ಒಂದೇ ಮನೆಯ 5 ಮಂದಿ ಸಾವು ಪ್ರಕರಣ: ಇಬ್ಬರು ಅಳಿಯಂದಿರು ಹೇಳೋದೇನು?

| Updated By: sandhya thejappa

Updated on: Sep 18, 2021 | 11:10 AM

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಂಕರ್ ಅಳಿಯಂದಿರರನ್ನು ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಶಂಕರ್ ಅಳಿಯಂದಿರನ್ನು ವಿಚಾರಣೆ ಮಾಡಲಾಗುತ್ತಿದೆ.

ಒಂದೇ ಮನೆಯ 5 ಮಂದಿ ಸಾವು ಪ್ರಕರಣ: ಇಬ್ಬರು ಅಳಿಯಂದಿರು ಹೇಳೋದೇನು?
ಸಿಂಚನಾ ಮತ್ತು ಸಿಂಧುರಾಣಿ
Follow us on

ಬೆಂಗಳೂರು: ಶಂಕರ್ ಕುಟುಂಬದ ಐವರ ದಾರುಣ ಸಾವು ಪ್ರಕರಣ ಸಂಬಂಧ ಸೋಮವಾರದಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿನ್ನೆ ಶಂಕರ್ ಮನೆಗೆ ಬಂದಾಗ ವಿಷಯ ಬಯಲಾಗಿತ್ತು. ಶಂಕರ್ ಮನೆಗೆ ನೆರೆಹೊರೆಯವರು ಹೆಚ್ಚಾಗಿ ಬರುತ್ತಿರಲಿಲ್ಲ. ಅಕ್ಕ ಪಕ್ಕದ ಮನೆಯವರ ಜತೆ ಹೆಚ್ಚು ಒಡನಾಟ ಇರಲಿಲ್ಲ. ಯಾರೂ ಮನೆ ಕಡೆ ಸುಳಿಯದ ಹಿನ್ನೆಲೆ ಮಾಹಿತಿ ಗೊತ್ತಾಗಿಲ್ಲ. ಭಾರತಿ ಸಾಕಷ್ಟು ಜೊರಾಗಿದ್ದರಂತೆ. ಹೀಗಾಗಿ ಯಾರನ್ನು ಹೆಚ್ಚಾಗಿ ಮನೆಗೆ ಸೇರಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಂಕರ್ ಅಳಿಯಂದಿರರನ್ನು ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಶಂಕರ್ ಅಳಿಯಂದಿರನ್ನು ವಿಚಾರಣೆ ಮಾಡಲಾಗುತ್ತಿದೆ. ಸಿಂಚನಾ ಪತಿ ಪ್ರವೀಣ್, ಸಿಂಧುರಾಣಿ ಪತಿ ಶ್ರೀಕಾಂತ್​ನನ್ನು ವಿಚಾರಣೆ ಮಾಡಲಾಗುತ್ತಿದೆ. ಒಂದೇ ಕೊಠಡಿಯಲ್ಲಿರಿಸಿ ಅಳಿಯಂದಿರಿಬ್ಬರನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದೆ.

6 ವರ್ಷದ ಹಿಂದೆ ಪ್ರವೀಣ್, ಸಿಂಚನಾಳನ್ನು ಮದುವೆಯಾಗಿದ್ದ. ಜಕ್ಕೂರು ಬಳಿ ಮನೆ ಮಾಡಿಕೊಂಡು ತಂದೆ, ತಾಯಿ ಜತೆ ವಾಸವಿದ್ದ. ಪ್ರವೀಣ್ ತಂದೆ, ತಾಯಿ ಜತೆಗಿರಲು ಸಿಂಚನಾಗೆ ಇಷ್ಟವಿರಲಿಲ್ಲ. ಪ್ರವೀಣ್ ಪತ್ನಿ ಸಿಂಚನಾ ಜತೆ ಕೇವಲ ಫೋನ್ ಸಂಪರ್ಕದಲ್ಲಿದ್ದ. ಇ-ಮೇಲ್ ಮೂಲಕ ಕೂಡ ಸಿಂಚನಾ ಜೊತೆ ಸಂಪರ್ಕವಿದ್ದ. ಬೇರೆ ಮನೆ ಮಾಡಿದರೆ ಮಾತ್ರ ಬರುತ್ತೇನೆ ಅಂತ ಸಿಂಚನಾ ಹೇಳುತ್ತಿದ್ದಳಂತೆ. ಒಂದೂವರೆ ವರ್ಷದ ಹಿಂದೆ ತಂದೆ ಮನೆಗೆ ಸಿಂಚನಾ ಬಂದಿದ್ದಳಂತೆ ಎಂದು ತಿಳಿದುಬಂದಿದೆ.

2020ರ ಫೆಬ್ರವರಿಯಲ್ಲಿ ಸಿಂಧುರಾಣಿ, ಶ್ರೀಕಾಂತ್ ಮದುವೆಯಾಗಿತ್ತು. ಆಂಧ್ರದ ಗೋರಂಟ್ಲಾ ನಿವಾಸಿ ಶ್ರೀಕಾಂತ್ ಜತೆ ಮದುವೆಯಾಗಿತ್ತು. ಬೆಂಗಳೂರಿನ ಕಾಡುಗೋಡಿಗೋಡಿಯಲ್ಲಿ ವಾಸವಿದ್ದರು. ಇದೇ ತಿಂಗಳಲ್ಲಿ 9 ತಿಂಗಳ ಮಗಳ ನಾಮಕರಣ ನಿಗದಿಯಾಗಿತ್ತು. ನಾಮಕರಣಕ್ಕೂ ಮುನ್ನಾ ದುರ್ಘಟನೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ಶ್ರೀಕಾಂತ್ ತಿಳಿಸಿದ್ದಾನೆ.

ಜೊಮ್ಯಾಟೊದಿಂದ ಊಟ ತರಿಸಿದ್ದ ಕುಟುಂಬ ಸದಸ್ಯರು
ಕುಟುಂಬ ಸದಸ್ಯರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಮವಾರ ಬೆಳಗ್ಗೆ ಜೊಮ್ಯಾಟೊದಿಂದ ಊಟ ಆರ್ಡರ್ ಮಾಡಿ ತರಿಸಿದ್ದರು. ಜೊಮ್ಯಾಟೊದಿಂದ ಊಟ ತರಿಸಿದ್ದನ್ನು ಸ್ಥಳೀಯರು ನೋಡಿದ್ದಾರೆ. ಆನಂತರ ಆಫ್ ಆಗಿದ್ದ ಲೈಟ್ ನಿನ್ನೆವರೆಗೆ ಆನ್ ಆಗಿರಲಿಲ್ಲ. ಎಲ್ಲಾದರು ಹೋಗಿರಬಹುದೆಂದು ಸ್ಥಳೀಯರು ಅಂದುಕೊಂಡಿದ್ದರಂತೆ.

ಇದನ್ನೂ ಓದಿ

ಒಂದೇ ಕುಟುಂಬದ ಐದು ಮಂದಿ ಸಾವು ಪ್ರಕರಣ; ಪತ್ನಿಯನ್ನೇ ದೂರಿದ ಸಂಪಾದಕ ಶಂಕರ್

Crime News: ಪ್ರೀತಿಸಲು ನಿರಾಕರಿಸಿದ ಬಾಲಕಿಗೆ ಚಾಕು ಇರಿದ! ಒನ್​​ ಸೈಡ್ ಲವ್ ಹೆಸರಿನಲ್ಲಿ ಯುವಕನ ಹುಚ್ಚಾಟ

(Police enquiring Shankar son in law about Family Issue in Bengaluru)