ಯುವತಿಗೆ ಧಮ್ಕಿ ಹಾಕಿ ಆಕೆಯ ತಂದೆಗೆ ಖಾಸಗಿ ಫೋಟೋ ಕಳುಹಿಸಿದ ಆರೋಪಿ ಅರೆಸ್ಟ್!
ಆರೋಪಿ ನಂದೀಶ್ ಯುವಕನೊಬ್ಬನ ಬಳಿ ಯುವತಿಯ ಖಾಸಗಿ ಫೋಟೋ ಪಡೆದಿದ್ದ. ಆ ಫೋಟೋಗಳನ್ನು ಯುವತಿಯ ತಂದೆಗೆ ಕಳುಹಿಸಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಸ್ನೇಹಿತನೊಂದಿಗೆ ಯುವತಿ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ಬೆಂಗಳೂರು: ಯುವತಿಗೆ ಧಮ್ಕಿ ಹಾಕಿ, ಖಾಸಗಿ ಫೋಟೋವನ್ನು (Photo) ಆಕೆಯ ಪೋಷಕರಿಗೆ ಕಳಿಸಿದ ಹಿನ್ನೆಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಳಿಮಾವು ರೌಡಿಶೀಟರ್ ನಂದೀಶ್ ಎಂಬಾತನನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು (Cyber Crime Police) ಅರೆಸ್ಟ್ ಮಾಡಿದ್ದಾರೆ. ಆರೋಪಿ ನಂದೀಶ್ ಯುವಕನೊಬ್ಬನ ಬಳಿ ಯುವತಿಯ ಖಾಸಗಿ ಫೋಟೋ ಪಡೆದಿದ್ದ. ಆ ಫೋಟೋಗಳನ್ನು ಯುವತಿಯ ತಂದೆಗೆ ಕಳುಹಿಸಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಸ್ನೇಹಿತನೊಂದಿಗೆ ಯುವತಿ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಯುವತಿ ದೂರು ಆಧರಿಸಿ ರೌಡಿಶೀಟರ್ ನಂದೀಶ್ ಅರೆಸ್ಟ್ ಆಗಿದ್ದಾನೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ: ಶಿವಮೊಗ್ಗ: ಹಳೇ ದ್ವೇಷ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ನಗರದ ಸೂಳೆಬೈಲ್ನಲ್ಲಿ ತಡರಾತ್ರಿ ನಡೆದಿದೆ. ಸಲೀಂ ಅಹ್ಮದ್ ಮತ್ತು ಅಬ್ದುಲ್ ದಸ್ತಗಿರಿ ಎಂಬುವವರನ್ನು ಟಿಪ್ಪು ಮತ್ತು ಆತನ ಸಹಚರರು ಹತ್ಯೆಗೈದದಿದ್ದಾರೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೈಕ್ ಸವಾರ ಸ್ಥಳದಲ್ಲೇ ಸಾವು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೀರಮಾನ್ವಿ ಬಳಿ ಬೈಕ್ ಸವಾರ ಮಲ್ಲಿಕಾರ್ಜುನ(35) ಎಂಬುವವರು ಮೃತಪಟ್ಟಿದ್ದಾರೆ. ಬಸ್ನ ಅತಿಯಾದ ವೇಗ ಅಪಘಾತಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದ್ದು, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಪಲ್ಟಿ; ಮೂವರಿಗೆ ಗಾಯ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಚಾಚಹಳ್ಳಿ ಗ್ರಾಮದಲ್ಲಿ ಕಾರು ಪಲ್ಟಿಯಾಗಿ ಮೂವರಿಗೆ ಗಾಯವಾಗಿದೆ. ಕಾರಿನಲ್ಲಿದ್ದ ಮೂವರು ಸೆಸ್ಕ್ ಸಿಬ್ಬಂದಿಗಳಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳ ವಿವರ ತಿಳಿದು ಬಂದಿಲ್ಲ. ಸದ್ಯ ಗಾಯಾಳುಗಳನ್ನ ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮಾರಣಾಂತಿಕ ಹಲ್ಲೆ: ಹಣದ ವಿಚಾರವಾಗಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ನಗರದ ರಾಜೀವ್ ಗಾಂಧಿ ನಗರದಲ್ಲಿ ನಡೆದಿದೆ. ಮೆಹಬೂಬ್ ಪಾಷಾ ಮೇಲೆ ಇದಾಯತ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಮೆಹಬೂಬ್ ಪಾಷಾ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ
ಮಂಗಳೂರು: ಕಳ್ಳತನ ಕೇಸ್ ಆರೋಪಿ ಕಸ್ಟಡಿಯಲ್ಲೇ ಸಾವು, ಪ್ರಕರಣ ತನಿಖೆ ಕೈಗೆತ್ತಿಕೊಂಡ CID
ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿವೆ ವಿದೇಶಿ ಪಕ್ಷಿಗಳು; ಅಪರೂಪದ ಫೋಟೋಗಳು ಇಲ್ಲಿವೆ
Published On - 10:28 am, Sun, 20 February 22