ಲಡ್ಡು ಪರೀಕ್ಷೆಗೆ ದೇವಸ್ಥಾನದಲ್ಲಿ ಲ್ಯಾಬ್ ತೆರೆಯಬೇಕು: ಟಿಟಿಡಿಗೆ ಶ್ರೀರಾಮ ಸೇನೆ ಮನವಿ

ತಿರುಪತಿಯಲ್ಲಿ ತಯಾರಿಸುವ ಭಕ್ತರ ನೆಚ್ಚಿನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ದೇಶಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದೆ. ಈ ನಡುವೆ ಲಡ್ಡು ಪರೀಕ್ಷೆಗೆ ದೇವಸ್ಥಾನದಲ್ಲಿ ಲ್ಯಾಬ್​ ತೆರೆಯುವಂತೆ ಶ್ರೀರಾಮ ಸೇನೆ ಮನವಿ ಮಾಡಿದೆ.

ಲಡ್ಡು ಪರೀಕ್ಷೆಗೆ ದೇವಸ್ಥಾನದಲ್ಲಿ ಲ್ಯಾಬ್ ತೆರೆಯಬೇಕು: ಟಿಟಿಡಿಗೆ ಶ್ರೀರಾಮ ಸೇನೆ ಮನವಿ
ಟಿಟಿಡಿಗೆ ಶ್ರೀರಾಮ ಸೇನೆ ಪತ್ರ
Follow us
| Updated By: ವಿವೇಕ ಬಿರಾದಾರ

Updated on:Sep 21, 2024 | 2:09 PM

ಬೆಂಗಳೂರು, ಸೆಪ್ಟೆಂಬರ್​ 21: ಲಡ್ಡು (Laddu) ಪರೀಕ್ಷೆಗೆ ದೇವಸ್ಥಾನದಲ್ಲಿ ಲ್ಯಾಬ್ ತೆರೆಯುವಂತೆ ಶ್ರೀರಾಮ ಸೇನೆ (Sri Ram Sena) ಬೆಂಗಳೂರಿನ ಟಿಟಿಡಿ (TTD) ಆಡಳಿತ ಮಂಡಳಿಗೆ ಮನವಿ ಪತ್ರ ನೀಡಿದೆ. ದೇವಸ್ಥಾನದ ವ್ಯವಸ್ಥಾಪಕಿ ಜಯಂತಿ ಬಾಸ್ಕರನ್ ಮನವಿ ಪತ್ರ ಸ್ವೀಕರಿಸಿದರು. ಮನವಿ ಪತ್ರ ಸಲ್ಲಿಸಿದ ಬಳಿಕ ಶ್ರೀರಾಮ ಸೇನೆಯ ಬೆಂಗಳೂರು ಅಧ್ಯಕ್ಷ ಭಾಸ್ಕರ್ ಮಾತನಾಡಿ, ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇದೆ ಅಂತ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಹೇಳಿದರು.

ಗುಜರಾತ್​ನ ಲ್ಯಾಬ್​ನಲ್ಲೂ ಪ್ರಾಣಿಗಳ ಕೊಬ್ಬು ಇರೋದು ಧೃಢವಾಗಿದೆ. ಇದರಿಂದ, ವೆಂಕಟೇಶ್ವರ ಗುಡಿಯಲ್ಲಿ ಭಕ್ತರಿಗೆ ಭಾವನೆ ಧಕ್ಕೆ ಉಂಟಾಗಿದೆ. ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕ್ರೈಸ್ಥ ಧರ್ಮಕ್ಕೆ ಮತಾಂತರವಾಗಿರುವ ವಂಶಸ್ಥರು. ಮೀನಿನ ಎಣ್ಣೆಯನ್ನು ಲಡ್ಡುವಿನಲ್ಲಿ ಮಿಶ್ರಣ ಮಾಡಿದ್ದಾರೆ. ಈ ಬಗ್ಗೆ ದೊಡ್ಡ ತನಿಖೆಯಾಗಬೇಕು ಅಂತ ಬೆಂಗಳೂರು ಟಿಟಿಡಿ ದೇವಸ್ಥಾನದ ವ್ಯವಸ್ಥಾಪಕರಿಗೆ ಮನವಿ ನೀಡಿದ್ದೇವೆ ಎಂದರು.

ಟಿಟಿಡಿ ಶಾಖೆಗಳು ಯಾವುದೇ ರಾಜ್ಯದಲ್ಲಿದ್ದರೂ, ಅಲ್ಲಿ ಪರೀಕ್ಷಾ ಲ್ಯಾಬ್ ತೆರೆಯಬೇಕು. ಭಕ್ತರಿಗೆ ಅನುಮಾನವಿದ್ದರೆ ಕೂಡಲೇ ಪರೀಕ್ಷೆ ಮಾಡುವಂತಾಗಬೇಕು. ಈ ಬಗ್ಗೆಯೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ತಿರುಪತಿ ಲಡ್ಡು ಪ್ರಕರಣ: ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳ ಪ್ರಸಾದ ಪರೀಕ್ಷೆಗೆ ಸೂಚನೆ

ಬೆಂಗಳೂರಿಗೆ ಪ್ರತಿದಿನ 1 ಸಾವಿರ ಲಡ್ಡು ಬರುತ್ತೆ: ಟಿಟಿಡಿ

ಟಿಟಿಡಿ ದೇವಸ್ಥಾನದ ವ್ಯವಸ್ಥಾಪಕಿ ಜಯಂತಿ ಮಾತನಾಡಿ, ತಿರುಪತಿಯಿಂದ ಲಡ್ಡು ಪ್ರಸಾದ ಈ ದೇವಸ್ಥಾನಕ್ಕೆ ಬರುತ್ತಿದೆ. ಮೊದರಲು ಶನಿವಾರ ಮಾರಾಟ ಮಾಡುತ್ತಿದ್ವಿ. ಈಗ ಪ್ರತಿದಿನ ಮಾರಾಟ ಮಾಡಲಾಗುತ್ತಿದೆ. ತಿರುಪತಿಯಿಂದ ಲಡ್ಡು ಕಳುಹಿಸುತ್ತಾರೆ. ನಾವು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಪ್ರತಿ ಶನಿವಾರ 8 ಸಾವಿರ ಲಡ್ಡು ಕಳುಹಿಸುತ್ತಿದ್ದರು. ಈಗ ಪ್ರತಿದಿನ 1 ಸಾವಿರ ಲಡ್ಡು ಕಳುಹಿಸುತ್ತಾರೆ. ಲಡ್ಡು ವಿಚಾರವಾಗಿ ಇನ್ನೂವರೆಗೂ ಭಕ್ತರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:03 pm, Sat, 21 September 24

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು