AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾದ ಉಸಿರಾಟ ಸಮಸ್ಯೆ; ನ್ಯೂಮೋನಿಯಾ 20% ಹೆಚ್ಚಳ

ಬೆಂಗಳೂರಿನ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹಾಗೂ ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗಿವೆ. ಈ ಸಮಸ್ಯೆಗಳಿಂದ ಆಸ್ಪತ್ರೆಗೆ ಮಕ್ಕಳು ದಾಖಲಾಗುತ್ತಿದ್ದಾರೆ. ನಗರದಲ್ಲಿ ನ್ಯೂಮೋನಿಯಾ 20% ಹೆಚ್ಚಳವಾಗಿದೆ. ಜ್ವರ, ಕೆಮ್ಮು, ಸುಸ್ತು, ಉಸಿರಾಟದ ಸಮಸ್ಯೆ ಕಂಡು ಬಂದರೆ ನಿಗಾವಹಿಸುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾದ ಉಸಿರಾಟ ಸಮಸ್ಯೆ; ನ್ಯೂಮೋನಿಯಾ 20% ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
Vinayak Hanamant Gurav
| Updated By: ಆಯೇಷಾ ಬಾನು

Updated on: Dec 04, 2023 | 10:45 AM

ಬೆಂಗಳೂರು, ಡಿ.04: ಚೀನಾ, ಅಮೇರಿಕಾ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ನ್ಯೂಮೋನಿಯಾ (Pneumonia) ಆತಂಕ ಹೆಚ್ಚಾಗಿದೆ. ಕಳೆದ ಎರಡು ವಾರದಿಂದ ನಗರದ ಮಕ್ಕಳಲ್ಲಿ (Children) ಉಸಿರಾಟದ ಸಮಸ್ಯೆ, ವೈರಲ್ ನ್ಯುಮೋನಿಯಾ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ದಿನಕ್ಕೆ ಮೂರರಿಂದ ನಾಲ್ಕು ವೈರಲ್ ನ್ಯುಮೋನಿಯಾ ಕೇಸ್​ಗಳು ದಾಖಲಾಗುತ್ತಿವೆ. ರಾಜಧಾನಿಯಲ್ಲಿ ಸುಮಾರು 25 ರಿಂದ 30 ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆಯಾಗುತ್ತಿದೆ. ಜೊತೆಗೆ 1-15 ವರ್ಷದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿವೆ.

ಪ್ರತಿ ದಿನ ಚೀನಾ, ಅಮೇರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 3ರಿಂದ14 ವರ್ಷ ವಯಸ್ಸಿನ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದಲ್ಲಿ ನ್ಯುಮೋನಿಯಾ ಸೋಂಕು ಪತ್ತೆಯಾಗುತ್ತಿದೆ. ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಎದುರಾಗಿದ್ದು ಬೆಂಗಳೂರಿನ ಮಕ್ಕಳಲ್ಲೂ ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆ. ಹೀಗಾಗಿ ಎಚ್ಚರಿಕೆಯಿಂದ ಇರಲು ಪೋಷಕರಿಗೆ ಸೂಚನೆ ನೀಡಲಾಗಿದೆ. ಜ್ವರ, ಕೆಮ್ಮು, ಸುಸ್ತು, ಉಸಿರಾಟದ ಸಮಸ್ಯೆ ಕಂಡು ಬಂದರೆ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 20% ಹೆಚ್ಚಳವಾಗಿದೆ. ನ್ಯೂಮೋನಿಯಾ ಕೇಸ್ 20% ಹೆಚ್ಚಳ. 8 ರಿಂದ 10 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗುತ್ತಿದ್ದು ಪ್ರತಿ ದಿನ 5 ರಿಂದ 6 ಹೊಸ ಕೇಸ್​ಗಳು ದಾಖಲಾಗುತ್ತಿವೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಪರಿಸ್ಥಿತಿ ಆತಂಕ; ಬೆಂಗಳೂರಿನಲ್ಲಿ ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ಆರೋಗ್ಯ ಇಲಾಖೆಯಿಂದ ಪೋಷಕರಿಗೆ ಗೈಡ್ ಲೈನ್ಸ್

ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆ

ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 30% ಹೆಚ್ಚಳ, ನ್ಯೂಮೋನಿಯಾ ಕೇಸ್ 25% ಹೆಚ್ಚಳವಾಗಿದೆ. 8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗಿದ್ದು ಪ್ರತಿ ದಿನ 5 ರಿಂದ 6 ಹೊಸ ಕೇಸ್ ದಾಖಲಾಗುತ್ತಿದೆ.

ರೈನ್ಬೋ ಚಿಲ್ಡ್ರನ್ ಆಸ್ಪತ್ರೆ

ರೈನ್ಬೋ ಚಿಲ್ಡ್ರನ್ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 25 % ಹೆಚ್ಚಳವಾಗಿದ್ದು ನ್ಯೂಮೋನಿಯಾ ಕೇಸ್ 20% ಹೆಚ್ಚಾಗಿದೆ. 8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗುತ್ತಿದೆ. ಪ್ರತಿ ದಿನ 5 ರಿಂದ 6 ಹೊಸ ಕೇಸ್ ದಾಖಲಾಗುತ್ತಿದೆ.

ಜಯನಗರ ಆಸ್ಪತ್ರೆ

ಜಯನಗರ ಆಸ್ಪತ್ರೆಯಲ್ಲಿ ಪ್ರತಿ ದಿನ ಒಪಿಡಿಗೆ 100ಕ್ಕೂ ಹೆಚ್ಚು ಮಕ್ಕಳು ಬರ್ತಿದ್ದಾರೆ. ಡೆಂಘೀ 2 ರಿಂದ 3 ಕೇಸ್ ಪಾಸಿಟಿವ್ ಬರ್ತಿದೆ. ನ್ಯೂಮೋನಿಯಾ ಕೇಸ್ 5% ಹೆಚ್ಚಳ.

ಬೌರಿಂಗ್ ಆಸ್ಪತ್ರೆ

ಬೌರಿಂಗ್ ಆಸ್ಪತ್ರೆಯಲ್ಲಿ ರೆಸ್ಪಿರೇಟರಿ ಕೇಸ್ ಶೇಕಾಡ 15% ಹೆಚ್ಚಳ. ನ್ಯೂಮೋನಿಯಾ ಕೇಸ್ 10% ಹೆಚ್ಚಳ. 8 ರಿಂದ 15 ವರ್ಷದ ಮಕ್ಕಳಲ್ಲಿ ವೈರಲ್ ನ್ಯೂಮೋನಿಯಾ ಪತ್ತೆಯಾಗುತ್ತಿದೆ. ಪ್ರತಿ ದಿನ 2 ರಿಂದ 4 ಹೊಸ ಕೇಸ್ ದಾಖಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ