ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳ ಒತ್ತುವರಿ ತೆರವು ವಿಚಾರ: ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳ ಒತ್ತುವರಿ ತೆರವು ವಿಚಾರವಾಗಿ ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಬಿಬಿಎಂಪಿ ಜನಗಳಿಂದ ತೆರಿಗೆ ಸಂಗ್ರಹಿಸುತ್ತದೆ. ಸರಿಯಾದ ರಸ್ತೆ, ಫುಟ್‌ಪಾತ್ ನಿರ್ಮಿಸಲು ತೆರಿಗೆ ನೀಡುತ್ತೇವೆ. ಆದರೆ ರಸ್ತೆ, ಫುಟ್‌ಪಾತ್ ಸುಧಾರಿಸಲು ಬಿಬಿಎಂಪಿ ಮುಂದಾಗುತ್ತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಫೆ.1ರಂದು ಬಿಬಿಎಂಪಿ ಮುಖ್ಯ ಆಯುಕ್ತರ ಖುದ್ದು ಹಾಜರಿಗೆ ಆದೇಶ ನೀಡಲಾಗಿದೆ.
ಬೆಂಗಳೂರು, ಜನವರಿ 30: ನಗರದಲ್ಲಿ ಫುಟ್‌ಪಾತ್‌ಗಳ ಒತ್ತುವರಿ (encroachment) ತೆರವು ವಿಚಾರವಾಗಿ ಕ್ರಮ ಕೈಗೊಳ್ಳದ ಬಿಬಿಎಂಪಿ (BBMP) ಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಬಿಬಿಎಂಪಿ ಜನಗಳಿಂದ ತೆರಿಗೆ ಸಂಗ್ರಹಿಸುತ್ತದೆ. ಸರಿಯಾದ ರಸ್ತೆ, ಫುಟ್‌ಪಾತ್ ನಿರ್ಮಿಸಲು ತೆರಿಗೆ ನೀಡುತ್ತೇವೆ. ಆದರೆ ರಸ್ತೆ, ಫುಟ್‌ಪಾತ್ ಸುಧಾರಿಸಲು ಬಿಬಿಎಂಪಿ ಮುಂದಾಗುತ್ತಿಲ್ಲ. ಒತ್ತುವರಿ ತೆರವಿಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸುತ್ತೇವೆ. ಕೆಲವರು ಫುಟ್‌ಪಾತ್‌ಗಳನ್ನು ಕಾರು ಪಾರ್ಕಿಂಗ್‌ಗಾಗಿ ಬಳಸುತ್ತಿದ್ದಾರೆ. ಎಲ್ಲಾ ಫುಟ್‌ಪಾತ್‌ಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು. ಹೈಕೋರ್ಟ್‌ನ ಹಂಗಾಮಿ ಸಿಜೆ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡರಿದ್ದ ಪೀಠದಿಂದ ಸೂಚನೆ ನೀಡಲಾಗಿದೆ. ಫೆ.1ರಂದು ಬಿಬಿಎಂಪಿ ಮುಖ್ಯ ಆಯುಕ್ತರ ಖುದ್ದು ಹಾಜರಿಗೆ ಆದೇಶ ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಲಯಗಳಾದ ಪಶ್ಚಿಮ, ಯಲಹಂಕ, ಆರ್.ಆರ್ ನಗರ ಮತ್ತು ದಕ್ಷಿಣ ವಲಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಜೊತೆಗೆ ರಸ್ತೆ ಬಳಿ ನಿಲ್ಲಿಸಿದ್ದ ಬಿಡಿ ವಾಹನಗಳನ್ನು ಬಿಬಿಎಂಪಿ ಅಧಿಕಾರಿಗಳು ಇತ್ತೀಚೆಗೆ ತೆರವು ಮಾಡಿಸಿದ್ದರು.
ಇದನ್ನೂ ಓದಿ: ಹೊಸಕೋಟೆಯಲ್ಲಿ ಬೆಳ್ಳಂ ಬೆಳಿಗ್ಗೆ ಜೆಸಿಬಿ ಘರ್ಜನೆ; ಅರಣ್ಯ ಇಲಾಖೆಯ ಭೂಮಿ ಒತ್ತುವರಿ ತೆರವು
ಹಾಗಾಗಿ ಬೀದಿಬದಿ ವ್ಯಾಪಾರಿಗಳ ಒಕ್ಕೂಟ ಸಂಘಟನೆ ಮುಖಂಡ ಬಾಬು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿತ್ತು. ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರಿಗಳನ್ನ ಎತ್ತಂಗಡಿ ಮಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಎಫ್‌ಐಆರ್ ಹಾಕಬೇಕು ಎಂದು ಕಿಡಿಕಾರಿದ್ದರು.
ಯಾವುದೇ ನೋಟಿಸ್ ನೀಡದೇ ಎತ್ತಂಗಡಿ ಮಾಡಿದ್ದಾರೆ. ಕಾನೂನಿಗೆ ಬಿಬಿಎಂಪಿ ಅಧಿಕಾರಿಗಳು ಕ್ಯಾರೇ ಅಂತಿಲ್ಲ. ಚುನಾವಣೆ ವೇಳೆ ರಾಹುಲ್ ಗಾಂಧಿಯೊಂದಿಗೆ ಒಂದು ಸಂವಾದ ಏರ್ಪಡಿಸಲಾಗಿತ್ತು. ಅಲ್ಲಿ ರಾಹುಲ್ ಗಾಂಧಿ ಬೀದಿ ವ್ಯಾಪಾರಿಗಳು ಬೆಂಗಳೂರಿನ ಆಸ್ತಿ ಎಂದಿದ್ದರು.
ಇದನ್ನೂ ಓದಿ: ಕಲಬುರಗಿ ಬಹಮನಿ ಸುಲ್ತಾನರ ಕೋಟೆ ಒತ್ತುವರಿ ತೆರವಿಗೆ ಚಾಟಿ ಬೀಸಿದ ಹೈಕೋರ್ಟ್, ಏನಿದು ಬೆಳವಣಿಗೆ?
ಸರ್ಕಾರವೇ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಕೊಟ್ಟಿದೆ. ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರ ಸಾಲ ಸೌಲಭ್ಯ ಕೊಡುತ್ತೆ. ಬಿಬಿಎಂಪಿ ಕಾನೂನು ಬಾಹಿರ ಎತ್ತಂಗಡಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಅಧಿಕಾರಿಗಳ ವಿರುದ್ದ ಎಫ್‌ಐಆರ್ ಹಾಕಬೇಕು ಎಂದು ಆಗ್ರಹಿಸಿದ್ದರು.
ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.