Narendra Modi: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ: ಇಲ್ಲಿದೆ ಫೆ.13ರ ಮೋದಿ ಟೈಂ ಟೇಬಲ್
Aero India Air Show: ನಾಳೆ ಫೆ. 13 ರಿಂದ 17ರವರಗೆ 5 ದಿನಗಳಕಾಲ ನಡೆಯುವ 14ನೇ ಆವೃತಿಯ ಏರೋ ಇಂಡಿಯಾ ಏರ್ ಶೋವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಇಂದು (ಫೆ.12) ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬೆಂಗಳೂರು: ನಾಳೆ ಫೆ. 13 ರಿಂದ 17ರವರಗೆ 5 ದಿನಗಳಕಾಲ ನಡೆಯುವ 14ನೇ ಆವೃತಿಯ ಏರೋ ಇಂಡಿಯಾ ಏರ್ ಶೋವನ್ನು (Aero India Air Show) ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಇಂದು (ಫೆ.12) ಬೆಂಗಳೂರಿಗೆ ಬಂದಿಳಿದಿದ್ದಾರೆ. ಭಾರತೀಯ ವಾಯುಸೇನೆ (Indian Air Force) ವಿಮಾನದಲ್ಲಿ ಹೆಚ್‌ಎಎಲ್‌ಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಹೆಚ್ಎಎಲ್ನಿಂದ ರಸ್ತೆ ಮಾರ್ಗವಾಗಿ ರಾಜಭವನಕ್ಕೆ ಪ್ರಧಾನಿ ಮೋದಿ ತೆರಳಿದ್ದಾರೆ. ಇಂದು ರಾತ್ರಿ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡಲಿದ್ದಾರೆ.
ಫೆ.13ರ ಮೋದಿ ಟೈಂ ಟೇಬಲ್
ಸೋಮವಾರ ಬೆಳಗ್ಗೆ 8:50ಕ್ಕೆ ರಾಜಭವನದಿಂದ ಹೊರಟು ರಸ್ತೆ ಮುಖಾಂತರ ಮೆಕ್ರಿ ಸರ್ಕಲ್ ಬಳಿ ಇರುವ HQTCಗೆ ತೆರಳುತ್ತಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಯಲಹಂಕ ವಾಯುನೆಲೆಗೆ ತಲಪುತ್ತಾರೆ. ಬೆಳಗ್ಗೆ 9:30 ಕ್ಕೆ ಏರ್ ಶೋ ಉದ್ಘಾಟಿಸಲಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಮಂತ್ರಿ ರಾಜ್ ನಾಥ್ ಸಿಂಗ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಭಾಗಿಯಾಗುತ್ತಾರೆ. 9:30 ರಿಂದ 11:30 ರವರೆಗೆ ಏರೋ ವೀಕ್ಷಣೆ ಮಾಡಲಿದ್ದಾರೆ. 11:45ಕ್ಕೆ ಯಲಹಂಕ ವಿಮಾನ ನಿಲ್ದಾಣದಿಂದ ತ್ರಿಪುರಾದ ಅಗರ್ತಾಲ್ಗೆ ತಲುಪಲಿದ್ದಾರೆ.
ರಾಜಭವನದ ಸುತ್ತಮುತ್ತ ಬಿಗಿ ಭದ್ರತೆ
ಪ್ರಧಾನಿ ನರೇಂದ್ರ ಮೋದಿ ರಾಜಾಭವನದಲ್ಲಿ ವಾಸ್ತವ್ಯ ಹೂಡಲಿರುವ ಹಿನ್ನೆಲೆ ರಾಜಾಭವನದ ಸುತ್ತ – ಮುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ