ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಬಡವ, ಶ್ರೀಮಂತ ಕಾರಣ ಕೊಡುತ್ತಿರುವ ಆರೋಪಿಗಳು

ಈ ಹಿಂದೆ ಸತೀಶ್ ರೆಡ್ಡಿ ಮನೆಗೆ ಕಲ್ಲು ಹೊಡೆದಿದ್ದ ಆರೋಪಿ ಸೋಮಶೇಖರ್, ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಸೋಮಶೇಖರ್ ಮೇಲೆ ಅನುಮಾನ ಬಂದಿದ್ದು, ಹುಡುಕಾಟ ನಡೆಸುತ್ತಿದ್ದಾರೆ.

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಬಡವ, ಶ್ರೀಮಂತ ಕಾರಣ ಕೊಡುತ್ತಿರುವ ಆರೋಪಿಗಳು
ಸುಟ್ಟು ಕರಕಲಾದ ಶಾಸಕ ಸತೀಶ್ ರೆಡ್ಡಿ ಕಾರುಗಳು
Updated By: sandhya thejappa

Updated on: Aug 19, 2021 | 11:19 AM

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ (Sathish Reddy) ಕಾರುಗಳಿಗೆ ಬೆಂಕಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಗ್ನೇಯ ವಿಭಾಗದ ಪೊಲೀಸರು ಮೂವರು ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳಿಂದ ಬಾಯಿ ಬಿಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು ಎಷ್ಟೇ ಕೇಳಿದರೂ ಆರೋಪಿಗಳು ಮಾತ್ರ ಬಡವ, ಶ್ರೀಮಂತ ಕಾರಣ ನೀಡುತ್ತಿದ್ದಾರೆ. ಮತ್ತೊಂದೆಡೆ ಸೋಮಶೇಖರ್ಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.

ಈ ಹಿಂದೆ ಸತೀಶ್ ರೆಡ್ಡಿ ಮನೆಗೆ ಕಲ್ಲು ಹೊಡೆದಿದ್ದ ಆರೋಪಿ ಸೋಮಶೇಖರ್, ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ಪರಾರಿಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಸೋಮಶೇಖರ್ ಮೇಲೆ ಅನುಮಾನ ಬಂದಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ನಿನ್ನೆ (ಆಗಸ್ಟ್ 18) ಅಜ್ಞಾತ ಸ್ಥಳದಿಂದ ಸೋಮಶೇಖರ್ ವಿಡಿಯೋ ಹರಿಬಿಟ್ಟಿದ್ದರು. ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲಾಗುತ್ತಿದೆ ಎಂದು ವಿಡಿಯೋದಲ್ಲಿ ಸೋಮಶೇಖರ್ ಸತೀಶ್ ರೆಡ್ಡಿ ವಿರುದ್ಧ ಆರೋಪ ಮಾಡಿದ್ದಾರೆ.

ಮೂವರಿಗೆ ನ್ಯಾಯಾಂಗ ಬಂಧನ
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಾಗರ್ ತಾಪ, ನವೀನ್ ಮತ್ತು ಶ್ರೀಧರ್​ಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಆಗಸ್ಟ್ 14ಕ್ಕೆ ಪೊಲೀಸರು ಆರೋಪಿಗಳನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ಶಿಕ್ಷೆ ನೀಡಲಾಗಿದೆ.

ಇದನ್ನೂ ಓದಿ

ದೊಡ್ಡದೊಡ್ಡ ಕಾರುಗಳಲ್ಲಿ ಓಡಾಡುತ್ತಿರುವವರಿಗೆ ಬುದ್ಧಿ ಕಲಿಸಬೇಕೆಂದು ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿಯಿಟ್ಟರು? 3 ಆರೋಪಿಗಳ ಬಂಧನ

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

(Police are investigating the accused separately case of setting fire to MLA Satish Reddy cars)