ಬೆಂಗಳೂರು: ಬೈಕ್ಗೆ ಟಿಪ್ಪರ್ ಡಿಕ್ಕಿ ಓರ್ವ ವಿದ್ಯಾರ್ಥಿನಿ ಸಾವು
ಕೆಂಗೇರಿ ಠಾಣಾ ವ್ಯಾಪ್ತಿಯ ನೈಸ್ ರಸ್ತೆ ಬಳಿ ವಿದ್ಯಾರ್ಥಿನಿಯರಿಬ್ಬರು ಬೈಕ್ನಲ್ಲಿ ತೆರಳುವಾಗ ಟಿಪ್ಪರ್ ಲಾರಿ ನಡುವೆ ಡಿಕ್ಕಿಯಾಗಿದ್ದು ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಇನ್ನೂಬ್ಬ ವಿದ್ಯಾರ್ಥಿನಿಗೆ ಗಾಯಗಳಾಗಿವೆ.
ಬೆಂಗಳೂರು: ನೈಸ್ ರಸ್ತೆ ಬಳಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಲ್ಲಿ ಓರ್ವ ವಿದ್ಯಾರ್ಥಿನಿ ಸರಿತಾ (21) ಸಾವನ್ನಪ್ಪಿದ್ದಾಳೆ. ಇನ್ನೂಬ್ಬ ಯುವತಿ ಅನಿತಾ (20) ಎಂಬುವವರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಡಿಗ್ರಿ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಓದುತ್ತಿದ್ದರು. ಇನ್ನು ಸರಿತಾ ಎಂಬಾಕೆಗೆ 6 ತಿಂಗಳ ಹಿಂದೆ ಮದುವೆಯಾಗಿದ್ದು, ವಿವಾಹದ ಬಳಿಕವು ಕಾಲೇಜಿಗೆ ಹೋಗುತ್ತಿದ್ದಳು.
ಇಬ್ಬರು ಒಟ್ಟಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆ ಬಳಿ ನಿನ್ನೆ(ಜ.20) ಮಧ್ಯಾಹ್ನ 2.30 ಕ್ಕೆ ಟಿಪ್ಪರ್ ಗುದ್ದಿದೆ. ಬಳಿಕ 10 ಮೀಟರ್ ಎಳೆದುಕೊಂಡು ಹೋಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳತನ ಮಾಡಿ ಸ್ಟೇಷನ್ ಪಕ್ಕದಲ್ಲೇ ಮನೆ ಮಾಡಿದ್ದ ಕಳ್ಳ
ಬೆಂಗಳೂರು: ಮಂಜುನಾಥ್ ಅಲಿಯಾಸ್ ಜಿಮ್ ಮಂಜು ಎಂಬಾತ ಕಳೆದ ಡಿಸೆಂಬರ್ 5 ನೇ ತಾರೀಖು ವಾಕಿಂಗ್ ಮಾಡುವ ವೇಳೆ ರುಕ್ಮಿಣಿ ಎಂಬ ವೃದ್ಧೆಯನ್ನ ತಳ್ಳಿ, 2 ಲಕ್ಷ 20 ಸಾವಿರ ಮೌಲ್ಯದ ಸರ ಕದ್ದು ಪರಾರಿಯಾಗಿದ್ದ ನಂತರ ಅಲ್ಲಿದ್ದ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದ್ದ ಪೊಲೀಸರು, ಆರೋಪಿಯ ಹೆಜ್ಜೆ ಗುರುತಿನ ಸಿಸಿಟಿವಿ ಫಾಲೋ ಮಾಡಿದಾಗ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಎಂಡ್ ಆಗುತ್ತಿತ್ತು. ಈ ವಿಚಾರವಾಗಿ ಪೊಲೀಸ್ ಇನ್ಸ್ಪೆಕ್ಟರ್ ಉದಯರವಿ ವಿಪರೀತ ತಲೆ ಕೆಡಿಸಿಕೊಂಡಿದ್ದರು.
ಹೆಚ್ಚು ಕಮ್ಮಿ ಒಂದೂವರೆ ತಿಂಗಳ ಬಳಿಕ ಸಿಕ್ಕಿಬಿದ್ದ ಆರೋಪಿ ಜಿಮ್ ಮಂಜು, ವಿಚಾರಣೆ ವೇಳೆ ಸರಗಳವು ಮಾಡಿದ ದಿನ ಹೊಯ್ಸಳದಲ್ಲಿ ಇನ್ಸ್ಪೆಕ್ಟರ್ನ್ನ ನೋಡಿದ್ದನೆಂದು ಬಾಯ್ಬಿಟ್ಟಿದ್ದಾನೆ. ಕೃತ್ಯ ಎಸಗಿ ಪೊಲೀಸರ ಭಯದಿಂದ 20 ಕೆಜಿ ಸಣ್ಣ ಆಗಿರೋದಾಗಿ ಹೇಳಿದ್ದಾನೆ. ಸ್ನ್ಯಾಚಿಂಗ್ ವೇಳೆ ಹಾಕಿದ್ದ ಬಟ್ಟೆಯನ್ನ ಮನೆಯಲ್ಲೇ ಸುಟ್ಟುಹಾಕಿದ್ದನಂತೆ ಕೊನೆಗೂ ಆರೋಪಿಯನ್ನ ಬಂಧಿಸಿದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು
ಇದನ್ನೂ ಓದಿ:ಬೆಳಗ್ಗೆ ಹಣ್ಣಿನ ವ್ಯಾಪಾರ, ರಾತ್ರಿ ಆಟೋ ಕಳ್ಳತನ -14 ಆಟೋಗಳ ಎಗರಿಸಿದ್ದ ಖದೀಮ ಅಂದರ್ ಆದ ಕತೆಯಿದು!
ಸಾಲ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿ ಪೊಲೀಸರ ವಶಕ್ಕೆ
ಕೋಲಾರ: ನಗರದ ಅಬ್ದುಲ್ ಶಹಬಾಷ್ ಎಂಬಾತ ಅಲ್ಪಸಂಖ್ಯಾತರಿಗೆ ಲೋನ್ ಕೊಡಿಸುವುದಾಗಿ ಹೇಳಿ 20 ಲಕ್ಷ ರೂ. ವಂಚಿಸಿದ್ದ ಇತನನ್ನು ಇದೀಗ ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿ. ಆರೋಪಿ ಬಳಿ ಇದ್ದ 82 ಸಾವಿರ ನಗದು, ವಿವಿಧ ಬ್ಯಾಂಕ್ಗಳ ರಬ್ಬರ್ ಸ್ಟ್ಯಾಂಪ್ಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:31 am, Sat, 21 January 23