AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರವೇ ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕಿಂಗ್ ಪಾಲಿಸಿ ಜಾರಿ -ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರಕಟ

2020ರಲ್ಲಿ ನಿಗದಿ ಮಾಡಲಾದ ಶುಲ್ಕವನ್ನೇ ನಾವು ಅಂತಿಗೊಳಿಸಿದ್ದೇವೆ. ಇದರ ಹೊರತಾಗಿ ಏರಿಯಾ ಹಾಗೂ ಜಾಗಗಳಿಗೆ ಅನುಗುಣವಾಗಿ ಶುಲ್ಕ ಇರಲಿದೆ ಎಂದು ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಶೀಘ್ರವೇ ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕಿಂಗ್ ಪಾಲಿಸಿ ಜಾರಿ -ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರಕಟ
ಶೀಘ್ರವೇ ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕಿಂಗ್ ಪಾಲಿಸಿ ಜಾರಿ -ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರಕಟ
TV9 Web
| Edited By: |

Updated on:Sep 21, 2022 | 3:45 PM

Share

ಬೆಂಗಳೂರು: ಈ ಹಿಂದೆ ಜನರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ರಸ್ತೆ ಬದಿ ವಾಹನ ನಿಲ್ಲಿಸುವ ಪೇ & ಪಾರ್ಕಿಂಗ್ ಪಾಲಿಸಿ (Pay and Parking policy) ಶೀಘ್ರವೇ ಬೆಂಗಳೂರಿನಲ್ಲಿ ಮತ್ತೆ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Commissioner Tushar Girinath) ಘೋಷಿಸಿದ್ದಾರೆ. ಪೇ & ಪಾರ್ಕಿಂಗ್ ಪಾಲಿಸಿ (Bengaluru Parking Policy 2.0) ಜಾರಿ ಮಾಡುವ ಸಲುವಾಗಿ ಹಲವು ಬಾರಿ ಚರ್ಚೆ ಮಾಡಲಾಗಿದೆ. ಈಗ ಎಲ್ಲವೂ ವ್ಯವಸ್ಥಿತವಾಗಿ ಆಗಿದ್ದು, ನೀತಿ ಜಾರಿಯಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

2020ರಲ್ಲಿ ನಿಗದಿ ಮಾಡಲಾದ ಶುಲ್ಕವನ್ನೇ ನಾವು ಅಂತಿಗೊಳಿಸಿದ್ದೇವೆ. ಇದರ ಹೊರತಾಗಿ ಏರಿಯಾ ಹಾಗೂ ಜಾಗಗಳಿಗೆ ಅನುಗುಣವಾಗಿ ಶುಲ್ಕ ಇರಲಿದೆ. A, B, C ಹೀಗೆ ಮೂರು ಹಂತವಾಗಿ ಶುಲ್ಕ ಪಾವತಿಗೆ ಅವಕಾಶ ಮಾಡಿಕೊಡಲಾಗುತ್ತೆ ಎಂದು ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

Published On - 3:45 pm, Wed, 21 September 22