AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯಿಂದ ಪಿಯು ಪ್ರಾಯೋಗಿಕ ಪರೀಕ್ಷೆ ಆರಂಭ; ಹಿಜಾಬ್ ವಿವಾದದಿಂದ ಗೈರಾದರೆ ಮತ್ತೆ ಅವಕಾಶ ಇಲ್ಲ

ಹಿಜಾಬ್ ವಿವಾದದಿಂದ ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಕಾರಣದಿಂದ ಹಿಜಾಬ್​​ ವಿವಾದದಿಂದ ಗೈರಾದರೆ ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಲಿದೆ.

ನಾಳೆಯಿಂದ ಪಿಯು ಪ್ರಾಯೋಗಿಕ ಪರೀಕ್ಷೆ ಆರಂಭ; ಹಿಜಾಬ್ ವಿವಾದದಿಂದ ಗೈರಾದರೆ ಮತ್ತೆ ಅವಕಾಶ ಇಲ್ಲ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 20, 2022 | 8:42 AM

Share

ಬೆಂಗಳೂರು: ನಾಳೆಯಿಂದ (ಫೆಬ್ರವರಿ 21, ಸೋಮವಾರ) ಪಿಯು ಕಾಲೇಜುಗಳಲ್ಲಿ (PU Colleges) ಪ್ರಾಯೋಗಿಕ ಪರೀಕ್ಷೆ (Preparatory Exams) ಆರಂಭವಾಗಲಿದೆ. ಕರ್ನಾಟಕ ರಾಜ್ಯದ ಬಹುತೇಕ ಪಿಯು ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಪಿಯು ಬೋರ್ಡ್​ ಈಗಾಗಲೇ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯಂತೆಯೇ (Exam Timetable) ಪರೀಕ್ಷೆ ನಡೆಯಲಿದೆ. ಹಿಜಾಬ್ ವಿವಾದದಿಂದ (Hijab Controversy) ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಕಾರಣದಿಂದ ಹಿಜಾಬ್​​ ವಿವಾದದಿಂದ ಗೈರಾದರೆ ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಲಿದೆ.

ಹಿಜಾಬ್ ವಿವಾದದ ನಡುವೆಯೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಹಿಜಾಬ್ ಸಂಘರ್ಷದಿಂದ ಪದವಿ ಕಾಲೇಜು ರಜೆ ಹಿನ್ನಲೆ ಮೂರು ದಿನ ತಡವಾಗಿ ಪರೀಕ್ಷೆ ಆರಂಭ ಆಗುತ್ತಿದೆ. ಪ್ರಾಯೋಗಿಕ ಪರೀಕ್ಷೆ ಮುಗಿಸಲು ಮಾರ್ಚ್ 25ರ ವರೆಗೂ ಪದವಿ ಪೂರ್ವ ಮಂಡಳಿ ಅವಕಾಶ ನೀಡಿದೆ. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಹಿಜಾಬ್ ವಿವಾದ ಬಹಳಷ್ಟು ಸಮಸ್ಯೆ ಉಂಟುಮಾಡಿದೆ. ಹಲವು ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ತರಗತಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಈ ಹಿನ್ನೆಲೆ, ಪರೀಕ್ಚೆಗೆ ಹಾಜರಾಗದಿದ್ದರೆ ಮತ್ತೆ ಸಮಸ್ಯೆ ಉಂಟಾಗಲಿದೆ.

ಪಾಠ ಪ್ರವಚನ ಮುಗಿದಿಲ್ಲ; ಪದವಿ ಪರೀಕ್ಷೆಗಳನ್ನು 1 ತಿಂಗಳು ಮುಂದೂಡಲು ವಿವಿಗಳಿಗೆ ಸೂಚನೆ

ಈ ಮಧ್ಯೆ, ಪದವಿ ಪರೀಕ್ಷೆಗಳನ್ನು 1 ತಿಂಗಳು ಮುಂದೂಡಲು ವಿಶ್ವ ವಿದ್ಯಾಲಯಗಳಿಗೆ ಸೂಚನೆ ನೀಡಲಾಗಿದೆ. ವಿಶ್ವವಿದ್ಯಾಲಯಗಳ ವಿಸಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಎಸಿಎಸ್​ ಜಿ.ಕುಮಾರ್ ನಾಯಕ್ ಈ ಬಗ್ಗೆ ಸೂಚನೆ ನೀಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ವಿವಿಗಳ ಸೆಮಿಸ್ಟರ್ ಪರೀಕ್ಷೆ 1 ತಿಂಗಳ ಕಾಲ ಮುಂದೂಡಿ ಎಂದು ಉನ್ನತ ಶಿಕ್ಷಣ ಇಲಾಖೆ ಎಸಿಎಸ್ ತಿಳಿಸಿದ್ದಾರೆ. ಕೊರೊನಾ ಸೋಂಕು, ಒಮಿಕ್ರಾನ್ ಸೋಂಕು ಹೆಚ್ಚಳ, ಅತಿಥಿ ಉಪನ್ಯಾಸಕರ ಮುಷ್ಕರದಿಂದ ಪಾಠ ಪ್ರವಚನ ಮುಗಿದಿಲ್ಲ ಈ ಕಾರಣದಿಂದ ಹೀಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಷ್ಟೇ ಅಲ್ಲದೆ ಕೊರೊನಾ ಬಳಿಕ ಇದೀಗ ಹಿಜಾಬ್ ವಿವಾದ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಕರ್ನಾಟಕ ರಾಜ್ಯಾದಂತ ಮೂರು ದಿನಗಳ ಕಾಲ ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆ ಬಳಿಕ, ಇದೀಗ ಕಾಲೇಜು ಮತ್ತೆ ಆರಂಭವಾಗಿದೆ. ಆದರೂ ಹಲವು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತೆ ಮೊದಲಿನಂತೆ ಆರಂಭವಾಗಿಲ್ಲ.

ಇದನ್ನೂ ಓದಿ: Hijab Row: ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದ ಉಪನ್ಯಾಸಕಿ ರಾಜೀನಾಮೆ

ಇದನ್ನೂ ಓದಿ: Karnataka Hijab Row Highlights: ಸಮವಸ್ತ್ರ ಸಂಘರ್ಷ! ಹಿಜಾಬ್​​ ಧರಿಸಲು ಅವಕಾಶ ಕೊಡಿ ಇಲ್ಲದಿದ್ರೆ ಟಿಸಿ ಕೊಡಿ; ವಿದ್ಯಾರ್ಥಿಗಳ ಆಕ್ರೋಶ

Published On - 8:38 am, Sun, 20 February 22

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ