ಬೆಂಗಳೂರಿನಲ್ಲಿ ಪಾದಚಾರಿಗಳ ಸಾವಿಗೆ ಕಾರಣವಾಗಿದೆ ಅತಿಯಾದ ಸ್ಮಾರ್ಟ್‌ಫೋನ್ ಬಳಕೆ, ಹೇಗೆ? ಈ ಸುದ್ದಿ ಓದಿ

ನಿಮ್ಗೆ ಸಿಕ್ಕಾಪಟ್ಟೆ ಮೊಬೈಲ್ ಬಳಕೆ ಮಾಡೋ ಹುಚ್ಚಿದೇಯಾ? ಕುಂತ್ರೆ ನಿಂತ್ರೆ ನಡೆದಾಡುವಾಗಲೂ ಮೊಬೈಲ್ ಹಿಡ್ಕೊಂಡು, ರೀಲ್ಸ್ ನೋಡೋ ಹುಚ್ಚಿದೇಯಾ? ಪದೇ ಪದೇ Instagram ನೋಡೊ ಗೀಳಿದೇಯಾ? ರಾತ್ರಿ ಬೆಳ್ಳಗ್ಗೆ ಎನ್ನದೇ ಟೈಮ್ ನೋಡ್ದೆ ರಸ್ತೆ ನಡೆಯೋವಾಗಲೂ ಮೊಬೈಲ್ ನೋಡ್ತಾನೇ ಇರ್ತಿರಾ. ಹಾಗಿದ್ರೆ ಬೀ ಕೇರ್ ಫುಲ್. ಬೆಂಗಳೂರಿನ ವಾಹನಗಳಿಗೆ ಬಲಿಯಾಗುವ ಮೊದಲು ಬಿ ಅಲರ್ಟ್.

ಬೆಂಗಳೂರಿನಲ್ಲಿ ಪಾದಚಾರಿಗಳ ಸಾವಿಗೆ ಕಾರಣವಾಗಿದೆ ಅತಿಯಾದ ಸ್ಮಾರ್ಟ್‌ಫೋನ್ ಬಳಕೆ, ಹೇಗೆ? ಈ ಸುದ್ದಿ ಓದಿ
ಪಾದಚಾರಿಗಳ ಸಾವಿಗೆ ಕಾರಣವಾಗಿದೆ ಅತಿಯಾದ ಸ್ಮಾರ್ಟ್‌ಫೋನ್ ಬಳಕೆ
Edited By:

Updated on: Jan 30, 2024 | 2:50 PM

ಬೆಂಗಳೂರು, ಜ.30: ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಮೊಬೈಲ್ (Mobile) ಬಳಕೆ ಹೆಚ್ಚಾಗಿದೆ. ಯಾವುದೇ ಟೈಮ್ ಇಲ್ಲದೆ ಏನು ಕೆಲಸ ಅಂತಾ ತಿಳಿಯದೇ ಮೊಬೈಲ್ ನೋಡೊವರ ಸಂಖ್ಯೆ ಹೆಚ್ಚಾಗ್ತಿದೆ. ಬಸ್​ಗೆ ಕಾಯುವಾಗ, ರಸ್ತೆ ದಾಟುವಾಗ ಹೀಗೆ ನಿರಂತರ ಮೊಬೈಲ್ ಬಳಕೆ ರಸ್ತೆ ಅಪಘಾತಕ್ಕೆ (Road Accident) ಕಾಣವಾಗ್ತೀದೆ. ಬೆಂಗಳೂರಿನಲ್ಲಿ ನಿತ್ಯ ಲಕ್ಷಂತಾರ ವಾಹನಗಳು ಸಂಚಾರ ಮಾಡ್ತೀದ್ದು ಹತ್ತಾರೂ ಅಪಘಾತಗಳು ಸಂಭವಿಸ್ತಾನೆ ಇರುತ್ತೆ. ಆದರೆ ಈ ಅಘಾತಗಳಿಗೆ ಅತಿಯಾದ ಮೊಬೈಲ್ ಬಳಕೆಯೂ ಕಾರಣವಾಗಿದೆ. ಸ್ಮಾರ್ಟ್‌ಫೋನ್ ಜೋಂಬಿಸ್ ಗೀಳು ಪಾದಚಾರಿಗಳ ಜೀವಕ್ಕೆ ಕುತ್ತು ತರ್ತಿದೆ ಎಂಬ ಬಗ್ಗೆ ವರದಿಯೊಂದರ ಮೂಲಕ ತಿಳಿದು ಬಂದಿದೆ.

ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಅಪಘಾತಕ್ಕಿಂತ ಇತ್ತೀಚೆಗೆ ಪಾದಚಾರಿಗಳ ಸಾವಿನ ಪ್ರಕರಣ ಹೆಚ್ಚಾಗಿದೆ. ಕಳೆದ ವರ್ಷ ಒಂದಲ್ಲ ಎರಡಲ್ಲ ಸುಮಾರು 240 ಕ್ಕೂ ಹೆಚ್ಚು ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ವತಃ ಸಂಚಾರಿ ಪೊಲೀಸ್ ಇಲಾಖೆಯೇ ಅಂಕಿ ಅಂಶವನ್ನು ನೀಡಿದ್ದು ಇದಕ್ಕೆ ಕಾರಣ ಏನು ಅಂತ ನೋಡಿದಾಗ ಸ್ಮಾರ್ಟ್‌ಪೋನ್ ಬಳಕೆ ಅನ್ನೋದು ಗೊತ್ತಾಗಿದೆ. ಜನರು ಮೊಬೈಲ್ ಸ್ಕ್ರಾಲಿಂಗ್ ಮಾಡಿಕೊಂಡು ಅಥವಾ ಬೇರೆ ಕರೆಯಲ್ಲಿ ಬ್ಯುಸಿಯಾಗಿ ತಮ್ಮದೇ ಲೋಕದಲ್ಲಿ ಇರ್ತಾರೆ. ಈ ವೇಳೆ ರಸ್ತೆಯಲ್ಲಿ ಹೆಚ್ಚಾಗಿ ಗಮನ ಇಲ್ಲದ ಕಾರಣ ವಾಹನಗಳಿಗೆ ಸಿಕ್ಕಿ ಅಪಘಾತಗಳಾಗ್ತಿವೆ. ಈ ಹಿನ್ನೆಲೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಎಲ್ಲೆಡೆ ಈ ಸ್ಮಾರ್ಟ್‌ಫೋನ್ ಜೊಂಬಿಸ್ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.‌

ಇದನ್ನೂ ಓದಿ: ರಾತ್ರಿಹೊತ್ತು ಒಂಟಿಯಾಗಿ ಪ್ರಯಾಣಿಸುವ ಹೆಣ್ಣುಮಕ್ಕಳೇ ಭಯ ಬೇಡ; ಇನ್ಮುಂದೆ ಧೈರ್ಯವಾಗಿ ಪ್ರಯಾಣಿಸಬಹುದು

ಇನ್ನು ಈ‌ ಅತಿಯಾದ ಮೊಬೈಲ್ ಬಳಕೆ ಜೊಂಬಿಸ್ ಗೀಳಾಗಿ ಜನರನ್ನ ಕಾಡ್ತಿದೆ. ಜನರು ಸಂಚಾರ ಮಾಡುವಾಗ ಇತರೆ ಕೆಲಸ ಮಾಡುವಾಗಲೂ ನಿರಂತರವಾಗಿ ಮೊಬೈಲ್ ಗೆ ಹೊಂದಿಕೊಂಡಿರುತ್ತಾರೆ. ಮೊಬೈಲ್ ಮಾಯೆಗೆ ಬಲಿಯಾಗುತ್ತಿದ್ದಾರೆ. ಮಾಡುವ ಕೆಲಸದ ಬಗ್ಗೆ ಅರಿವೇ ಇಲ್ಲದೆ ಚಟ್ಟಕ್ಕೆ ಏರುತ್ತಿದ್ದಾರೆ. ಮೊಬೈಲ್‌ ಫೋನ್ ಅಡಿಕ್ಷನ್‌ನಿಂದ ಕೆಲವರು ಹೊರಗೆ ಬರ್ತಿಲ್ಲ. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರ್ತಿದ್ದು, ಸರ್ಕಾರ ಕೇವಲ ಬೈಕ್ ನಲ್ಲಿ ಸಂಚಾರದ ವೇಳೆಯಷ್ಟೇ ಮೊಬೈಲ್ ಬಳಕೆ ನಿಷೇಧ ಮಾಡಿದ್ರೆ ಸಾಲೋದಿಲ್ಲ. ರಸ್ತೆಯ ಸಂಚಾರ ಮಾಡುವ ಪಾದಚಾರಿಗಳು ಮೊಬೈಲ್ ಬಳಕೆಯಿಂದ ದೂರ ಇರುವುದು ಉತ್ತಮ ಅಂತ ತಜ್ಞರು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.

ಒಟ್ನಲ್ಲಿ ಇಷ್ಟು ದಿನ ಗೀಳಾಗಿದ್ದ ಈ ಸ್ಮಾರ್ಟ್‌ಫೋನ್ ಜೊಂಬಿಸ್ ಇದೀಗ ನಮ್ಮ ಪ್ರಾಣಕ್ಕೆ ಕುತ್ತು ತರ್ತಿದೆ. ಈ ಹಿನ್ನೆಲೆ ಜನರು ಈ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ