ಹಿಂದೂಗಳ ವಿರೋಧದ ಬೆನ್ನಲ್ಲೇ ‘ಇಮ್ರಾನ್‌ ಖಾನ್‌ ಒಂದು ಜೀವಂತ ದಂತ ಕಥೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು

| Updated By: ರಮೇಶ್ ಬಿ. ಜವಳಗೇರಾ

Updated on: Oct 27, 2022 | 4:38 PM

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಇಮ್ರಾನ್‌ ಖಾನ್‌ ಕುರಿತ 'ಇಮ್ರಾನ್‌ ಖಾನ್‌ ಒಂದು ಜೀವಂತ ದಂತ ಕಥೆ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ರದ್ದುಗೊಳಿಸಲಾಗಿದೆ

ಹಿಂದೂಗಳ ವಿರೋಧದ ಬೆನ್ನಲ್ಲೇ ಇಮ್ರಾನ್‌ ಖಾನ್‌ ಒಂದು ಜೀವಂತ ದಂತ ಕಥೆ  ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದು
Imran Khan
Follow us on

ಬೆಂಗಳೂರು: ಹಿಂದೂಪರ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್(Imran Khan) ಒಂದು ದಂತ ಕಥೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ರದ್ದಾಗಿದೆ. ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಇಂದು(ಅಕ್ಟೋಬರ್ 27) ಸಂಜೆ ‘ಇಮ್ರಾನ್ ಖಾನ್ ಒಂದು ದಂತ ಕಥೆ’ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಬೇಕಿತ್ತು. ಆದ್ರೆ, ಇದಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರದ್ದುಪಡಿಸಿದೆ.

‘ಇಮ್ರಾನ್ ಖಾನ್ ಒಂದು ದಂತ ಕಥೆ’ ಪುಸ್ತಕ ಬಿಡುಗಡೆ ಜೊತೆಗೆ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಕವಿಗೋಷ್ಠಿ ನಡೆಸಲು ಆನ್​ಲೈನ್​ನಲ್ಲಿ ಅನುಮತಿ ಪಡೆಯಲಾಗಿತ್ತು. ಸುಧಾಕರ್ ಎಸ್ ಬಿ ಬರೆದಿರುವ ‘ಇಮ್ರಾನ್‌ ಖಾನ್‌ ಒಂದು ಜೀವಂತ ದಂತ ಕಥೆ’ ಪುಸ್ತಕವನ್ನು ಪ್ರಮಥ ಪ್ರಕಾಶನ ಪ್ರಕಟಿಸುತ್ತಿದೆ. ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಹಿಂದೂಪರ ಸಂಟನೆಗಳು ಒತ್ತಾಯಿಸಿದ್ದವು.

ಶತ್ರು ದೇಶ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪುಲ್ವಾಮ ದಾಳಿಯ ಮೂಲಕ 40 ಸೈನಿಕರ ಹತ್ಯೆ ಮಾಡಿದ್ದಾರೆ, ಅಂತಹ ಶತ್ರು ದೇಶದ ಮಾಜಿ ಪ್ರಧಾನಿಗಳ ವೈಭವೀಕರಣ ಸಹಿಸಲ್ಲ, ಹೀಗಾಗಿ ಕಾರ್ಯಕ್ರಮಕ್ಕೆ ಕೊಟ್ಟಿರುವ ಅನುಮತಿ ರದ್ದು ಮಾಡಬೇಕೆಂದು ಹಿಂದೂ ಪರ ಸಂಘಟನೆಳು ಆಗ್ರಹಿಸಿದ್ದವು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ