ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ (Hit And run case) )ಬೆಳಕಿಗೆ ಬಂದಿದೆ. ಮೊನ್ನೇ ಅಷ್ಟೇ ಬೈಕ್ ಸವಾರನೊಬ್ಬ ಚಾಲಕನೋರ್ವನನ್ನು ಒಂದು ಕಿ.ಮೀ ದೂರು ಎಳೆದುಕೊಂಡು ಹೋಗಿದ್ದ, ಇದಾದ ಬೆನ್ನಲ್ಲೇ ಇಂದು (ಜನವರಿ 20) ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಕಿ.ಮೀ. ದೂರ ಹೊತ್ತೊಯ್ದ ಪ್ರಕರಣ ನಡೆದಿದೆ. ಈ ಘಟನೆ ನಡೆದ ಕೆಲ ಗಂಟೆಗಳಲ್ಲಿ ಫಾರ್ಚೂನರ್ ಕಾರು, ಬೈಕ್ ಸವಾರನಿಗೆ ಗುದ್ದಿ ಎಸ್ಕೇಪ್ ಆಗಿದೆ.
ಹೌದು…ರಾಜಾಜಿನಗರದ ಮಧುಲೋಕ ಬಾರ್ ಬಳಿ ಬೈಕ್ ಸವಾರನಿಗೆ ಗುದ್ದಿ ಫಾರ್ಚೂನರ್ ಕಾರು ಪರಾರಿಯಾಗಿದೆ. ತಡೆಯಲು ಪ್ರಯತ್ನಿಸಿದ ಸಾರ್ವಜನಿಕರ ಮೇಲೂ ಕಾರು ಹತ್ತಿಸುವ ಪ್ರಯತ್ನವನ್ನು ಸಹ ಚಾಲಕ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫಾರ್ಚೂನರ್ ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರ ಸುಮಾರು ದೂರ ಹಾರಿಬಿದ್ದಿದ್ದಾನೆ. ಅದೃಷ್ಟವಶಾತ್ ಬೈಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಣ್ಣ ಪುಟ್ಟ ಗಾಯಾಗಳಾಗಿದ್ದು ಇಂಟರನಲ್ ಬ್ಲಿಡಿಂಗ್ ಅಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಫಾರ್ಚೂನರ್ ಕಾರಿನಲ್ಲಿ ನಾಲ್ವರು ಇದ್ದರು ಎಂದು ತಿಳಿದುಬಂದಿದೆ. ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದರೊಂದಿಗೆ ಈ ಒಂದು ವಾರದಲ್ಲೇ ಬೆಂಗಳೂರಿನಲ್ಲಿ(Bengaluru) ಮೂರು ಹಿಟ್ ಆ್ಯಂಡ್ ರನ್ ಪ್ರಕರಣಗಳು ಬೆಳಕಿಗೆ ಬಂದಿವೆ.
Published On - 11:42 pm, Fri, 20 January 23