ಬೆಂಗಳೂರು: ರಾಜಧಾನಿಯ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲು ಅನೇಕ ಅಕ್ರಮ ಚಟುವಟಿಕೆಗಳ ಆಗರವಾಗಿದೆ. ಸದ್ಯ ಅಕ್ರಮ ಚಟುವಟಿಕೆಗಳ ಆರೋಪದ ಬೆನ್ನಲ್ಲೇ ಜೈಲಿನಲ್ಲಿ ಇದೀಗ ಮತ್ತೊಂದು ಅಕ್ರಮ ಪ್ರಕರಣ ಬಯಲಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಾದಕ ಸಫ್ಲೈ ಮಾಡಲು ಹೋಗಿ ಎಫ್ಡಿಎ ಕ್ಲರ್ಕ್ ಅರೆಸ್ಟ್ ಆದ ಘಟನೆ ನಡೆದಿದೆ. ಗಂಗಾಧರ್ ಬಂಧಿತ ಎಫ್ಡಿಎ ಕ್ಲರ್ಕ್. ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಫ್ಡಿಎ ಕ್ಲರ್ಕ್ ಆಗಿದ್ದ ಗಂಗಾಧರ್, ಒಳ ಉಡುಪಿನಲ್ಲಿಟ್ಟುಕೊಂಡಿ ಎಲ್.ಎಸ್.ಡಿ, ಹ್ಯಾಶ್ ಆಯಿಲ್ ಸಾಗಿಸುವ ಯತ್ನ ಮಾಡುತ್ತಿದ್ದರು. ತಪಾಸಣೆ ವೇಳೆ ಗಂಗಾಧರ್ ಡೀಲ್ ನಲ್ಲಿ ಭಾಗಿಯಾಗಿರುವುದು ಬಯಲಾಗಿದೆ.
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಹಾಗೂ ಮೊಬೈಲ್, ಗಾಂಜಾ, ಇತರೆ ವಸ್ತುಗಳ ಪೂರೈಕೆ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಆರೋಪ ಹಿನ್ನೆಲೆ ತಪಾಸಣೆ ಕೈಗೊಂಡಾಗ ಗಂಗಾಧರ್ ಸಿಕ್ಕಿಬಿದ್ದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಫ್ಡಿಎ ಕ್ಲರ್ಕ್ ಆಗಿದ್ದ ಗಂಗಾಧರ್ ತಮ್ಮ ಒಳ ಉಡುಪಿನಲ್ಲಿ ಬಚ್ಚಿಟ್ಟಿಕೊಂಡು ಎಲ್.ಎಸ್.ಡಿ, ಹ್ಯಾಶ್ ಆಯಿಲ್ ಸಾಗಿಸುವ ಯತ್ನ ಮಾಡುತ್ತಿದ್ದದ್ದು ಪತ್ತೆಯಾಗಿದೆ. ಸದ್ಯ ಆರೋಪಿ ಗಂಗಾಧರ್ನನ್ನು ಜೈಲಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಾಗೂ ಕಾರಾಗೃಹ ಇಲಾಖೆ ಡಿ.ಜಿ ಅಲೋಕ್ ಮೋಹನ್ ಗಂಗಾಧರ್ನನ್ನು ಸಸ್ಪೆಂಡ್ ಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.
ಗಾಂಜಾ ಸೇದುವ ಚಿಲುಮೆ ಪತ್ತೆ!
ಇನ್ನು ಕೆಲ ತಿಂಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಸಿಸಿಬಿ ದಾಳಿ ವೇಳೆ ಗಾಂಜಾ ಮತ್ತು ಗಾಂಜಾ ಸೇದುವ ಚಿಲುಮೆ ಪತ್ತೆಯಾಗಿತ್ತು. ಅಲ್ಲದೆ ಈ ಹಿಂದೆ ದಾಳಿ ನಡೆಸಿದಾಗಲೂ ಗಾಂಜಾ ಪತ್ತೆಯಾಗಿತ್ತು. ಆದರೆ ಗಾಂಜಾ ಸೇದುವ ಚಿಲುಮೆ ಪತ್ತೆ ಆಗಿರಲಿಲ್ಲ. ಗಾಂಜಾ, ಮೊಬೈಲ್ ಸೇರಿದಂತೆ ಇನ್ನಿತರ ಅಕ್ರಮ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಕೈದಿಗಳು ಜೈಲಿನಲ್ಲಿಯೇ ಕೂತು ಅನೇಕ ಅಪರಾಧ ಕೃತ್ಯದಲ್ಲಿ ತೊಡಗಿರುವುದು ಸಹ ಪತ್ತೆಯಾಗಿತ್ತು. ಜೈಲಿನೊಳಗೆ ಮೊಬೈಲ್ ಸೇರಿದಂತೆ ಗಾಂಜಾ ಸೇವನೆ ಬಗ್ಗೆ ಟಿವಿ 9 ವರದಿ ಮಾಡಿತ್ತು. ಅದರ ಬೆನ್ನಲ್ಲೆ ಸಿಸಿಬಿ ಪೊಲೀಸರು ಜೈಲಿನ ಕೋಣೆ ಕೋಣೆಯನ್ನೂ ಸರ್ಚ್ ಮಾಡಿದ್ದರು.
ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬ್ಯಾಕ್ಅಪ್ನ್ನು ಹೆಚ್ಚಿಸಲು ಇಲ್ಲಿವೆ ಆರು ಉಪಯುಕ್ತ ಮಾಹಿತಿ
Published On - 11:46 am, Thu, 3 February 22