AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಂಬಡಿಕೆ ಅನುಷ್ಠಾನದಲ್ಲಿ ನಮ್ಮ ಸರ್ಕಾರ ಮುಂದಿದೆ, 2.83 ಲಕ್ಷ ಕೋಟಿ ಒಪ್ಪಂದಕ್ಕೆ ಅನುಮೋದನೆ: ಸಿಎಂ ಬೊಮ್ಮಾಯಿ

ಈ ಬಾರಿ 9.08 ಲಕ್ಷ ಕೋಟಿ ರೂ. ಒಡಂಬಡಿಕೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಡಂಬಡಿಕೆ ಅನುಷ್ಠಾನದಲ್ಲಿ ನಮ್ಮ ಸರ್ಕಾರ ಮುಂದಿದೆ, 2.83 ಲಕ್ಷ ಕೋಟಿ ಒಪ್ಪಂದಕ್ಕೆ ಅನುಮೋದನೆ: ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 04, 2022 | 10:40 PM

Share

ಬೆಂಗಳೂರು: ಈ ಬಾರಿ 9.08 ಲಕ್ಷ ಕೋಟಿ ರೂ. ಒಡಂಬಡಿಕೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ಹೇಳಿದರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಡಂಬಡಿಕೆಯ ಅನುಷ್ಠಾನದಲ್ಲಿ ನಮ್ಮ ಸರ್ಕಾರ ಮುಂದಿದೆ. ಅದರಲ್ಲಿ ₹2.83 ಲಕ್ಷ ಕೋಟಿ ಒಪ್ಪಂದಕ್ಕೆ ಅನುಮೋದನೆ ಸಿಕ್ಕಿದೆ. ಕಳೆದ ಜಿಮ್ ಸಮಾವೇಶಕ್ಕಿಂತ ನಮ್ಮ ಸರ್ಕಾರ ಒಡಂಬಡಿಕೆಯ ಅನುಷ್ಠಾನದಲ್ಲಿ ಮುಂದಿದೆ. 2009 ಮೊದಲ ಜಿಮ್ ನಡೆದಿತ್ತು.  ಸಮಾವೇಶದಲ್ಲಿ 27 ಸಾವಿರದ 57 ಕೋಟಿ ರೂ ಒಪ್ಪಂದ ಆಗಿದೆ. 12 ಸಾವಿರ ಕೋಟಿ ಮಾತ್ರ ಹೂಡಿಕೆಯ ಅನುಷ್ಠಾನ ಬಂದಿದೆ. ಶೇಕಡಾ 44% ರಷ್ಟು ಅನುಷ್ಠಾನ ಆಗಿದೆ. 2010 ರಲ್ಲಿ 3,94,768 ಕೋಟಿ ಒಡಂಬಡಿಕೆಯಾಗಿದೆ. ಕೇವಲ ಶೇ. 14% ಮಾತ್ರ ಅನುಷ್ಠಾನಕ್ಕೆ ಬಂದಿದೆ. 2012 ರಲ್ಲಿ 6,77,168 ಕೋಟಿ ಒಡಂಬಡಿಕೆಯಾಗಿದೆ. ಕೇವಲ ಶೇ. 8% ಮಾತ್ರ ಅನುಷ್ಠಾನಕ್ಕೆ ಬಂದಿದೆ ಎಂದು ತಿಳಿಸಿದರು.

2016 ರಲ್ಲಿ 3 ಲಕ್ಷದ 5 ಸಾವಿರ ಕೋಟಿ ಒಡಂಬಡಿಕೆಯಾಗಿದೆ. ಶೇಕಡಾ 15% ಮಾತ್ರ ಅನುಷ್ಠಾನಕ್ಕೆ ಬಂದಿದೆ. ಈ ರೀತಿ ಪುನಾರವರ್ತನೆಯಾಗಬಾರದು. ಯಾವುದೇ ರಾಜ್ಯ ಸರ್ಕಾರ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಲ್ಲ. ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾನು ಬಹಿರಂಗಗೊಳಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕರ್ನಾಟಕ ಇಂದು ಯೋಚನೆ ಮಾಡೋದನ್ನು ಭಾರತ ನಾಳೆ ಯೋಚನೆ ಮಾಡುತ್ತೆ: ಸಿಎಂ ಬೊಮ್ಮಾಯಿ

ಬುದ್ದಿಮತ್ತೆ ಮತ್ತು ಪರಿಶ್ರಮ ಯಾರೊಬ್ಬರ ಸ್ವತ್ತಲ್ಲ. ಈ ಸಮಾವೇಶದಲ್ಲಿ ಬಂಡವಾಳ ಹೂಡಿಕೆಯಾಗಿದೆ ಮತ್ತು ಪ್ರೇರಣೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲು ಅಧಿಕಾರಿ ವರ್ಗ ಬಹಳ ಕೆಲಸ ಮಾಡಿದೆ. ಪ್ರಪಂಚದಲ್ಲಿ ಆರ್ಥಿಕ ಹಿಂಜರಿತ ಇದೆ. ಇಂತಹ ಪರಿಸ್ಥಿತಿಯಲ್ಲಿಯೂ ಹೂಡಿಕೆದಾರರ ಸಮಾವೇಶ ಮಾಡಲು ನಾವು ಧೈರ್ಯ ತೋರಿದೆವು. ನಮ್ಮ ಜನವೇ ನಮಗೆ ಬಲ. ಕೌಶಲ್ಯಯುತ ಜನರೇ ನಮಗೆ ಬಲ. ನಮ್ಮ ನೀತಿಗಳೇ ನಮಗೆ ಬಲ. ಕರ್ನಾಟಕ ಇಂದು ಯೋಚನೆ ಮಾಡೋದನ್ನು ಭಾರತ ನಾಳೆ ಯೋಚನೆ ಮಾಡುತ್ತದೆ. ಬೆಂಗಳೂರಿಗೆ ಪ್ರತಿದಿನ 10 ಸಾವಿರ ಇಂಜಿನಿಯರ್​ಗಳು ಬರುತ್ತಾರೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಮ್ಮ ನೀತಿ, ಚಿಂತನೆಗಳ ಬದಲಾವಣೆಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಮ್ಮ ಕಾರ್ಯದಕ್ಷತೆ ಹೆಚ್ಚಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು ಗಲ್ಫ್ ರಾಷ್ಟ್ರಗಳ ಜೊತೆಗೆ ಸ್ಪರ್ಧೆಗೆ ಮುಂದಾಗುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Invest Karnataka 2022: ಹೂಡಿಕೆದಾರರ ಸಮಾವೇಶಕ್ಕೆ ತೆರೆ; ಹರಿದುಬಂತು 10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ

ಹಸಿರು ಇಂಧನ ಉತ್ಪಾದನೆಗೆ ಕರ್ನಾಟಕ ಪ್ರಶಸ್ತ: ಸಚಿವ ಸುನಿಲ್​ಕುಮಾರ್

ಸಮಾವೇಶದಲ್ಲಿ ಇಂಧನ ಸಚಿವ ಸುನಿಲ್​ಕುಮಾರ್ ಮಾತನಾಡಿದ್ದು, ಹಸಿರು ಇಂಧನ ಉತ್ಪಾದನೆಗೆ ನಮ್ಮ ಕರ್ನಾಟಕ ಪ್ರಶಸ್ತವಾಗಿದೆ. ಸೋಲಾರ್ & ವಿಂಡ್ ಹೈಬ್ರೀಡ್ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಘೋಷಣೆ ಮಾಡಿದೆ. ಇಂಧನ ಹೂಡಿಕೆಗೆ ಸರ್ಕಾರ ಸೂಕ್ತ ತಯಾರಿಯನ್ನು ಮಾಡುತ್ತಿದೆ. ಭವಿಷ್ಯದ ದೃಷ್ಟಿಯಿಂದ ಯೋಚಿಸಿ ಮೂಲಭೂತ ಸೌಕರ್ಯಗಳನ್ನು ಸೃಷ್ಟಿ ಮಾಡುತ್ತಿದೆ. ಇಂಧನ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಸೃಷ್ಟಿ ಮಾಡುತ್ತೇವೆ. ಇಂಧನ ಕ್ಷೇತ್ರದಲ್ಲಿ 2 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ. ಹೂಡಿಕೆಗೆ ಪೂರಕವಾಗಿ ಅಗತ್ಯ ಸೌಕರ್ಯಗಳು ಪೂರೈಸಲು ಕ್ರಮಕೈಗೊಳ್ಳಲಾಗುವುದು. ಪಾವಗಡ ಸೋಲಾರ್ ಪಾರ್ಕ್​​ ಸ್ಥಾಪನೆ ಮತ್ತು ನಿರ್ವಹಣೆ ಚೆನ್ನಾಗಾಗಿದೆ. ನೂತನ ಸೋಲಾರ್ ಪಾರ್ಕ್ ಇಂಧನ ಕ್ಷೇತ್ರಕ್ಕೆ ಪೂರಕವಾಗಿದೆ ಎಂದು ಹೇಳಿದರು.

ವಿಶ್ವದೆಲ್ಲೆಡೆ ಭಾರತದ ಹೆಸರು: ಸಚಿವ ಭಗವಂತ ಖೂಬಾ

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದ್ದು, ಯಾವುದೇ ಉದ್ಯಮ ಮಾಡಲು ಅವರಿಗೆ ಸರ್ಕಾರ ಹಾಗೂ ರಾಜ್ಯದ ಮೇಲೆ ವಿಶ್ವಾಸ ಬರಬೇಕು. ಆಗ ಮಾತ್ರವೇ ಉದ್ಯಮ ಪ್ರಾರಂಭ ಮಾಡುತ್ತಾರೆ. ಇಂತಹ ವಾತಾವರಣ ಮೋದಿ ಎಂಟು ವರ್ಷದಲ್ಲಿ ನಿರ್ಮಾಣ ಮಾಡಿದರು. ಮೋದಿ ನೇತೃತ್ವದಲ್ಲಿ ಉದ್ಯಮಕ್ಕೆ ಸೂಕ್ತವಾದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಚೀನಾ ಬಿಟ್ಟರೆ ಭಾರತದ ಹೆಸರು ಇಂದು ವಿಶ್ವದಲ್ಲಿ ಕೇಳಿ ಬರುತ್ತಿದೆ. ಕರ್ನಾಟಕ ಸರ್ಕಾರದ ಶ್ರಮದಿಂದ ಹೂಡಿಕೆಯಿಂದ ಬಹಳ ಯಶಸ್ವಿಯಾಗಿದೆ. ಹೀಗಾಗಿ ಒಂಡಂಬಡಿಕೆ ಮಾಡಿಕೊಂಡ ಉದ್ಯಮಿಗಳು ಬೇಗ ಉದ್ಯಮ ಪ್ರಾರಂಭಿಸಿ. ಸೋಲಾರ್ ಕ್ಷೇತ್ರದಲ್ಲೂ ಪ್ರಗತಿ ಕಾಣುತ್ತಿದ್ದೇವೆ. ಸೋಲಾರನಲ್ಲಿ ಅನೇಕ ಪಿಐಆರ್ ಸ್ಕೀಮ್ ತಂದಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.