಸಿಯ 28 ಸಾವಿರ ನೌಕರರ ಕುಟುಂಬಗಳಿಗೆ ಸೌಲಭ್ಯ ದೊರೆಯಲಿದೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಬಿಎಂಟಿಸಿ ಎಂಡಿ ರಾಮಚಂದ್ರನ್. ಆರ್, ಕೆಎಸ್ಆರ್ಟಿಸಿ ನೌಕರರು ಸಾವನ್ನಪ್ಪಿದರೆ ಮಾತ್ರ ಒಂದು ಕೋಟಿ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಬಿಎಂಟಿಸಿ ನೌಕರರಿಗೆ ಕೇವಲ ಮೂರು ಲಕ್ಷ ರುಪಾಯಿ ಪರಿಹಾರವಿತ್ತು. ಈ ಬಗ್ಗೆ ಟಿವಿ9 ಸುದ್ದಿ ಮಾಡಿ ಸಾರಿಗೆ ಸಚಿವರ ಗಮನಕ್ಕೆ ತಂದಿತ್ತು. ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ಜಾರಿಯಾಗಿದೆ ಎಂದರು.
ಇದನ್ನೂ ಓದಿ: ಬಿಎಂಟಿಸಿ ವತಿಯಿಂದ ಯುವಕ-ಯುವತಿಯರಿಗೆ ಉಚಿತ ಡ್ರೈವಿಂಗ್ ಕ್ಲಾಸ್, ನೂರಾರು ಜನರಿಗೆ ಸಹಾಯಕವಾಯ್ತು ಈ ಯೋಜನೆ
ಬಿಎಂಟಿಸಿಯ 28 ಸಾವಿರ ನೌಕರರ ಕುಟುಂಬಗಳಿಗೆ ಈ ವಿಮಾ ಸೌಲಭ್ಯ ದೊರೆಯಲಿದೆ. ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿಲ್ಲದಿದ್ದಾಗಲೂ ಸಂಭವಿಸುವ ಅಪಘಾತಕ್ಕೂ 1 ಕೋಟಿ 15 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಸಿಬ್ಬಂದಿ ಸಾಮಾನ್ಯವಾಗಿ ಸಾವನ್ನಪ್ಪಿದರೆ 10 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದರು.
ಸಾರಿಗೆ ನೌಕರರ ಮುಖಂಡರು ಖುಷ್
ಬಿಎಂಟಿಸಿಯ ನೌಕರರ ಕುಟುಂಬಕ್ಕೂ ಒಂದು ಕೋಟಿ ರೂಪಾಯಿ ನೀಡುವಂತೆ ಮಾಡಿದ ಟಿವಿ9 ಗೆ ಧನ್ಯವಾದ ತಿಳಿಸಿದ ಸಾರಿಗೆ ನೌಕರರ ಮುಖಂಡರು, ಸುದ್ದಿ ಮಾಡಿ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದು ಟಿವಿ9. ಹಾಗಾಗಿ ನಾವು ಟಿವಿ9ಗೆ ಧನ್ಯವಾದಗಳನ್ನು ಹೇಳುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ