ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಪೊಲೀಸರು ಮೂವರು ಆರೋಪಿಗಳನ್ನ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. ನಾಳೆ ಮತ್ತೆ ಆರೋಪಿಗಳನ್ನ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಶಾಸಕ ಸತೀಶ್ ರೆಡ್ಡಿ (Sathish Reddy) ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನ (Judicial custody) ವಿಧಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಾಗರ್ ತಾಪ, ನವೀನ್ ಮತ್ತು ಶ್ರೀಧರ್ಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ನಿನ್ನೆ ಪೊಲೀಸರು ಆರೋಪಿಗಳನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ಶಿಕ್ಷೆ ನೀಡಲಾಗಿದೆ.
ಪೊಲೀಸರು ಮೂವರು ಆರೋಪಿಗಳನ್ನ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. ನಾಳೆ ಮತ್ತೆ ಆರೋಪಿಗಳನ್ನ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಕಣ್ಣೀರು ಹಾಕಿದ ಆರೋಪಿಗಳು ಪೊಲೀಸರು ವಿಚಾರಣೆ ನಡೆಸುವ ವೇಳೆ ಆರೋಪಿಗಳು ಕಣ್ಣೀರು ಹಾಕಿದರು. ಬಡತನ ನೆನೆದು ಕಣ್ಣೀರಿಟ್ಟ ಮೂವರು ಆರೋಪಿಗಳನ್ನ ಕಂಡ ಪೊಲೀಸರು ಗಪ್ ಚುಪ್ ಆಗಿದ್ದರು. ಬಡವರನ್ನ ನೋಡಿದ್ರೆ ಕರುಳು ಕಿತ್ತು ಬರುತ್ತೆ ಸರ್. ದೇವಸ್ಥಾನದ ಬಳಿ ಕುಳಿತಿರೋರನ್ನ ನೋಡಿದ್ರೆ ಅಯ್ಯೋ ಅನ್ನಿಸುತ್ತೆ ಅಂತ ಸೆಂಟಿಮೆಂಟ್ ಹಾಗೂ ಹೃದಯಸ್ಪರ್ಶಿ ಮಾತುಗಳಿಂದ ಪೊಲೀಸರಿಗೆ ಕೆಲ ನಿಮಿಷ ಮಾತು ಹೊರಗೆ ಬರಲಿಲ್ಲ.
ಕೆಲ ಮಾಹಿತಿ ನೀಡಿದ ಕಮಲ್ ಪಂತ್ ಶಾಸಕರ ಮನೆ ಆವರಣದಲ್ಲಿದ್ದ 2 ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ತೆರಳಿದ್ದರು. ಸ್ಥಳ ಪರಿಶೀಲನೆ ಬಳಿಕ ಬೊಮ್ಮನಹಳ್ಳಿ ಠಾಣೆಯಲ್ಲಿ ಮೊಕದ್ದಮೆ ದಾಕಲಾಗಿತ್ತು. ಪ್ರಕರಣ ಸಂಬಂಧ 5 ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸಿಸಿಟಿವಿ ದೃಶ್ಯ ಮಾತ್ರ ಸಿಕ್ಕಿತ್ತು, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಸಂಜೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆಗ್ನೇಯ ಡಿಸಿಪಿ ಜೋಶಿ ನೇತೃತ್ವದಲ್ಲಿ ಆರೋಪಿಗಳ ಬಂಧಿಸಲಾಗಿದೆ. ಅರೋಪಿಗಳ ಪೈಕಿ ಸತೀಶ್ ರೆಡ್ಡಿ ಮನೆ ಕಾಂಪೌಂಡ್ ಒಳಗೆ ಬಂದು ಬೆಂಕಿ ಇಟ್ಟವನು ಒಬ್ಬ ಮಾತ್ರ, ಆತನೇ ಸಾಗರ್. ಉಳಿದ ಇಬ್ಬರು ಗೇಟ್ ಹೊರಗೆ ಇದ್ದಾರೆ. ಸಾಗರ್ ಎಂಬ ಬಂಧಿತ ಆರೋಪಿ ಮೂಲತಃ ನೇಪಾಳದವ, ಹುಟ್ಟಿಬೆಳೆದಿರೋದು ಬೆಂಗಳೂರಿನಲ್ಲಿ ಕಮಲ್ ಪಂತ್ ತಿಳಿಸಿದರು.
ಇದನ್ನೂ ಓದಿ
Fighter Vivek Death: ‘ಲವ್ ಯೂ ರಚ್ಚು’ ಚಿತ್ರದ ನಿರ್ದೇಶಕ ಸೇರಿದಂತೆ ಮೂವರಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ
(Judicial custody of accused of setting fire to MLA Sathish Reddy cars)
Published On - 1:43 pm, Sun, 15 August 21