ಅಮಾನತ್ತಾಗಿದ್ದ ಇನ್ಸ್ಪೆಕ್ಟರ್ ಹೃದಯಾಘಾತದಿಂದ ಸಾವು
ಸಸ್ಪೆಂಡ್ ಆಗಿದ್ದ ಇನ್ಸ್ಪೆಕ್ಟರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ K.R.ಪುರ ಠಾಣೆ ನಂದೀಶ್ ಮೃತ ಇನ್ಸ್ಪೆಕ್ಟರ್.
ಬೆಂಗಳೂರು: ಸಸ್ಪೆಂಡ್ (suspend) ಆಗಿದ್ದ ಇನ್ಸ್ಪೆಕ್ಟರ್ ಹೃದಯಾಘಾತದಿಂದ (heart attack) ಸಾವನ್ನಪ್ಪಿದ್ದಾರೆ. ಬೆಂಗಳೂರಿನ K.R.ಪುರ ಠಾಣೆ ಇನ್ಸ್ಪೆಕ್ಟರ್ ನಂದೀಶ್ ಮೃತ ಇನ್ಸ್ಪೆಕ್ಟರ್. ಹೃದಯಾಘಾತದಿಂದ ಕೆ.ಆರ್.ಪುರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಂದೀಶ್ ಮೈಸೂರಿನ ಹುಣಸೂರು ಮೂಲದವರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019 ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕಳೆದ ವಾರವಷ್ಟೇ ಇನ್ಸ್ಪೆಕ್ಟರ್ ನಂದೀಶ್ ಸಸ್ಪೆಂಡ್ ಆಗಿದ್ದರು. ಏರಿಯಾದಲ್ಲಿ ಅವಧಿ ಮೀರಿ ಪಬ್ ನಡೆಸಲು ಅವಕಾಶ ನೀಡಿದ್ದಕ್ಕೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶಿಸಿದ್ದರು.
ವ್ಯಕ್ತಿಯೋರ್ವನ ಗಮನ ಬೇರೆಡೆ ಸೆಳೆದು ₹7 ಲಕ್ಷ ರೂ. ದರೋಡೆ
ರಾಯಚೂರು: ವ್ಯಕ್ತಿಯೋರ್ವನ ಗಮನ ಬೇರೆಡೆ ಸೆಳೆದು ₹7 ಲಕ್ಷ ರೂ. ದರೋಡೆ ಮಾಡಿರುವಂತಹ ಘಟನೆ ಮಾನ್ವಿ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆ ಬಳಿ ನಡೆದಿದೆ. ಖಾಜಾ ಹುಸೇನ್ ಎಂಬುವವರ 7 ಲಕ್ಷ ರೂ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬ್ಯಾಂಕ್ನಲ್ಲಿ ಹಣ ಬಿಡಿಸಿಕೊಳ್ಳುವುದನ್ನು ಕಿಡಿಗೇಡಿಗಳು ಗಮನಿಸಿದ್ದು, ಬ್ಯಾಂಕ್ ಹೊರಗೆ ಹುಸೇನ್ ಬಳಿ ಇದ್ದ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಬಳಿಕ ಆರೋಪಿಗಳನ್ನು ಚೇಸ್ ಮಾಡಿ ಹಿಡಿಯಲು ಯುವಕರು ಯತ್ನಿಸಿದ್ದಾರೆ. ಆದರೆ ಕಿಡಿಗೇಡಿಗಳ ಬಳಿ ಇದ್ದ ಮಾರಕಾಸ್ತ್ರ ನೋಡಿ ಸುಮ್ಮನಾಗಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಪತಿ ನೇಣಿಗೆ ಶರಣು
ಮಂಗಳೂರು: ಪತ್ನಿಯ ಕತ್ತು ಹಿಸುಕಿ ಕೊಂದು ಪತಿ ನೇಣಿಗೆ ಶರಣಾಗಿರುವಂತಹ ಘಟನೆ ಮಂಗಳೂರು ಹೊರವಲಯದ ಪಿಲಾರು ಎಂಬಲ್ಲಿ ನಡೆದಿದೆ. ಪಿಲಾರು ನಿವಾಸಿ ಶೋಭಾ ಪೂಜಾರಿ(45) ಕೊಲೆಯಾದ ಮಹಿಳೆ. ಶಿವಾನಂದ(55) ನೇಣಿಗೆ ಶರಣಾದ ಪತಿ. ಪೈಂಟರ್ ಕೆಲಸ ಮಾಡುತ್ತಿದ್ದ ಶಿವಾನಂದಗೆ ಪತ್ನಿ ಮೇಲೆ ಸಂಶಯ ಎನ್ನಲಾಗಿದೆ. ಅನೇಕ ಬಾರಿ ಸಂಶಯ ಪಟ್ಟು ಪತ್ನಿ ಜೊತೆ ಜಗಳ ಮಾಡಿದ್ದ. ದಂಪತಿಗೆ ವಿವಾಹಿತ ಮಗಳು ಮತ್ತು ಒಬ್ಬ ಪುತ್ರ ಇದ್ದಾನೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರೈಲುಗಳಲ್ಲಿ ಸರ ಕಳ್ಳತನ ಮಾಡುತ್ತಿದ್ದವ ಅರೆಸ್ಟ್
Published On - 4:44 pm, Thu, 27 October 22