ಪತ್ನಿಯ ಸಾರಥ್ಯದಲ್ಲಿ ಕುಟುಂಬದ 5 ಮಂದಿ ಸಾವು; ಪತ್ನಿಯನ್ನು ದೂರಿದ ಸಂಪಾದಕ ಶಂಕರ್

ಸಂಪಾದಕ ಶಂಕರ್ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದವರು. ಚಿಕ್ಕ ದುರ್ಗೆಗೌಡ ಮತ್ತು ಅಮ್ಮಯಮ್ಮ ಎಂಬ ದಂಪತಿಗಳ ಹಿರಿಯ ಮಗ. ಶಂಕರ್​ಗೆ ಒಬ್ಬ ಸಹೋದರ, ಐದು ಜನ ಸಹೋದರಿಯರಿದ್ದಾರೆ.

ಪತ್ನಿಯ ಸಾರಥ್ಯದಲ್ಲಿ ಕುಟುಂಬದ 5 ಮಂದಿ ಸಾವು; ಪತ್ನಿಯನ್ನು ದೂರಿದ ಸಂಪಾದಕ ಶಂಕರ್
ಆತ್ಮಹತ್ಯಗೆ ಶರಣಾಗಿರುವ ಶಂಕರ್ ಕುಟುಂಬ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 18, 2021 | 11:20 AM

ಮಂಡ್ಯ: ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಪಾದಕ ಶಂಕರ್, ತನ್ನ ಪತ್ನಿಯನ್ನು ದೂರಿದ್ದಾರೆ. ನನ್ನ ಮಗಳು ಮಾತ್ರ ಚೆನ್ನಾಗಿರಬೇಕು, ಅಳಿಯ ಎನಾದರೂ ಆಗಲಿ ಅಂತ ನನ್ನ ಪತ್ನಿ ಹೇಳುತ್ತಿದ್ದರು. ಅಳಿಯ ಕುಟುಂಬ ವರ್ಗದವರೊಂದಿಗೆ ಹೊಂದಿಕೊಳ್ಳದಂತೆ ನಡೆದುಕೊಳ್ಳುವುದನ್ನ ಹೇಳಿಕೊಡುತ್ತಿದ್ದಳು. ಇದನ್ನ ನಾನು ಕಣ್ಣಾರೆ ಕಂಡಿದ್ದಾನೆ ಅಂತ ಶಂಕರ್ ಆರೋಪ ಮಾಡಿದ್ದಾರೆ.

ಸಂಪಾದಕ ಶಂಕರ್ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದವರು. ಚಿಕ್ಕ ದುರ್ಗೆಗೌಡ ಮತ್ತು ಅಮ್ಮಯಮ್ಮ ಎಂಬ ದಂಪತಿಗಳ ಹಿರಿಯ ಮಗ. ಶಂಕರ್​ಗೆ ಒಬ್ಬ ಸಹೋದರ, ಐದು ಜನ ಸಹೋದರಿಯರಿದ್ದಾರೆ. ಹಲವು ವರ್ಷಗಳ ಹಿಂದೆಯೇ ಬದುಕು ಕಟ್ಟಿಕೊಳ್ಳಲು ಶಂಕರ್ ಮಂಡ್ಯದಿಂದ ಬೆಂಗಳೂರಿಗೆ ಬಂದಿದ್ದರು. ಸದ್ಯ ಹಲ್ಲೆಗೆರೆಯಲ್ಲಿ ಶಂಕರ್ ಓರ್ವ ಸಹೋದರಿ ಪಾರ್ವತಮ್ಮ ಇದ್ದಾರೆ.

ಶಂಕರ್ ತನ್ನ ಗ್ರಾಮದಲ್ಲಿ ಯಲ್ಲಮ್ಮ ದೇವಿ ದೇವಾಲಯ ನಿರ್ಮಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ ಶಂಕರ್ ನೇತೃತ್ವದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಸವದತ್ತಿಯ ಯಲ್ಲಮ್ಮ ದೇವಿ ಶಂಕರ್ ಮನೆ ದೇವರು. ಪ್ರತಿಬಾರಿ ಸವದತ್ತಿಗೆ ಹೋಗಲಾಗಲ್ಲ ಎಂದು ಗ್ರಾಮದಲ್ಲೇ ದೇವಾಲಯವನ್ನು ನಿರ್ಮಿಸಿದ್ದರು. 2002 ರಲ್ಲೇ ದೇವಾಲಯ ನಿರ್ಮಣವಾಗಿತ್ತು. ಇತ್ತೀಚೆಗೆ ಮೂರನೇ ಶ್ರಾವಣ ಶನಿವಾರ ಪತ್ನಿ ಮತ್ತು ಮಕ್ಕಳ ಸಮೇತ ಬಂದು ಪೂಜೆ ಸಲ್ಲಿಸಿ ಹೋಗಿದ್ದರು. ದೇವಾಲಯಕ್ಕೆ ಪೂಜೆ ಸಲ್ಲಿಸುವುದಕ್ಕಾಗಿ ಶಂಕರ್ ಅರ್ಚಕನನ್ನ ನೇಮಿಸಿದ್ದಾರೆ. ಪ್ರತಿ ತಿಂಗಳು 3 ಸಾವಿರ ರೂ. ವೇತನ ನೀಡಿ ಅರ್ಚಕನನ್ನು ನೇಮಿಸಿದ್ದಾರೆ.

ಇನ್ನು ಈ ಪ್ರಕರಣದ ಬಗ್ಗೆ ಹಲ್ಲೆಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಂಕರ್ ಸಹೋದರಿ ಪಾರ್ವತಮ್ಮ, ಟಿವಿ9ನಲ್ಲಿ ನೋಡಿದ ಬಳಿಕ ನನಗೆ ಮಾಹಿತಿ ತಿಳಿಯಿತು. ಶಂಕರ್ ಬೆಂಗಳೂರಿಗೆ ಹೋಗಿ 30 ವರ್ಷ ಆಗಿದೆ. ಶಂಕರ್ ಕುಟುಂಬಸ್ಥರು ಎಲ್ಲರೂ ಚೆನ್ನಾಗಿಯೇ ಇದ್ದರು. ಶಂಕರ್ ಕುಟುಂಬದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಮೊದಲ ಶ್ರಾವಣ ಶನಿವಾರ ದೇವಾಲಯಕ್ಕೆ ಬಂದಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಗೊತ್ತಿಲ್ಲ ಅಂತ ಹೇಳಿದರು.

ಇದನ್ನೂ ಓದಿ

ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ 5 ಮಂದಿ ಸಾವು ಪ್ರಕರಣ; ವೃತ್ತಾಂತ ಘನಘೋರ, ಅಸಲಿ ಸತ್ಯಗಳು ಭೀಕರ

Mantri Mall: ತೆರಿಗೆ ಕಟ್ಟಿ ಕಟ್ಟೀ ಅಂದರೂ ಡೋಂಟ್​ ಕೇರ್! ಮಂತ್ರಿ ಮಾಲ್​ಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ

(Editor Shankar accused of wife in Bengaluru)

Published On - 10:38 am, Sat, 18 September 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್