Karnataka Hijab Row Highlights: ಸಮವಸ್ತ್ರ ಸಂಘರ್ಷ! ಹಿಜಾಬ್ ಧರಿಸಲು ಅವಕಾಶ ಕೊಡಿ ಇಲ್ಲದಿದ್ರೆ ಟಿಸಿ ಕೊಡಿ; ವಿದ್ಯಾರ್ಥಿಗಳ ಆಕ್ರೋಶ
Karnataka Hijab Controversy Highlights Updates: ಹಿಜಾಬ್ ಧರಿಸಲು ಅನುಮತಿಗೆ ಆಗ್ರಹಿಸಿ ಪ್ರತಿಭಟನೆಯೂ ನಡೆಸಿದ್ದಾರೆ. ಕೆಲ ವಿದ್ಯಾರ್ಥಿನಿಯರು ನಮಗೆ ಧರ್ಮಕ್ಕಿಂತ ಶಿಕ್ಷಣ ಮುಖ್ಯ. ಹೀಗಾಗಿ ಹಿಜಾಬ್ ತೆಗೆದು ಪಾಠ ಕೇಳುತ್ತೇವೆ ಎಂದು ಹೇಳುತ್ತಿದ್ದಾರೆ.
ಉಡುಪಿಯಿಂದ ಆರಂಭವಾದ ಹಿಜಾಬ್ (Hijab) ವಿವಾದ ಇಡೀ ದೇಶವನ್ನೇ ವ್ಯಾಪಿಸಿದೆ. ಶಾಲೆ- ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ಹೈಕೊರ್ಟ್ನಲ್ಲಿ (High Court) ವಿಚಾರಣೆ ನಡೆಯುತ್ತಿದೆ. ತೀರ್ಪು ಬರುವವರೆಗೆ ವಿದ್ಯಾ ಮಂದಿರಕ್ಕೆ ಯಾವುದೇ ಧಾರ್ಮಿಕ ವಸ್ತ್ರಗಳನ್ನ ಧರಿಸುವಂತಿಲ್ಲ ಅಂತ ಕೋರ್ಟ್ ತಿಳಿಸಿದೆ. ಹೀಗಿದ್ದೂ, ರಾಜ್ಯದ ಹಲವೆಡೆ ಇದು ನಮ್ಮ ಧಾರ್ಮಿಕ ಹಕ್ಕು. ನಾವು ಹಿಜಾಬ್ ಧರಿಸಿಯೇ ಪಾಠ ಕೇಳುತ್ತೇವೆ ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಹಿಜಾಬ್ ಧರಿಸಲು ಅನುಮತಿಗೆ ಆಗ್ರಹಿಸಿ ಪ್ರತಿಭಟನೆಯೂ ನಡೆಸಿದ್ದಾರೆ. ಕೆಲ ವಿದ್ಯಾರ್ಥಿನಿಯರು ನಮಗೆ ಧರ್ಮಕ್ಕಿಂತ ಶಿಕ್ಷಣ ಮುಖ್ಯ. ಹೀಗಾಗಿ ಹಿಜಾಬ್ ತೆಗೆದು ಪಾಠ ಕೇಳುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಹಿಜಾಬ್ ನಮ್ಮ ಹಕ್ಕು. ಅದನ್ನು ತೆಗೆಯಲು ಯಾವುದೇ ಕಾರಣಕ್ಕೂ ಆಗಲ್ಲ ಅಂತ ಕಾಲೇಜುಗಳ ಮುಂದೆ ಧರಣಿ ನಡೆಸುತ್ತಿದ್ದಾರೆ. ಸದ್ಯ ಈ ಬಗ್ಗೆ ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಯಲಿದೆ.
LIVE NEWS & UPDATES
-
Karnataka Hijab Row Live: ಹಿಜಾಬ್ ವಿಚಾರವಾಗಿ ವಿದ್ಯಾರ್ಥಿನಿಯರಿಗೆ ಮುತಾಲಿಕ್ ಕಿವಿಮಾತು
ಬಾಗಲಕೋಟೆ: ರಾಜ್ಯದಲ್ಲಿ ತೀವ್ರಗೊಂಡಿರುವ ಹಿಜಾಬ್ ವಿವಾದ ಹಿನ್ನಲೆ ಎಲ್ಲ ರಾಜಕೀಯ ಪಕ್ಷಗಳು ಇದರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ ಎಂದು ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಆದರೆ, ದುರ್ದೈವ ಕೊರೊನಾದಿಂದ ಎರಡು ವರ್ಷ ಶಿಕ್ಷಣಕ್ಕೆ ತೊಂದ್ರೆ ಆಗಿತ್ತು. ಈಗ ಸುರಳಿತವಾಗಿ ಹೊರಟಿತ್ತು. ಆದರೆ, ಈ ಇಸ್ಲಾಮಿ ಶಕ್ತಿಗಳು ಪಿಎಫ್ ಐ, ಸಿಎಫ್ ಐ ಇವರಿಬ್ಬರೂ ವಿದ್ಯಾರ್ಜನೆ ಹಾಳು ಮಾಡಿದರು. ಈ ಬೆಳವಣಿಗೆ ಸರಿಯಲ್ಲ ಎಂದಿದ್ದಾರೆ. ನಾನು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹೇಳುವುದು ಇಷ್ಟೇ, ನಿಮ್ಮ ಹಿಂದೆ ಇರುವ ಇಸ್ಲಾಮಿಕ್ ಶಕ್ತಿಗೆ ಬೆಲೆ ಕೊಡದೇ ಶಿಕ್ಷಣಕ್ಕೆ ಮಹತ್ವ ಕೊಡಿ. ನಿಮಗೆ ಜಾಬ್ ಬೇಕಾದ್ರೆ ಹಿಜಾಬ್ ಕೇಳಲ್ಲ. ಜಾಬ್ ಗೆ ವಿದ್ಯ ಬೇಕಿದೆ, ಹಿಜಾಬ್ ಅಲ್ಲ. ಇದನ್ನ ಗಮನ ಕೊಡಿ. ನಿಮಗೆ ಧರ್ಮ ಅಲ್ಲ, ಜೀವನ, ಉಪಜೀವನ ಮುಖ್ಯ. ಇಲ್ಲಿ ಉನ್ನತ ಶಿಕ್ಷಣ ಪಡೆದು ಮಹಿಳೆಯರು ಫೈಲಟ್, ಐಎಎಸ್, ಐಪಿಎಸ್ ಪಡೆದು ಮೇಲೆ ಬರ್ತಿದ್ದಾರೆ. ಆದರೆ ನಿಮ್ಮನ್ನು ಹಿಂದೆ ಎಳೆಯುವವರಿಗೆ ಬಲಿಯಾಗಬೇಡಿ ಎಂದು ಹಿಜಾಬ್ ವಿಚಾರವಾಗಿ ಹಠಕ್ಕೆ ಬಿದ್ದಿರುವ ವಿದ್ಯಾರ್ಥಿನಿಯರಿಗೆ ಮುತಾಲಿಕ್ ಕಿವಿಮಾತು ಹೇಳಿದ್ದಾರೆ.
-
Karnataka Hijab Row Live: ಹಿಜಾಬ್ ಬಗ್ಗೆ ಈ ಹಂತದಲ್ಲಿ ನಾನು ಮಾತಾಡೋದು ಸರಿಯಲ್ಲ
ಬೆಂಗಳೂರು: ಹಿಜಾಬ್-ಕೇಸರಿ ಶಾಲು ವಿವಾದ ವಿಚಾರ ಕೋರ್ಟಿನಲ್ಲಿದೆ. ಅದರ ಬಗ್ಗೆ ಈ ಹಂತದಲ್ಲಿ ನಾನು ಮಾತಾಡೋದು ಸರಿಯಲ್ಲ. ಕೋರ್ಟ್ ತೀರ್ಪು ಬಂದ ಬಳಿಕ ಅದರ ಬಗ್ಗೆ ಮಾತಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ. ಸಚಿವ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಧರಣಿ ವಿಚಾರ ಕುರಿತು ಮಾತನಾಡಿದ ಅವರು, ಯಾರಿಗೂ ಉಪಯೋಗ ಆಗದ ವಿಚಾರ ಕಾಂಗ್ರೆಸ್ ಕೈಗೆತ್ತಿಕೊಂಡಿದೆ. ಕಾಂಗ್ರೆಸ್ ಜವಾಬ್ದಾರಿ ಇಲ್ಲದ ವಿರೋಧ ಪಕ್ಷ. ಅವರು ಜನರ ಹಣದಲ್ಲಿ ನಡೆಯುವ ಕಲಾಪದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಈಶ್ವರಪ್ಪ ಹೇಳಿಕೆ ಬಗ್ಗೆ ನಮ್ಮ ಪಕ್ಷದ ನಾಯಕರು ಮತ್ತು ಸಿಎಂ ಕೂಡಾ ಹೇಳಿದ್ದಾರೆ. ಸಚಿವ ಈಶ್ವರಪ್ಪ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ. ಅದರ ಬಗ್ಗೆ ನಾನು ಮಾತಾಡುವಂಥದ್ದೇನೂ ಇಲ್ಲ ಎಂದು ಹೇಳಿದ್ದಾರೆ.
-
Karnataka Hijab Row Live: ಪದವಿ ಪ್ರದಾನ ಕಾರ್ಯಕ್ರಮಕ್ಕೆ ಅಡ್ಡಿಯಾಗದ ಹಿಜಾಬ್
ಹಾಸನ: ಹಿಜಾಬ್ ವಿಚಾರಣೆ ಹಿನ್ನೆಲೆ ಮಧ್ಯೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿಗಳು ಪದವಿ ಹಾಗೂ ಗೋಲ್ಡ್ ಮೆಡಲ್ ಸ್ವೀಕರಿಸಿದ್ದು, ಪದವಿ ಪ್ರದಾನ ಕಾರ್ಯಕ್ರಮಕ್ಕೆ ಹಿಜಾಬ್ಯಿಂದ ಯಾವುದೇ ಅಡ್ಡಿಯಾಗಿಲ್ಲ. ನಗರದ ಸರ್ಕಾರಿ ಸ್ವಾಯತ್ತ ವಿಜ್ಞಾನ ಕಾಲೇಜಿನಲ್ಲಿ ಪದವಿ ಪ್ರದಾನ ಕಾರ್ಯಕ್ರಮ ನಡೆಸಲಾಯಿತು. ನೂರಾರು ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಮತ್ತು ಗೋಲ್ಡ್ ಮೆಡಲ್ನ್ನು ಇಸ್ರೋ ವಿಶ್ರಾಂತ ಅಧ್ಯಕ್ಷರಾದ ಡಾ.ಕಿರಣ್ ಕುಮಾರ್ ಎ.ಎಸ್ ಪದವಿ ಪ್ರದಾನ ಮಾಡಿದರು.
Karnataka Hijab Row Live: ಹಿಜಾಬ್ ಸಮಸ್ಯೆಗೆ ಪರಿಹಾರ ಕಂಡುಕೊಂಡ ಎಸ್.ಡಿ.ಎಂ ಸಿ
ಹಾಸನ: ಜಿಲ್ಲೆಯ ಬೇಲೂರು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಪೋಷಕರ ಸಭೆಯಲ್ಲಿ ಎಲ್ಲರ ಮನವೊಲಿಸಿ ಹಿಜಾಬ್ ತೆಗೆಯಲು ಎಸ್.ಡಿ.ಎಂ.ಸಿ ಸದಸ್ಯರು ಒಪ್ಪಿಸಿದ್ದಾರೆ. ಹಿಜಬ್ ಬದಲು ಶಾಲೆ ನಿರ್ಧಾರ ಮಾಡೋ ಬಣ್ಣದ ವೇಲ್ ಧರಿಸಲು ಅವಕಾಶ ನೀಡಿ ತೀರ್ಮಾನಿಸಲಾಗಿದೆ. ಶಾಲಾ ಕೊಠಡಿಯಲ್ಲಿ ವೇಲ್ ಹಾಕಿ ಕೂರಲು ಅವಕಾಶ ನೀಡಿ ಎಂದು ಮುಸ್ಲಿಂ ಪೋಷಕರು ಒತ್ತಾಯಿಸಿದ್ದರು. ಪ್ರೌಡಶಾಲಾ ವಿಭಾಗದ ಮಕ್ಕಳು ಹಿಜಾಬ್ ತೆಗೆದು ಶಾಲ್ ಹಾಕಿ ಬರಲು ಪೋಷಕರ ಒಪ್ಪಿಕೊಂಡಿದ್ದು, ಈ ಬಗ್ಗೆ ಎಸ್.ಡಿ.ಎಂ.ಸಿ ಅದ್ಯಕ್ಷರು ಹಾಗೂ ಪೋಷಕರು ಜಂಟಿ ಹೇಳಿಕೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ಹಿಜಬ್ ಧರಿಸಿ ಬರಲು ಅವಕಾಶ ಕೋರಿ ಮಕ್ಕಳು ಪ್ರತಿಭಟನೆ ನಡೆಸಿದ್ದರು. ಪರೀಕ್ಷೆ ಹಾಗೂ ಶಿಕ್ಷಣದ ದೃಷ್ಟಿಯಿಂದ ಪೋಷಕರು ಹಾಗು ಎಸ್.ಡಿ.ಎಂ.ಸಿ ಮಕ್ಕಳ ಮನವೊಲಿಸಿದ್ದು, ಎಲ್ಲರ ಒಪ್ಪಿಗೆಯಂತೆ ವೇಲ್ ಧರಿಸಿ ನಮ್ಮ ಮಕ್ಕಳು ಶಾಲೆ ಬರ್ತಾರೆ ಎಂದು ಪೋಷಕರು ಹೇಳಿದ್ದಾರೆ.
Karnataka Hijab Row Live: ಹಾಸನದಲ್ಲಿ ಇನ್ನೂ ಮಗಿಯದ ಹಿಜಾಬ್ ರಗಳೆ
ಹಾಸನ: ಜಿಲ್ಲೆಯಲ್ಲಿ ಹಿಜಾಬ್ ರಗಳೆ ಇನ್ನೂ ಮುಗಿಯದಂತ್ತಾಗಿದೆ. ಅರಸೀಕೆರೆ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ನಮಗೆ ಹಿಜಾಭ್ ಧರಿಸಲು ಅವಕಾಶ ಕೊಡಿ, ಇಲ್ಲವಾದ್ರೆ ಟಿಸಿ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಆವರಣದಲ್ಲಿ ಕುಳಿತು ವಿದ್ಯಾರ್ಥಿನಿಯರು ಅಸಮಾಧಾನ ಹೊರಹಾಕಿದ್ದು, ಅಲ್ಲಿಯೇ ಕೂತು ಓದಿನಲ್ಲಿ ನಿರತರಾಗಿದ್ದಾರೆ. ನೆನ್ನೆ ಕೂಡ ಹಿಜಾಬ್ ಧರಿಸಲು ಅವಕಾಶ ಕೋರಿ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದ್ದರು.
Karnataka Hijab Row Live: ಹಿಜಾಬ್ ವಿವಾದವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಒತ್ತಾಯ
ಚಿತ್ರದುರ್ಗ: ಹಿಜಾಬ್ ವಿವಾದವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಹಿಂದೆ ಷಡ್ಯಂತ್ರವಿದೆ. ಸಿಎಫ್ಐ, ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳು ವಿವಾದ ಸೃಷ್ಠಿಸಿವೆ ಎಂದು ಆರೋಪಿಸಿದ್ದಾರೆ.
Karnataka Hijab Row Live: ಹಿಜಾಬ್ ಧರಿಸಿಕೊಂಡೇ ಹೋಗಬೇಕೆಂದು ಹೇಳಿಲ್ಲ
ಬೆಂಗಳೂರು: ಹಿಜಾಬ್ ಧರಿಸಿಕೊಂಡೇ ಹೋಗಬೇಕೆಂದು ಹೇಳಿಲ್ಲ. ಹಿಜಾಬ್ ಧರಿಸಿದರೆ ಒಳ್ಳೆಯದು ಎಂದು ನಾವು ಹೇಳಿದ್ದೇವೆ ಎಂದು ಬೆಂಗಳೂರಿನಲ್ಲಿ ಮೌಲಾನಾ ಮಕ್ಸೂದ್ ಇಮ್ರಾನ್ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಸಂಘರ್ಷ ಬಿಟ್ಟು, ವಿದ್ಯಾಭ್ಯಾಸದ ಕಡೆ ಗಮನ ಕೊಡಿ. ವಿದ್ಯಾರ್ಥಿಗಳನ್ನು ರಸ್ತೆಯಲ್ಲಿ ನಿಲ್ಲಿಸುವ ಕೆಲಸ ಮಾಡಬೇಡಿ. ರಸ್ತೆಯಲ್ಲಿ ನಿಲ್ಲಿಸಿ ಹಿಜಾಬ್ ತೆಗೆಯಿರಿ ಅನ್ನೋದು ಸರಿಯಲ್ಲ ಎಂದು ಹೇಳಿದ್ದಾರೆ.
ಕೋರ್ಟ್ ಅಂತಿಮ ಆದೇಶ ಬರುವವರೆಗೂ ಮಕ್ಕಳಿಗೆ ಆನ್ಲೈನ್ ತರಗತಿ ನಡೆಸಬೇಕು- ಮೌಲಾನ ಸುಲೇಮಾನ್ ಖಾನ್ ಹೇಳಿಕೆ
ಕೋರ್ಟ್ ಹೇಳಿರುವ ಹಾಗೇ ತರಗತಿ ಒಳಗೆ ವಿದ್ಯಾರ್ಥಿಗಳು ಯಾವುದೇ ಧರ್ಮದ ವಸ್ತ್ರ ಧರಿಸಬಾರದು. ಅದನ್ನ ಪಾಲನೆ ಮಾಡಬೇಕು. ಕೋರ್ಟ್ ಅಂತಿಮ ಆದೇಶ ಬರುವವರೆಗೂ ಮಕ್ಕಳಿಗೆ ಆನ್ಲೈನ್ ತರಗತಿ ನಡೆಸಬೇಕು ಅಂತ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮೌಲಾನ ಸುಲೇಮಾನ್ ಖಾನ್ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನ ಮದುರೈ ಜಿಲ್ಲೆ ಮೇಲೂರಿನಲ್ಲಿ ಹಿಜಾಬ್ ವಿವಾದ
ತಮಿಳುನಾಡಿನ ಮದುರೈ ಜಿಲ್ಲೆ ಮೇಲೂರಿನಲ್ಲಿ ಹಿಜಾಬ್ ವಿವಾದ ಜೋರಾಗಿದೆ. ಮತ ಚಲಾಯಿಸಲು ಬಂದ ಮುಸ್ಲಿಂ ಮಹಿಳೆಯನ್ನು ತಡೆದು ಹಿಜಾಬ್ ತೆಗೆದು ಮತ ಚಲಾಯಿಸುಚಂತೆ ಒತ್ತಾಯಿಸಿದ್ದಾರೆ. ಹಿಜಾಬ್ ಕಿರಿಕ್ ಹಿನ್ನೆಲೆ ಕೆಲಕಾಲ ಮತದಾನ ಸ್ಥಗಿತವಾಗಿತ್ತು.
ಶಾಲಾ-ಕಾಲೇಜುಗಳಲ್ಲಿ ಹಿಂದೆ ಹೇಗಿತ್ತೋ ಹಾಗೆ ಡ್ರೆಸ್ ಕೋಡ್ ಮುಂದುವರೆಯಲಿ
ಶಾಲಾ-ಕಾಲೇಜುಗಳಲ್ಲಿ ಹಿಂದೆ ಹೇಗಿತ್ತೋ ಹಾಗೆ ಡ್ರೆಸ್ ಕೋಡ್ ಮುಂದುವರೆಯಲಿ. ಬಿಜೆಪಿ ತನ್ನ ಆಡಳಿತದ ವೈಫಲ್ಯ ಮರೆಮಾಚಲು ಭಾವನಾತ್ಮಕ ವಿಚಾರ ಎಳೆದು ತಂದಿದೆ ಅಂತ ಚಿಕ್ಕಮಗಳೂರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ರಾಜ್ಯ ಶಾಂತಿಯ ರಾಜ್ಯ ; ಕ್ರೈಸ್ತರ ಧರ್ಮದ ಫಾದರ್ ಮೌನೀಶ್ ಹೇಳಿಕೆ
ನಮ್ಮ ರಾಜ್ಯ ಶಾಂತಿಯ ರಾಜ್ಯ. ನಾವು ಶಾಂತಿ ಸಮಾಧಾನ ಕಾಪಾಡಬೇಕು. ನಾವು ದೇವಾಲಯಗಳನ್ನ ಕೆಡುವುದು ಮಾಡಬಾರದು. ಸರ್ಕಾರ ಯಾವುದೇ ಸಮುದಾಯಕ್ಕೆ ಧಕ್ಕೆ ಬಾರದಂತೆ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಅಂತ ಕ್ರೈಸ್ತರ ಧರ್ಮದ ಫಾದರ್ ಮೌನೀಶ್ ಹೇಳಿಕೆ. ನೀಡಿದ್ದಾರೆ.
ಭಾರತ ಅನೇಕ ಧರ್ಮ ಕೊಟ್ಟ ವಿಶ್ವ ಧರ್ಮಿ ನೆಲ; ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಹೇಳಿಕೆ
ಭಾರತ ಅನೇಕ ಧರ್ಮ ಕೊಟ್ಟ ವಿಶ್ವ ಧರ್ಮಿ ನೆಲ ಅಂತ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಹೇಳಿಕೆ ನೀಡಿದ್ದಾರೆ. ಭಾರತ ಜಾತ್ಯಾತೀತ ರಾಷ್ಟ್ರ. ಇತಿಹಾಸ ಅಧ್ಯಯನ ಮಾಡಿದಾಗ ಈರೀತಿಯ ಧರ್ಮ ಸಂಘರ್ಷ ಗೊತ್ತಾಗುತ್ತೆ. ಆದ್ರೂ ಇದು ಸಹಿಷ್ಣು ರಾಷ್ಟ್ರ. ನಮ್ಮನೆಯಲ್ಲಿ ನಾನೊಬ್ಬ ಜಾತಿಯವ. ಹೊರಗೆ ಬಂದಾಗ ನಾವು ಭಾರತೀಯ. ನಮಗೆ ವಿಶ್ವಾಸ ಇದೆ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ಇದಕ್ಕೆ ಪರಿಹಾರ ಇದೆ. ಭಾರತದಲ್ಲಿ ಸಹೋದರರಾಗಿ ಬಾಳ್ತಿದ್ದೇವೆ. ಮೊದಲು ಶಾಂತಿ ವಿದ್ಯಾಲಯ, ಮನಸುಗಳಲ್ಲಿ ನೆಲಸಬೇಕು. ತಾಳ್ಮೆ ಶಾಂತಿ ಕಾಪಾಡಿಕೊಳ್ಳಬೇಕು. ಸಂಘರ್ಷ ಜಾಸ್ತಿಯಾದರೆ ಆನ್ಲೈನ್ ಮೊರೆಹೋಗಬಹುದು. ಏನೇ ಆದ್ರು ಶೈಕ್ಷಣಿಕ ವಿಚಾರಕ್ಕೆ ಯಾವುದೇ ತೊಂದರೆ ಆರಬಾರದು ಅಂತ ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಹೇಳಿಕೆ ನೀಡಿದ್ದಾರೆ.
ಎಲ್ಲಾ ಶಾಲೆಗಳ ಮುಂದೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದೆ- ಮಾದಾರ ಚನ್ನಯ್ಯ ಹೇಳಿಕೆ
ಎಲ್ಲಾ ಶಾಲೆಗಳ ಮುಂದೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಆಗಿದೆ ಅಂತ ಮಾದಾರ ಚನ್ನಯ್ಯ ಹೇಳಿಕೆ ನೀಡಿದ್ದಾರೆ. ಹೈಕೋರ್ಟ್ ಆದೇಶ ಬರುವವರೆಗೂ ಎಲ್ಲರೂ ಶಾಂತಿಯುತ ವಾಗಿರಬೇಕು. ಪ್ರಸ್ತುತ ಸಂದರ್ಭದಲ್ಲಿ ಶಾಲೆಗಳ ಮುಂದೆ ಪ್ರಕ್ಷುಬ್ಧ ವಾತಾವರಣ ಇದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಂಗದ ತೀರ್ಪು ಬರೋವರೆಗೂ ನಮ್ಮ ವಿದ್ಯಾರ್ಥಿಗಳಿಗೆ ಶಾಂತಿಗೆ ಕರೆ ಕೊಡಬೇಕು. ಮಕ್ಕಳು ಒಬ್ಬರಿಗೊಬ್ಬರು ವಿಶ್ವಾಸದಲ್ಲಿರಬೇಕು. ಈ ಬಗ್ಗೆ ಧರ್ಮ ಗುರುಗಳು ಕರೆಕೊಡಬೇಕು ಅಂತ ಹೇಳಿದರು.
ನಾವು ಓದುವಾಗ ಇದು ಇರಲಿಲ್ಲ; ವಚನಾನಂದ ಸ್ವಾಮೀಜಿ ಹೇಳಿಕೆ
ರಾಜಕಾರಣ ಬಂದಲ್ಲಿ ಇದು ಆರಂಭ ಆಗುತ್ತೆ. ನಾವು ಓದುವಾಗ ಇದು ಇರಲಿಲ್ಲ. ನಮ್ಮ ಬದುಕು ಶಿಕ್ಷಣ ಬಹಳ ಮುಖ್ಯ. ಸಮವಸ್ತ್ರ ಅಂದರೆ ಎಲ್ಲರೂ ಸಮಾನವಾಗಿ ಇರಬೇಕು. ಆ ಧರ್ಮ, ಈ ಜಾತಿ ಎಲ್ಲವೂ ಹೋಗಬೇಕು ಅಂತಾನೆ ಸಮವಸ್ತ್ರ ತಂದಿದ್ದಾರೆ. ನಾವು ಶಾಲೆಯಲ್ಲಿ ಧರಿಸುವಂತ ಸಮವಸ್ತ್ರ ಆಗಿರಬೇಕು. ನಮ್ಮಲ್ಲಿ ಆಗ ಸಂಬಂಧಿಕರಾಗಿ ಇರ್ತಿದ್ವಿ, ಈಗ ಇದೂ ಎಲ್ಲಿಂದಾ ಬಂದಿದ್ಯೋ ಗೊತ್ತಿಲ್ಲ. ಮಕ್ಕಳಲ್ಲಿ ಧರ್ಮವನ್ನು ತುಂಬಬೇಡಿ. ಈಗಾಗಲೇ ಕೊರ್ಟ್ ಆದೇಶ ಪಾಲಿಸಿಕೊಂಡು ಶಾಲಾ ಕಾಲೇಜುಗಳಿಗೆ ಹೋಗಿ ಎಂಬುವುದು ನನ್ನ ಅಭಿಪ್ರಾಯ ಅಂತ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದರು.
ನಾವೆಲ್ಲ ಕರ್ನಾಟಕದಲ್ಲಿ ಇದ್ದೇವೆ, ನಮ್ಮ ರಾಜ್ಯದಲ್ಲಿ ಶಾಂತಿ ಕಾಪಾಡಬೇಕು; ಮೌಲಾನ ತನ್ವೀರ್ ಹಾಶ್ನಿಪೀರ ಹೇಳಿಕೆ
ನಾವೆಲ್ಲ ಕರ್ನಾಟಕದಲ್ಲಿ ಇದ್ದೇವೆ, ನಮ್ಮ ರಾಜ್ಯದಲ್ಲಿ ಶಾಂತಿ ಕಾಪಾಡಬೇಕು ಅಂತ ಮೌಲಾನ ತನ್ವೀರ್ ಹಾಶ್ನಿಪೀರ ಹೇಳಿಕೆ ನೀಡಿದ್ದಾರೆ. ಎಲ್ಲಾ ಧರ್ಮದವರೂ ತುಂಬಾ ಸಂತೋಷದಿಂದ ಪ್ರೀತಿಯಿಂದ ಇರ್ತೇವೆ. ನಮ್ಮ ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿವಾದವನ್ನ ತಗ್ಗಿಸಲು ನಾವೆಲ್ಲ ಸೇರಿದ್ದೇವೆ. ಮುಸ್ಲಿಂ ವಿದ್ಯಾರ್ಥಿನಿಯರು ನಿನ್ನೆ ಮೊನ್ನೆಯಿಂದ ಹಿಜಾಬ್ ಬಳಕೆ ಮಾಡ್ತಿಲ್ಲ. ಬೇರೆ ಬೇರೆ ಧರ್ಮದವರು ಅವರ ಅವರ ಧಾರ್ಮಿಕ ಆಚರಣೆ ಮಾಡ್ತಿದ್ದಾರೆ. ಇದಕ್ಕೆ ಯಾರು ವಿರೋಧ ಮಾಡಬಾರದು. ಎಲ್ಲರೂ ಶಾಂತಿಯೂತವಾಗಿ ಇರಬೇಕು, ಶಾಂತಿಯುತ ಇರಬೇಕು. ನಮ್ಮ ರಾಜ್ಯವನ್ನ ಬಸವಣ್ಣನವರ ಹೆಸರಲ್ಲಿ ಕರೆಯುತ್ತಾರೆ. ನಮ್ಮ ರಾಜ್ಯ ಶಾಂತಿಯುತ ನಾಡು, ಯಾರೋ ಕೆಲವರು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಅಂತ ಅವರು ಹೇಳಿದರು.
ನಿಷೇಧಾಜ್ಞೆ ವಿಧಿಸಿದ್ದ ಪ್ರದೇಶದಲ್ಲಿ ಖಡ್ಗ ಹಿಡಿದು ಮೆರವಣಿಗೆ ಮಾಡಿದ ಯುವಕರು
ಹಿಜಾಬ್- ಕೇಸರಿ ಶಾಲು ವಿವಾದದ ಮಧ್ಯೆ ಸರಳಾದೇವಿ ಕಾಲೇಜು ಮುಂಭಾಗದಲ್ಲಿ ಖಡ್ಗ ಹಿಡಿದು ಯುವಕರು ಮೆರವಣಿಗೆ ಮಾಡಿದ್ದಾರೆ. ನಿಷೇದಾಜ್ಞೆ ಜಾರಿ ಇರುವ ಪ್ರದೇಶದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಹಿಂದೂ ಜಾಗರಣಾ ವೇದಿಕೆಯಿಂದ ಬೈಕ್ ಹಾಗೂ ಕಾರಿನಲ್ಲಿ ಮೆರವಣಿಗೆ ಮಾಡಿದ್ದಾರೆ.
ಪದವಿ ಪ್ರದಾನ ಕಾರ್ಯಕ್ರಮಕ್ಕೆ ಅಡ್ಡಿಯಾಗದ ಹಿಜಾಬ್
ಹಾಸನದ ಸರ್ಕಾರಿ ಸ್ವಾಯತ್ತ ವಿಜ್ಞಾನ ಕಾಲೇಜಿನಲ್ಲಿ ಪದವಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ. ಹಿಜಾಬ್ ಧರಿಸಿಯೇ ವಿದ್ಯಾರ್ಥಿಗಳು ಪದವಿ ಹಾಗೂ ಗೋಲ್ಡ್ ಮೆಡಲ್ ಸ್ವೀಕರಿಸಿದ್ದಾರೆ. ಇಂದು ನೂರಾರು ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಮತ್ತು ಗೋಲ್ಡ್ ಮೆಡಲ್ ಪ್ರದಾನ ಮಾಡಲಾಗಿದೆ. ಇಸ್ರೋ ವಿಶ್ರಾಂತ ಅಧ್ಯಕ್ಷರಾದ ಡಾ.ಕಿರಣ್ ಕುಮಾರ್ ಎ.ಎಸ್. ಪದವಿ ಪ್ರದಾನ ಮಾಡಿದ್ದಾರೆ.
ಮಕ್ಕಳಲ್ಲಿ ಧರ್ಮವನ್ನು ತುಂಬಬೇಡಿ: ವಚನಾನಂದ ಸ್ವಾಮೀಜಿ
ರಾಜಕಾರಣ ಬಂದಲ್ಲಿ ಇದು ಆರಂಭ ಆಗುತ್ತದೆ. ನಾವು ಓದುವಾಗ ಇದು ಇರಲಿಲ್ಲ. ನಮ್ಮ ಬದುಕು ಶಿಕ್ಷಣ ಬಹಳ ಮುಖ್ಯ. ಸಮವಸ್ತ್ರ ಅಂದರೆ ಎಲ್ಲರೂ ಸಮಾನವಾಗಿ ಇರಬೇಕು. ಆ ಧರ್ಮ, ಈ ಜಾತಿ ಎಲ್ಲವೂ ಹೋಗಬೇಕು ಅಂತಾನೆ ಸಮವಸ್ತ್ರ ತಂದಿದ್ದಾರೆ. ನಾವು ಶಾಲೆಯಲ್ಲಿ ಧರಿಸುವಂತ ಸಮವಸ್ತ್ರ ಆಗಿರಬೇಕು. ನಮ್ಮಲ್ಲಿ ಆಗ ಸಂಬಂಧಿಕರಾಗಿ ಇರುತ್ತಿದ್ದೀವಿ. ಈಗ ಇದೂ ಎಲ್ಲಿಂದಾ ಬಂದಿದ್ಯೋ ಗೊತ್ತಿಲ್ಲ. ಮಕ್ಕಳಲ್ಲಿ ಧರ್ಮವನ್ನು ತುಂಬಬೇಡಿ. ಈಗಾಗಲೇ ಕೊರ್ಟ್ ಆದೇಶ ಪಾಲಿಸಿಕೊಂಡು ಶಾಲಾ ಕಾಲೇಜುಗಳಿಗೆ ಹೋಗಿ ಎಂಬುವುದು ನನ್ನ ಅಭಿಪ್ರಾಯ ಎಂದು ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ತನ್ನ ಆಡಳಿತದ ವೈಫಲ್ಯ ಮರೆಮಾಚಲು ಭಾವನಾತ್ಮಕ ವಿಚಾರ ಎಳೆದು ತಂದಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್
ಶಾಲಾ-ಕಾಲೇಜುಗಳಲ್ಲಿ ಹಿಂದೆ ಹೇಗಿತ್ತೋ ಹಾಗೆ ಡ್ರೆಸ್ ಕೊಡ್ ಮುಂದುವರೆಯಲಿ. ಬಿಜೆಪಿ ತನ್ನ ಆಡಳಿತದ ವೈಫಲ್ಯ ಮರೆಮಾಚಲು ಭಾವನಾತ್ಮಕ ವಿಚಾರ ಎಳೆದು ತಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಅದನ್ನು ನೋಡಿ ಭಾವನಾತ್ಮಕ ವಿಚಾರ ಹುಟ್ಟುಹಾಕಿದ್ದಾರೆ ಎಂದು ಚಿಕ್ಕಮಗಳೂರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಕಾಂಗ್ರೆಸ್ ಕಲಾಪ ಹಾಳು ಮಾಡುತ್ತಿದ್ದಾರೆ ಎನ್ನುವ ಹೆಚ್ಡಿಕೆ ಆರೋಪಕ್ಕೆ ಟಾಂಗ್ ನೀಡಿದ್ದಾರೆ.
ಎಸ್ಜೆಎಮ್ ವುಮೆನ್ಸ್ ಕಾಲೇಜಿಗೆ ಬುರುಕಾ ಧರಿಸಿ ಬಂದ ವಿದ್ಯಾರ್ಥಿಗಳು
ಕೋರ್ಟ್ ಮಧ್ಯಂತರ ಆದೇಶ ಪಾಲನೆಗೆ ಸಿಬ್ಬಂದಿ ಸೂಚನೆ ನೀಡಿದರೂ ಕೇಳದ ಎಸ್ಜೆಎಮ್ ವುಮೆನ್ಸ್ ಕಾಲೇಜಿನ ವಿದ್ಯಾರ್ಥಿಗಳು ಬುರುಕಾ ಧರಿಸಿ ಬಂದಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ಸಿಪಿಐ ನಯುಮ್ ಭೇಟಿ ನೀಡಿದ್ದಾರೆ. ಕಾಲೇಜು ಪ್ರಾಂಶುಪಾಲರು ಬೆದರಿಸುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಕೊನೆಗೆ ಕೋರ್ಟ್ ಮಧ್ಯಂತರ ಆದೇಶ ಪಾಲಿಸಿ ಕಾಲೇಜಿಗೆ ತೆರಳಿ, ಇಲ್ಲವಾದಲ್ಲಿ ಮನೆಗೆ ಹೋಗಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರು
ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಹಿಜಾಬ್ ಸಂಘರ್ಷ. ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ದಾರೆ. ತರಗತಿಯೊಳಗೆ ಹಿಜಾಬ್‌ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಕೊನೆಗೆ ಶಾಲೆಯ ಮೈದಾನದಲ್ಲಿ ಕುಳಿತು ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹಿಜಾಬ್ ಧರಿಸುವುದು ವೈಜ್ಞಾನಿಕವಲ್ಲ, ಅವೈಜ್ಞಾನಿಕ: ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್
ಹಿಜಾಬ್ ಧರಿಸುವುದು ವೈಜ್ಞಾನಿಕವಲ್ಲ, ಅವೈಜ್ಞಾನಿಕ. ಭಾರತ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ. ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ ತೋರಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಹಿಜಾಬ್‌ಗಾಗಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು
ಬಳ್ಳಾರಿ ಸರಳಾದೇವಿ ಕಾಲೇಜು ಪಕ್ಕದ ಮೈದಾನದಲ್ಲಿ ವಿದ್ಯಾರ್ಥಿನಿಯರು ಜಮಾಯಿಸಿದ್ದಾರೆ. ಮನೆಗೆ ಹೋಗಿ ಇಲ್ಲಾ ತರಗತಿಗೆ ಹೋಗುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಪೊಲೀಸರ ಮನವಿಯನ್ನು ಲೆಕ್ಕಿಸದ ವಿದ್ಯಾರ್ಥಿನಿಯರು, ನಮಗೆ ಡಿಸ್ಟರ್ಬ್ ಮಾಡಬೇಡಿ ಹೋಗಿ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ನಿಷೇದಾಜ್ಞೆ ಮಧ್ಯೆ ಕಾಲೇಜು ಗೋಡೆ ಮೇಲೆ ಅಕ್ಷೇಪಾರ್ಹ ಬರಹ ಬರೆದ ಎಐಡಿಎಸ್ಒ ಸಂಘಟನೆ
ಬಳ್ಳಾರಿಯ ಸರಳಾದೇವಿ ಕಾಲೇಜು ಗೋಡೆ ಮೇಲೆ ಎಐಡಿಎಸ್ಒ ಸಂಘಟನೆಯ ಕಾರ್ಯಕರ್ತರು ಕೈ ಬರಹ ಬರೆದಿದ್ದಾರೆ. ಧರ್ಮ ನಿರಪೇಕ್ಷಣಾ ಶಿಕ್ಷಣ ಬೇಕು. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶಿಕ್ಷಣ ಬೇಕು. ಧರ್ಮವನ್ನು ಶಿಕ್ಷಣ ಹಾಗೂ ರಾಜಕೀಯದಿಂದ ಸಂಪೂರ್ಣವಾಗಿ ದೂರವಿಡಬೇಕು. ಧರ್ಮವು ಕೇವಲ ವೈಯಕ್ತಿಕ ನಂಬಿಕೆಗೆ ಸೀಮಿತವಾಗಿರಬೇಕು -ನೇತಾಜಿ. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ರ ಕನಸು ನನಸು ಮಾಡಿ ಎಂದು ಬರೆದಿದ್ದಾರೆ. ಸದ್ಯ ಗಾಂಧಿನಗರ ಪೊಲೀಸರು ಈ ಕೈ ಬರಹ ಅಳಿಸಿ ಹಾಕಿದ್ದಾರೆ.
ಯಾದಗಿರಿಯಲ್ಲಿ ಇಂದು ಕೂಡ ಮುಂದುವರೆದ ಹಿಜಾಬ್ ವಿವಾದ
ಯಾದಗಿರಿ ನಗರದ ನ್ಯೂ ಕನ್ನಡ ಪಿಯು ಕಾಲೇಜಿಗೆ ಹಿಜಾಬ್ ಧರಿಸಿ ಇವತ್ತು ಕೂಡ ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಹಿಜಾಬ್ ಧರಿಸಿಯೇ ಕ್ಲಾಸ್ ಕುಳಿತುಕೊಳ್ಳುವುದಾಗಿ 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಮಾತುಕತೆಗೆ ಕಾಲೇಜಿನ ಒಳಗೆ ಕರೆದುಕೊಂಡು ಹೋದ ಪ್ರಾಂಶುಪಾಲ, ವಿದ್ಯಾರ್ಥಿನಿಯರಿಗೆ ಮನವೋಲಿಸಲು ಪ್ರಯತ್ನಿಸಿದ್ದಾರೆ.
ತರಗತಿಯೊಳಗೆ ಹಿಜಾಬ್‌ಗೆ ಅನುಮತಿ ನೀಡುವಂತೆ ಪಟ್ಟು
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಎಸ್‌ಜೆವಿಪಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಯೊಳಗೆ ಹಿಜಾಬ್‌ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಪೊಲೀಸರು, ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೂ ಕೂಡ ಮನವೊಲಿಕೆಗೆ ಜಗ್ಗದ ಪದವಿ ಕಾಲೇಜಿನ ವಿದ್ಯಾರ್ಥಿಗಳು, ನಾವು ಕಾಲೇಜು ಶುಲ್ಕವನ್ನು ಪಾವತಿ ಮಾಡಿದ್ದೇವೆ. ನಮಗೆ ಪಾಠ ಕೇಳುವುದಕ್ಕೆ ಅವಕಾಶ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.
ಸಮವಸ್ತ್ರ ಧರಿಸದೆ ಬಂದರೆ 200 ರೂಪಾಯಿ ದಂಡ
ಸಮವಸ್ತ್ರ ಧರಿಸದೆ ಬಂದರೆ 200 ರೂಪಾಯಿ ದಂಡ ಪಾವತಿಸಬೇಕು ಅಂತ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಕಾಲೇಜು ಆಡಳಿತ ಮಂಡಳಿ ನೋಟೀಸ್ ಹಾಕಿದೆ.
ಹಿಜಾಬ್‌ಗಾಗಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು
ಹಿಜಾಬ್‌ಗಾಗಿ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ. ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದಾರೆ. ಮನೆಗೆ ಹೋಗಿ ಇಲ್ಲಾ ತರಗತಿಗೆ ಹೋಗುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಪೊಲೀಸರ ಮನವಿಯನ್ನು ವಿದ್ಯಾರ್ಥಿನಿಯರು ಲೆಕ್ಕಿಸುತ್ತಿಲ್ಲ.
ಶಾಲಾ ಕಾಲೇಜಿಗೆ ಹೊರಗಿನವರು ಹೋಗಬಾರದು; ಸಿಎಂ ಬಸವರಾಜ ಬೊಮ್ಮಾಯಿ
ಶಾಲಾ ಕಾಲೇಜಿಗೆ ಹೊರಗಿನವರು ಹೋಗಬಾರದು. ಕಾಲೇಜು ಆಡಳಿತ ಮಂಡಳಿ ಎಲ್ಲವನ್ನೂ ನಿಭಾಯಿಸುತ್ತದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಹಿಜಾಬ್ ವಿವಾದ ಸಂಬಂಧ ಎಲ್ಲ ಮಾಹಿತಿ ಪಡೆಯುತ್ತೇನೆ ಅಂತ ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿ ಮುಂದುವರೆದ ಹಿಜಾಬ್ ವಿವಾದ
ರಾಮನಗರ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ. ಇಂದು ಸಹಾ ವಿದ್ಯಾರ್ಥಿನಿಯರು ಹಿಬಾಜ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಥಮ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿನಿಯರು ಹಿಜಾಬ್ ಸಮೇತ ಕಾಲೇಜಿಗೆ ಬಂದಿದ್ದಾರೆ. ಆದರೆ ಹಿಬಾಜ್ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿ ಅವಕಾಶ ನೀಡುತ್ತಿಲ್ಲ. ಶಾಲೆಯ ಮೈದಾನದ ಬಳಿ ವಿದ್ಯಾರ್ಥಿಗಳು ಕುಳಿತಿದ್ದಾರೆ. ಹಿಜಾಬ್ ಧರಿಸಿ ಪಾಠ ಕೇಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಗಂಗಾವತಿಯಲ್ಲಿ ತಾರಕ್ಕೇರಿದ ಹಿಜಾಬ್ ಸಂಘರ್ಷ
ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಕ್ಲಾಸ್ ರೂಂ ಗೆ ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿನಿಯರಿಗೆ ಕಾಲೇಜ್ ಸಿಬ್ಬಂದಿ ಕೋರ್ಟ್ ಆದೇಶ ತೋರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹಿಜಾಬ್ ತಗೆಯಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡದಿದ್ದಾರೆ. ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಗಂಗಾವತಿ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಹಿಜಾಬ್ ವಿವಾದದ ಹಿಂದೆ ಮತಾಂಧ ಶಕ್ತಿಗಳಿವೆ; ಗೃಹ ಸಚಿವ ಆರಗ ಜ್ಞಾನೇಂದ್ರ
ಹಿಜಾಬ್ ವಿವಾದದ ಹಿಂದೆ ಮತಾಂಧ ಶಕ್ತಿಗಳಿವೆ. ಮತಾಂಧ ಶಕ್ತಿಗಳಿಗೆ ಎಚ್ಚರಿಕೆ ನೀಡುವ ಕೆಲಸವಾಗ್ತಿದೆ. ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವವರನ್ನು ಬಿಡಲ್ಲ. ಕೆಲ ಮತಾಂಧ ಸಂಘಟನೆಳನ್ನು ನಿಷೇಧ ಮಾಡೋದಿಲ್ಲ. ಅಂತಹ ಸಂಘಟನೆಗಳನ್ನು ನಿರ್ಜೀವ ಮಾಡುತ್ತೇವೆ. ನಿರ್ಜೀವ ಮಾಡುವುದಕ್ಕೆ ಬೇಕಾದ ಕೆಲಸ ಮಾಡುತ್ತೇವೆ ಅಂತ ಕಲಬುರಗಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಸಮವಸ್ತ್ರ ಅಂದ್ರೆ ಅದು ಸಮಾನತೆ; ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ
ಕೆಲ ಶಾಸಕರು ನನ್ನ ಭೇಟಿ ಮಾಡಿ ಮನವಿ ನೀಡಿದ್ದಾರೆ. ಈ ಸ್ಥಿತಿಯಿಂದ ನಮ್ಮ ಮಕ್ಕಳನ್ನು ಹೊರ ತರಬೇಕಿದೆ. ಸಮವಸ್ತ್ರ ಅಂದ್ರೆ ಅದು ಸಮಾನತೆ. ಸಂಸ್ಕಾರ ತುಂಬುವ ಕೆಲಸವಾಗಬೇಕು. ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಬೇರೆ ಬೇರೆ ಅನ್ನೋದನ್ನು ತೋರಿಸುವುದಾಗಬಾರದು. ಕೋರ್ಟ್ ಪ್ರಕಾರ ನಡೆದುಕೊಳ್ಳಬೇಕು. ಅದರ ವಿರೋಧವಾಗಿ ಹೋಗವನರನ್ನು ಖಂಡಿಸಬೇಕು. ಕೆಲ ಬೆರಳೆಣಿಕೆಯಷ್ಟು ಕಾಲೇಜಿನಲ್ಲಿ ಮಾತ್ರ ವಿವಾದವಿದೆ. ಕಾಲೇಜು ಸುತ್ತ ನಿಷೇದಾಜ್ಞೆ ಜಾರಿ ಮಾಡಿದ್ದಾರೆ. ಅದನ್ನು ಮೀರಿ ಶಾಂತಿ ಭಂಗ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅತಿರೇಕಕ್ಕೆ ಹೋದ್ರೆ ಸುಮ್ಮನಿರಲು ಆಗಲ್ಲ. ಹಿಜಾಬ್ ವಿವಾದ ಹಿಂದೆ ಮತಾಂದ ಶಕ್ತಿಗಳು ಸೇರಿಕೊಂಡಿವೆ. ಅವರಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಲಾಗಿದೆ. ಮಕ್ಕಳ ಮನಸಲ್ಲಿ ಮತಾಂದ ವಿಷ ಬೀಜ ಬಿತ್ತುವವರವರನ್ನು ಹಾಗೆ ಬಿಡಲ್ಲ ಅಂತ ಕಲಬುರಗಿ ನಗರದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಾಲ್ವರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿ ವಾಂಟ್ ಜಸ್ಟೀಸ್ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಾಬ್ ಮತ್ತು ಶಿಕ್ಷಣ ನಮಗೆ ಅಪ್ಪಅಮ್ಮನಂತೆ. ಇಬ್ಬರನ್ನೂ ಬಿಡಲು ನಮಗೆ ಆಗುವುದಿಲ್ಲ. ನಾವು ದೇವರನ್ನು ಬಿಟ್ಟು ಇನ್ನಾರಿಗೂ ಹೆದರುವುದಿಲ್ಲ. ಎಷ್ಟು ದಿನ ಅಂತ ಹೈಕೋರ್ಟ್ ಆದೇಶಕ್ಕೆ ನಾವು ಕಾಯಬೇಕು ಅಂತ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ. ಕಾಲೇಜು ಬಳಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.
ವಿದ್ಯಾರ್ಥಿಗಳ ಅಮಾನತ್ತು ಕುರಿತು ಮಾಹಿತಿ ಇಲ್ಲ; ಸಚಿವ ನಾರಾಯಣ ಗೌಡ ಹೇಳಿಕೆ
ಶಿರಾಳಕೊಪ್ಪದಲ್ಲಿ ವಿದ್ಯಾರ್ಥಿಗಳ ಅಮಾನತ್ತು ಕುರಿತು ಮಾಹಿತಿ ಇಲ್ಲ. ಮಾಹಿತಿ ಪಡೆದು ನಂತರ ಹೇಳುತ್ತೇನೆ ಅಂತ ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹೇಳಿಕೆ ನೀಡಿದ್ದಾರೆ.
ಇಂದು ಸ್ವಾಮೀಜಿಗಳು ಹಾಗೂ ಮೌಲಾನಗಳಿಂದ ಜಂಟಿ ಸುದ್ದಿಗೋಷ್ಠಿ
ಇಂದು ಸ್ವಾಮೀಜಿಗಳು ಹಾಗೂ ಮೌಲಾನಗಳಿಂದ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಇಂದು 12 ಗಂಟೆಗೆ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಾರೆ.
ಸಹಜ ಸ್ಥಿತಿಗೆ ಮರಳಿದ ಬಳ್ಳಾರಿಯ ಸರಳದೇವಿ ಕಾಲೇಜು ಪರಿಸ್ಥಿತಿ
ಬಳ್ಳಾರಿಯ ಸರಳದೇವಿ ಕಾಲೇಜು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಕೋರ್ಟ್ ಆದೇಶದಂತೆ ಕಾಲೇಜಿನ ಗೇಟ್ ವರೆಗೆ ಮಾತ್ರ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ನಂತರ ಬುರ್ಖಾ, ಹಿಜಾಬ್ ತಗೆದು ಕ್ಲಾಸ್ಗೆ ತೆರಳುತ್ತಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಮುಂದುವರೆದ ಹಿಜಾಬ್ ವಿವಾದ
ಚಿತ್ರದುರ್ಗ ನಗರದಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ. ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ. ಸರ್ಕಾರಿ ಪಿಯು ಕಾಲೇಜು ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಿಲ್ಲಾಧಿಕಾರಿ ಸೂಚನೆ ಮೆರೆಗೆ ಸಮವಸ್ತ್ರದಲ್ಲೇ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು
ರಾಯಚೂರು ಜಿಲ್ಲಾಧಿಕಾರಿ ಸೂಚನೆ ಮೆರೆಗೆ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲೇ ಕಾಲೇಜಿಗೆ ಬಂದಿದ್ದಾರೆ. ಹೈಕೋರ್ಟ್ ಆದೇಶ ಪಾಲಿಸುವಂತೆ ಸೂಚಿಸಿದ್ದ ರಾಯಚೂರು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದ್ದರು. ಆದೇಶದಂತೆ ವಿದ್ಯಾರ್ಥಿನಿಯರು ಹಿಜಾಬ್ ಬಿಟ್ಟು ಸಮವಸ್ತ್ರ ಧರಿಸಿ ಕಾಲೇಜಿಗೆ ಬರುಂದಿದ್ದಾರೆ.
ಹಿಜಾಬ್ ಧರಿಸುವುದರಿಂದ ಇವರಿಗೆ ಎನೂ ತೊಂದರೆ ಆಗುತ್ತಿದೆ; ವಿದ್ಯಾರ್ಥಿನಿ ಹೇಳಿಕೆ
ಯಾವ ಕಾರಣಕ್ಕೆ ಕಾಲೇಜು ರಜೆ ಘೋಷಣೆ ಮಾಡಿದ್ದಾರೆ. ಹಿಜಾಬ್ ಧರಿಸುವುದರಿಂದ ಇವರಿಗೆ ಎನೂ ತೊಂದರೆ ಆಗುತ್ತಿದೆ. ರಜೆ ಘೋಷಣೆ ಮಾಡಿದ್ರೂ ಎಲ್ಲರಿಗೂ ರಜೆ ನೀಡಲಿ. ನಮಗೆ ಹಾಜರಾತಿ ಕೂಡ ಕಾಲೇಜಿನವರು ನೀಡಬೇಕು ಅಂತಾ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಒತ್ತಾಯಿಸಿದ್ದಾಳೆ.
ಮುಂದಿನ ಆದೇಶದವರೆಗೂ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿಗೆ ರಜೆ ಘೋಷಣೆ
ಹಿಜಾಬ್ ತೆಗೆಯುವುದಕ್ಕೆ ವಿದ್ಯಾರ್ಥಿನಿಯರು ಒಪ್ಪದ ಹಿನ್ನೆಲೆ ಬೆಳಗಾವಿಯ ಪ್ಯಾರಾಮೆಡಿಕಲ್ ಕಾಲೇಜಿಗೆ ರಜೆ ನೀಡಲಾಗಿದೆ. ಮುಂದಿನ ಆದೇಶದವರೆಗೂ ಕಾಲೇಜಿಗೆ ಪ್ರಾಂಶುಪಾಲರು ರಜೆ ಘೋಷಣೆ ಮಾಡಿದ್ದಾರೆ.
ಶಿರಾಳಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ 58 ವಿದ್ಯಾರ್ಥಿಗಳು ಸಸ್ಪೆಂಡ್
ಶಿರಾಳಕೊಪ್ಪದಲ್ಲಿ ಹಿಜಾಬ್‌ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ 58 ವಿದ್ಯಾರ್ಥಿಗಳನ್ನ ಸಸ್ಪೆಂಡ್ ಮಾಡಲಾಗಿದೆ.
ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು; ರಾಜವಂಶಸ್ಥ ಯದುವೀರ್ ಒಡೆಯರ್
ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿರ್ಧಾರ ಕ್ಕೆ ಎಲ್ಲರೂ ಬದ್ದರಾಗಿರಬೇಕು ಅಂತ ರಾಜವಂಶಸ್ಥ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯ ಹಾಗೂ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಕಠಿಬದ್ದರಾಗಿ ಇರಬೇಕು. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ ಎಂದರು.
ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ಸಸ್ಪೆಂಡ್
ಶಿರಾಳಕೊಪ್ಪದಲ್ಲಿ ಹಿಜಾಬ್‌ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನ ಸಸ್ಪೆಂಡ್ ಮಾಡಿರುವುದಾಗಿ ಕಾಲೇಜು ಪ್ರಿನ್ಸಿಪಾಲ್ ಮಾಹಿತಿ ನೀಡಿದ್ದಾರೆ.
ಪ್ಯಾರಾಮೆಡಿಕಲ್ ಕಾಲೇಜು ಮುಂದೆ ಭಾರಿ ಹೈಡ್ರಾಮಾ
ಬೆಳಗಾವಿಯ ಪ್ಯಾರಾಮೆಡಿಕಲ್ ಕಾಲೇಜು ಮುಂದೆ ಭಾರಿ ಹೈಡ್ರಾಮಾ ನಡೆಯುತ್ತಿದೆ. ಹಿಜಾಬ್‌ಗೆ ಅನುಮತಿ ನೀಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಹಿಜಾಬ್ ಧರಿಸಿಯೇ ನಾವು ತರಗತಿಯಲ್ಲಿ ಕುಳಿತುಕೊಳ್ತೇವೆ ಎಂದು ಹೇಳುತ್ತಿರವ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯಬೇಕೆಂದು ಪ್ರಾಂಶುಪಾಲರು ಮನವಿ ಮಾಡುತ್ತಿದ್ದಾರೆ. ಆದರೆ ಹಿಜಾಬ್ ತೆಗೆಯುವುದಕ್ಕೆ ವಿದ್ಯಾರ್ಥಿನಿಯರು ಒಪ್ಪುತ್ತಿಲ್ಲ.
ಶಾಲಾ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿಗಳ ಜೊತೆ ವಾಗ್ವಾ
ಶಿರಾಳಕೊಪ್ಪದಲ್ಲಿ ನಿನ್ನೆ ಹಿಜಾಬ್‌ಗಾಗಿ ಪ್ರತಿಭಟನೆ ನಡೆದಿದೆ. ಶಾಲಾ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿಗಳ ಜೊತೆ ವಾಗ್ವಾದ ನಡೆದಿತ್ತು. ಈ ನಡುವೆ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿರುವುದಾಗಿ ಪ್ರಿನ್ಸಿಪಾಲ್ ಹೇಳಿಕೆ ನೀಡಿದ್ದಾರೆ.
ಬುರ್ಖಾ, ಹಿಜಾಬ್ ಧರಿಸಿ ಒಟ್ಟಿಗೆ ಬಂದ 12ಜನ ವಿದ್ಯಾರ್ಥಿಗಳು
ಬೆಳಗಾವಿಯ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನ ಕೆಲ ವಿದ್ಯಾರ್ಥಿನಿಯರನ್ನ ಕಾಲೇಜಿನಿಂದ ಹೊರ ಕಳುಹಿಸಿದ ಹಿನ್ನೆಲೆ. ಸಹಪಾಠಿಗಳ ಜತೆಗೆ ವಿದ್ಯಾರ್ಥಿಗಳು ಬಂದಿದ್ದಾರೆ. ಬುರ್ಖಾ, ಹಿಜಾಬ್ ಧರಿಸಿ 12 ಜನ ವಿದ್ಯಾರ್ಥಿಗಳು ಒಟ್ಟಿಗೆ ಬಂದಿದ್ದಾರೆ. ಜತೆಗೆ ಬಂದಿದ್ದ ಪೋಷಕರನ್ನ ಪೊಲೀಸರು ಕಾಲೇಜು ಮೈದಾನದಲ್ಲೇ ವಾಪಾಸ್ ಕಳುಹಿಸಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ಗೇಟ್ ಬಳಿ ಬಂದು ನಿಂತಿದ್ದಾರೆ. ಹಿಜಾಬ್‌ಗೆ ಅನುಮತಿ ಕೋಟ್ರೇ ಒಳ ಬರುವುದಾಗಿ ಹೇಳುತ್ತಿರುವ ವಿದ್ಯಾರ್ಥಿನಿಯರು ಅನುಮತಿ ನೀಡದಿದ್ರೇ ಗೇಟ್ ಬಳಿ ಧರಣಿ ಮಾಡುವುದಾಗಿ ಹೇಳುತ್ತಿದ್ದಾರೆ.
ಶಿವಮೊಗ್ಗದಲ್ಲಿ ಇಂದೂ ಸಹ ಪ್ರತಿಭಟನೆ ಸಾಧ್ಯತೆ
ಹಿಜಾಬ್‌ಗಾಗಿ ಶಿವಮೊಗ್ಗದಲ್ಲಿ ಇಂದು ಕೂಡಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ನಿನ್ನೆ ಶಿವಮೊಗ್ಗ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್‌ಗಾಗಿ ಧರಣಿ ನಡೆಸಿದ್ದರು. ಶಿಕಾರಿಪುರ ತಾಲೂಕಿನ ಸರಕಾರ ಪಬ್ಲಿಕ್ ಶಾಲೆ ಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ಧರು. ನಿತ್ಯ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಅವಕಾಶ ಸಿಗದೇ ವಾಪಸ್ ಹೋಗಿದ್ದಾರೆ. ಇಂದು ಕೂಡಾ ಕೆಲ ಕಾಲೇಜ್ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಚಿತ್ರದುರ್ಗದ SRS ಕಾಲೇಜು ಬಳಿ ಪ್ರತಿಭಟನೆ ಸಾಧ್ಯ
ಹಿಜಾಬ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಚಿತ್ರದುರ್ಗದ SRS ಕಾಲೇಜು ಬಳಿ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕಾಲೇಜು ಬಳಿ ಪೊಲೀಸ್ ಭದ್ರತೆ ನೀಡಲಾಗಿದೆ.
ಬಳೆ, ಕುಂಕುಮ, ಸಿಂಧೂರ ವಸ್ತ್ರ ಸಂಹಿತೆಯ ಅಡಿಯಲ್ಲಿ ಬರುಲ್ಲ
ಬಳೆ, ಕುಂಕುಮ, ಸಿಂಧೂರ ವಸ್ತ್ರ ಸಂಹಿತೆಯ ಅಡಿಯಲ್ಲಿ ಬರುವುದಿಲ್ಲ. ಇದನ್ನು ಧರ್ಮದ ಆಧಾರದಲ್ಲಿ ಧಾರಣೆ ಮಾಡುವುದಿಲ್ಲ. ಕುಂಕುಮ, ಬಳೆ, ಸಿಂಧೂರ ಇವು ಸಂಸ್ಕೃತಿಯ ಸೂಚಕ. ಪರಂಪರೆಯ ಮತ್ತು ಭಾರತೀಯತೆಯ ಪ್ರತೀಕ. ಇವು ವೈಜ್ಞಾನಿಕವಾಗಿ ಧಾರಣೆ ಮಾಡುತ್ತಿದ್ದ ವಸ್ತುಗಳು. ಇದು ಧರ್ಮ ಗಡಿಯನ್ನು ಮೀರಿದ್ದು. ಇದಕ್ಕೂ ಧರ್ಮದ ಆಚರಣೆಗೂ ಸಂಬಂಧ ಇಲ್ಲ. ಹರಪ್ಪ ಮಹಂಜೋದಾರ್ ಕಾಲದಿಂದಲೂ ಈ ಸಂಸ್ಕೃತಿ ಜಾರಿಯಲ್ಲಿದೆ. 5 ಸಾವಿರ ವರ್ಷದಿಂದಲೂ ಇದನ್ನು ಧಾರಣೆ ಮಾಡಲಾಗುತ್ತಿದೆ. ಕುಂಕುಮ, ಬಳೆ, ಸಿಂಧೂರ ಹೂವು ಅಲಂಕಾರಿಕ ಹಾಗೂ ಸಂಸ್ಕೃತಿ ಬಿಂಬಿಸುವ ವಸ್ತುಗಳು. ಹರಪ್ಪಾ ಮಹಂಜೋದಾರ್ ಉತ್ಕಲನ ವೇಳೆಯೂ ಇದು ಸಾಬೀತಾಗಿದೆ. ಹೂವು ಬಳೆ ಕುಂಕುಮ ಕಾಲುಂಗುರು ಕೈ ಖಡ್ಗ ಸೇರಿ ಹಲವು ವಸ್ತುಗಳ ಕುರುಹು ಪತ್ತೆಯಾಗಿದೆ. ಸಂವಿಧಾನದ ಆಶಯದಲ್ಲಿ ಸಂಸ್ಕೃತಿ ಪರಂಪರೆ ರಕ್ಷಿಸುವುದು ಕರ್ತವ್ಯ ಎಂದು ಉಲ್ಲೇಖಿಸಲಾಗಿದೆ. ಇವು ಅದೇ ಸಂಸ್ಕೃತಿ ಪರಂಪರೆಯ ಅಡಿಯಲ್ಲಿ ಬರುತ್ತವೆ. ಇದರಿಂದಲೇ ಸಂಸ್ಕೃತಿ ಮತ್ತು ಪರಂಪರೆ ಇಲಾಖೆ ಇರುವುದು.
ಬಳ್ಳಾರಿಯ ಸರಳಾದೇವಿ ದೇವಿ ಕಾಲೇಜು ಸುತ್ತ ಸಿಸಿ ಕ್ಯಾಮಾರಾ ಅಳವಡಿಸಿದ ಜಿಲ್ಲಾಡಳಿತ
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆ ಬಳ್ಳಾರಿಯ ಸರಳಾದೇವಿ ದೇವಿ ಕಾಲೇಜು ಸುತ್ತ ಜಿಲ್ಲಾಡಳಿತ ಸಿಸಿ ಕ್ಯಾಮಾರಾ ಅಳವಡಿಸಿದೆ. ಕಳೆದ ರಾತ್ರಿ ಕಾಲೇಜು ಗೋಡೆ ಮೇಲೆ AIDSO ಸಂಘಟನೆ ಆಕ್ಷೇಪಾರ್ಹ ನುಡಿಗಳನ್ನ ಬರೆದಿದೆ. ಹೀಗಾಗಿ ಕಾಲೇಜು ಗೇಟ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದಾರೆ.
ರಾಜಕೀಯ ಕೆಸರೆರೆಚಾಟದ ಮಧ್ಯೆ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ- ಹನುಮಂತನಾಥ ಸ್ವಾಮಿಜಿ
ರಾಜಕೀಯ ಕೆಸರೆರೆಚಾಟದ ಮಧ್ಯೆ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಅಂತ ತುಮಕೂರು ಜಿಲ್ಲೆಯ ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ಮನವಿ ಮಾಡಿದ್ದಾರೆ. ಮಂಗಳೂರಿನಿಂದ ಆರಂಭವಾದ ಹಿಜಾಬ್ ಜ್ವಾಲೆ ಎಲ್ಲಾ ಶಾಲಾ ಕಾಲೇಜುಗಳಿಗೆ ಹಬ್ಬಿದೆ. ಧರ್ಮ ಧರ್ಮಗಳ ಮಧ್ಯೆ ಕಂದಕ ಸೃಷ್ಟಿ ಮಾಡೋ ಅಗತ್ಯತೆ ಇರಲಿಲ್ಲ. ಸಣ್ಣ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಅಬ್ಬಿಸೋದು ಕೆಟ್ಟ ಸಂಸ್ಕೃತಿ. ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಬದುಕೋ ದೇಶ ನಮ್ಮದು. ರಾಜಕೀಯ ಕೆಸರೆರೆಚಾಟದ ಮಧ್ಯ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡೋದು ಬೇಡ. ಕುಳಿತು ಬಗೆಹರೆಸುವ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ವಿಷ ಬೀಜ ಬಿತ್ತುವ ಕೆಲಸ ಯಾರು ಮಾಡಬಾರದು. ಕೋಟ್೯ ನಲ್ಲಿ ಒಳ್ಳೆಯ ತೀರ್ಪು ಹೊರಬೀಳುವ ಆಶಾ ಭಾವನೆ ಇದೆ. ಹಿಂದೂ ಮುಸ್ಲಿಂರಲ್ಲಿ ಮನವಿ ಮಾಡ್ತೀನಿ ಧರ್ಮ ಧರ್ಮಗಳಲ್ಲಿ ಕಂದಕ ಉಂಟು ಮಾಡೋದು ಬೇಡ. ಮಕ್ಕಳ ಶಿಕ್ಷಣದ ಜೊತೆಗೆ ರಾಜಕೀಯ ಬೆರೆಸಿ ಅವರ ಬದುಕು ಹಾಳು ಮಾಡೋದು ಬೇಡ. ಮಠಗಳಲ್ಲಿ ಯಾವ ಜಾತಿ ಅಂತಾ ಕೇಳದೆ ಶಿಕ್ಷಣ ಕೊಡುತ್ತಾ ಇರುತ್ತಾರೆ. ಯಾವತ್ತು ಕೂಡ ಅನ್ನ, ನೀರು, ಶಿಕ್ಷಣದಲ್ಲಿ ಜಾತಿವಾದಿಗಳಾಗಬಾರದು. ಹಿಜಾಬ್ನಿಂದಾಗಿ ಮಠಗಳ ಮಕ್ಕಳು ಮಕ್ಕಳು ನೋಡುವಂತಹ ರೀತಿ ಬೇರಾಗಿದೆ. ಹಿಂದೂ ಮುಸ್ಲಿಂರಲ್ಲಿ ಮನವಿ ಮಾಡ್ತೀನಿ ಧರ್ಮ, ಮಠಗಳ ಮಧ್ಯೆ ಬೆಂಕಿ ಹಚ್ಚೋ ಕೆಲಸ ಆಗೋದು ಬೇಡ. ಇವತ್ತು ಜಾತಿಯ ಕಿಚ್ಚು ಜ್ವಾಲೆಯಂತೆ ಹಬ್ಬಿದೆ. ಇದು ಮಕ್ಕಳಲ್ಲಿ ವಿಷ ಬೀಜ ಬಿತ್ತೋದು ಬೇಡ ಅಂತ ಹೇಳಿದರು.
ಪೊಲೀಸರೊಂದಿಗೆ ಚರ್ಚೆ ನಡೆಸಿದ ವಿಜಯ್ ಪ್ಯಾರಾಮೆಡಿಕಲ್ ಪ್ರಾಂಶುಪಾಲ
ಬೆಳಗಾವಿಯ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಪೊಲೀಸರೊಂದಿಗೆ ಚರ್ಚೆ ನಡೆಸಿದರು. ಇಂದು ಕೂಡ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸುವ ಹಿನ್ನೆಲೆ ಚರ್ಚೆ ನಡೆಸಿದ್ದಾರೆ.
ವಿಜಯಪುರದಲ್ಲಿ ಎಲ್ಲ ಶಾಲಾ-ಕಾಲೇಜುಗಳಿಗೆ ಭದ್ರತೆ
ವಿಜಯಪುರ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಭದ್ರತೆ ನೀಡಿಲಾಗಿದೆ. ವಿಜಯಪುರ ಜಿಲ್ಲೆಯ 225 ಪಿಯು ಕಾಲೇಜುಗಳು, 80 ಪದವಿ ಕಾಲೇಜುಗಳ ಬಳಿ ಪೊಲೀಸರಿಂದ ಭದ್ರತೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದೆ.
ಇಲ್ಲಿ ಸಚಿನ್ ತೆಂಡೂಲ್ಕರ್ ಯಾರಿದ್ದಾರೆ; ಅವರು ಕಲಿಯೋದು ಬೇಡ, ಹೋಗಿ ಪ್ರತಿಭಟಿಸಿ
ಹಿಜಾಬ್‌ಗೆ ಒತ್ತಾಯಿಸಿ ವಿದ್ಯಾರ್ಥಿನಿಯರು ಧರಣಿ ನಡೆಸುತ್ತಿರುವ ಹಿನ್ನೆಲೆ ಇಲ್ಲಿ ಸಚಿನ್ ತೆಂಡೂಲ್ಕರ್ ಯಾರಿದ್ದಾರೆ. ಅವರು ಕಲಿಯೋದು ಬೇಡ, ಹೋಗಿ ಪ್ರತಿಭಟಿಸಿ. ಉಳಿದವರು ದಯವಿಟ್ಟು ಕಲಿಯಬೇಕು, ಶಿಕ್ಷಣ ಮುಖ್ಯ ಅಂತ ರಾಯಚೂರು ಡಿಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿಕೆ ನೀಡಿದ್ದಾರೆ.
ಸಿಂಧೂರ, ತಿಲಕ ಧರಿಸಿದ ವಿದ್ಯಾರ್ಥಿಗಳನ್ನು ತಡೆಯುವಂತಿಲ್ಲ; ಶಿಕ್ಷಣ ಸಚಿವ ಬಿಸಿ ನಾಗೇಶ್
ತರಗತಿಗೆ ಸಿಂಧೂರ, ತಿಲಕ ಧರಿಸಿದ ವಿದ್ಯಾರ್ಥಿಗಳನ್ನು ತಡೆಯುವಂತಿಲ್ಲ ಅಂತ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ನೀಡಿದ್ದಾರೆ. ಸಿಂಧೂರ, ತಿಲಕ, ಬಿಂದಿ, ನಾಮ, ಬಳೆ ಸಿಂಗಾರದ ವಸ್ತುಗಳು. ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ನಿಲ್ಲಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಶಾಲೆಯ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ದೇಶದ ಸಂಸ್ಕೃತಿ, ಅಲಂಕಾರಿಕ ವಸ್ತುಗಳಿಗೆ ಕೈಹಾಕುವಂತಿಲ್ಲ.ಇದುವರೆಗೂ ಚರ್ಚೆ ನಡೆಯುತ್ತಿರೋದು ಸಮವಸ್ತ್ರದ ಬಗ್ಗೆ. ಅಲಂಕಾರಿಕ ವಸ್ತುಗಳ ಬಗ್ಗೆ ಮಾತನಾಡಿದ್ರೆ ಕ್ರಮವಹಿಸುತ್ತೇವೆ ಅಂತ ಬಿಸಿ ನಾಗೇಶ್ ಹೇಳಿದ್ದಾರೆ.
ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಿಂದ ಸ್ಟ್ರಿಕ್ಟ್ ಆರ್ಡರ್
ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಸ್ಟ್ರಿಕ್ಟ್ ಆರ್ಡರ್ ಮಾಡಿದ್ದಾರೆ. ಮುಸ್ಲಿಂ ಸಮುದಾಯದ ಮುಖಂಡರು, ಮೌಲಾನಾಗಳ ಜೊತೆ ಸಭೆ ನಡೆಸಿದ ಡಿಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಹೈಕೋರ್ಟ್ ಮಧ್ಯಂತರ ಅದೇಶದ ಬಗ್ಗೆ ಮನವರಿಕೆ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಿಜಾಬ್ ವಿಚಾದ ಜೋರಾಗಿದೆ. ಹೀಗಾಗಿ ಹೈಕೋರ್ಟ್ನಿಂದ ಅಂತಿಮ ಆದೇಶ ಬರೋವರೆಗೂ ಕಾಯುವಂತೆ ಸಲಹೆ ನೀಡಿದ್ದಾರೆ. ಧರ್ಮ ಗುರುಗಳು, ಮುಖಂಡರ ಮೂಲಕ ಸಮುದಾಯದವರಿಗೆ ತಿಳಿ ಹೇಳಲು ಸಲಹೆ ನೀಡಿದ್ದಾರೆ.
ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಸಂಘರ್ಷ
ಬೆಳಗಾವಿಯ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಸಂಘರ್ಷ ಮುಂದುವರಿದಿದೆ. ವಿದ್ಯಾರ್ಥಿನಿಯರಿಬ್ಬರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಹಿಜಾಬ್ ಧರಿಸಿಯೇ ತರಗತಿಯಲ್ಲೇ ಕುಳಿತಿದ್ದಾರೆ. 2 ದಿನಗಳಿಂದ ಹಿಜಾಬ್‌ಗೆ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಹೈಕೋರ್ಟ್ ಮಧ್ಯಂತರ ಆದೇಶ ಅನ್ವಯಿಸಲ್ಲ ಎಂದು ಹೇಳುತ್ತಿದ್ದಾರೆ.
Published On - Feb 19,2022 8:31 AM